ಶಿವಮೊಗ್ಗ:ಡಿ5 ವೆಂಕಟೇಶ ನಗರದಲ್ಲಿರುವ ಬಸವಕೇಂದ್ರದಲ್ಲಿ ಇಂದು ಚಿನ್ಮಯಾನುಗ್ರಹ ದೀಕ್ಷೆ ಪಡೆದ ಡಾ.ಶ್ರೀಬಸವಮರುಳ ಸಿದ್ಧ
ಸ್ವಾಮಿಜಿಗಳಿಗೆ ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ನೇತೃತ್ವದಲ್ಲಿ ಶಿವಮೊಗ್ಗ ನಗರ ಜೆಡಿಎಸ್ ಘಟಕದ ವತಿಯಿಂದ ಅಭಿನಂದಿಸಿ ಆಶೀರ್ವಾದ ಪಡೆಯಲಾಯಿತು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಶಿವಮೊಗ್ಗ ನಗರ ಜೆಡಿಎಸ್ ಅಧ್ಯಕ್ಷ ದೀಪಕ್ಸಿಂಗ್
, ಪ್ರಮುಖರಾದ ಮಾಜಿ ಪಾಲಿಕೆ ಸದಸ್ಯ ರಘುಬಾಲರಾಜ್, ಹೆಚ್.ಎಂ.ಸಂಗಯ್ಯ, ದಯಾನಂದ್ ಸಾಲಾಗಿ, ಮಾಧವಮೂರ್ತಿ, ಸುನೀಲ್ಗೌಡ, ಗೋವಿಂದರಾಜ್, ಗೋಪಿ ಮೊದಲಿಯಾರ್, ಪ್ರಫುಲ್ಲಾ, ರುದ್ರೇಶ್, ವೆಂಕಟೇಶ್, ನಿಖಿಲ್ ಇನ್ನಿತರರು ಹಾಜರಿದ್ದರು.