ಶಿವಮೊಗ್ಗ : ಭದ್ರಾವತಿ ತಾಲೂಕಿನ ಆನವೇರಿಯ ಬಳಿಯ ಸನ್ಯಾಸಿಕೋಡಮಗ್ಗಿ ನಾಗಸಮುದ್ರದ ನಡುವೆ ಇಂದು ಬೆಳಗ್ಗೆ ಬೈಕ್ ಮತ್ತು ಕಾರ್ ಮಧ್ಯೆ ಆಕ್ಸಿಡೆಂಟ್ ಆಗಿದ್ದು, ಬೈಕ್ ಸವಾರ ಸ್ಥಳದಲ್ಲೇ ಮರಣ ಹೊಂದಿರುವುದಾಗಿ ಸ್ಥಳದಲ್ಲಿರುವ ಪ್ರತ್ಯಕ್ಷ ದರ್ಶಿಗಳು ತಿಳಿಸಿರುತ್ತಾರೆ.
ಹೊನ್ನಾಳಿ ಮೂಲದ 26 ವರುಷದ ಯುವಕ ಸನ್ಯಾಸಿ ಕೋಡಮಗ್ಗಿಯಲ್ಲಿ ಕೆಲಸ ಮಾಡುತ್ತಿದ್ದಾತ ಮೃತ ಪಟ್ಟವನಾಗಿದ್ದಾನೆ. ಬೈಕ್ ಹಿಂದೆ ಕುಳಿತಿದ್ದ ಮತ್ತೋರ್ವ ಕೋಡಮಗ್ಗಿಯ ಯುವಕ ಗಾಯಗೊಂಡಿದ್ದಾನೆ.
ಕ್ಯಾಂಟರ್ ಮತ್ತು ಬೈಕ್ ನಡುವೆ ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಸಾವು
ಶಿವಮೊಗ್ಗ ಇಂದು ಬೆಳಿಗ್ಗೆ ಭದ್ರಾವತಿ ತಾಲೂಕು ಆನವೇರಿ ಸಮೀಪ ಮಂಗೋಟೆ ಕ್ರಾಸ್ ಮತ್ತು ಮಲ್ಲಾಪುರದ ಮಧ್ಯೆ ಕ್ಯಾಂಟರ್ ಮತ್ತು ಬೈಕ್ ಮಧ್ಯ ಅಪಘಾತ ಸಂಬವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವು ಕಂಡ ಘಟನೆ ವರದಿಯಾಗಿದೆ.
ಹೊನ್ನಾಳಿ ತಾ. ಲಿಂಗಪುರದ ಮೂಲದ ಯುವಕ ಸಾವು ಕಂಡ ದುರ್ದೈವಿ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಚಾರಣೆ ಮುಂದುವರೆದಿದೆ.