ಶಂಕರಘಟ್ಟ ಡಿ. 19: ಮನುಷ್ಯನ ಆರೋಗ್ಯವನ್ನು ಸಮತೋಲನವಾಗಿಡಲು ದೈಹಿಕ ಚಟುವಟಿಕೆಗಳ ಜೊತೆಗೆ ಧ್ಯಾನದಂತಹ ಮಾನಸಿಕ ಚಟುವಟಿಕೆಗಳು ಅಗತ್ಯ ಎಂದು ಕುವೆಂಪು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ (ಪ್ರಭಾರ) ಪ್ರೊ. ಎಸ್ ವಿ. ಕೃಷ್ಣಮೂರ್ತಿ ಹೇಳಿದರು.
ಕುವೆಂಪು ವಿಶ್ವವಿದ್ಯಾಲಯದ ಆವರಣದಲ್ಲಿ ಟಿ.ಎಂ.ಎ.ಇ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ವಿಶ್ವವಿದ್ಯಾಲಯದ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ನಡೆದ ಪ್ರಕೃತಿ ಪರೀಕ್ಷೆ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು ಒತ್ತಡದ ಜೀವನ ನಡೆಸುವ ಹಾಗೂ ದಿನಪೂರ್ತಿ ಕುಳಿತು ಕೆಲಸ ನಿರ್ವಹಿಸುವ ಜನರ ದೇಹದಲ್ಲಿ ಬೊಜ್ಜು ಸಂಗ್ರಹಣೆ ಹೆಚ್ಚಾಗಿದೆ. ಅದು ದೇಹದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದರು.
ಟಿ.ಎಂ.ಎ.ಎ.ಎಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ನಾಗರಾಜ್ ಅಂಗಡಿ ಮಾತನಾಡಿ, ಕೇಂದ್ರ ಸರ್ಕಾರ ಮತ್ತು ಆಯುಷ್ ಮಂತ್ರಾಲಯದ ಅಡಿಯಲ್ಲಿ ಸಂವಿಧಾನ ದಿನವಾದ ನವೆಂಬರ್ 26ರಂದು ದೇಶದ ನಾಗರೀಕರಿಗೆ ಪ್ರಕೃತಿ ಪರೀಕ್ಷೆ ಅಭಿಯಾನವನ್ನು ಜಾರಿಗೆ ತಂದಿದೆ. ಆ ಅಭಿಯಾನದ ಅಂಗವಾಗಿ ಇಂದು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್.ಎಂ ಗೋಪಿನಾಥ್, ಶಿಕ್ಷಣ ನಿಕಾಯದ ಡೀನರಾದ ಪ್ರೊ. ಜಗನ್ನಾಥ್ ಕೆ ಡಾಂಗೆ, ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರೊ. ಎಂ.ಆರ್ ಸತ್ಯಪ್ರಕಾಶ್, ಟಿ.ಎಂ.ಎ.ಎ.ಎಸ್ ಕಾಲೇಜಿನ ಉಪನ್ಯಾಸಕರಾದ ಡಾ. ಅರ್ಪಿತ, ಡಾ. ಧಾತ್ರಿ, ಡಾ. ಸುಶ್ಮ, ಕುವೆಂಪು ವಿವಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ತಾರೇಶ್ ನಾಯ್ಕ್, ಡಾ. ಭೂಮಿಕ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ಪಣಿರಾಜ್, ವಂದನಾರ್ಪಣೆ ಡಾ. ಭೂಮಿಕ, ಪಾರ್ಥನೆ ಡಾ. ಕಾವ್ಯಶ್ರಿ ಮಾಡಿದರು.