ಶಿವಮೊಗ್ಗ, ಡಿಸೆಂಬರ್ 05
ಗರ್ಭಧಾರಣೆ ಆದ ತಕ್ಷಣ ನಿಯಮಿತವಾಗಿ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಹುಟ್ಟಿನಿಂದ ಮಕ್ಕಳಿಗೆ ಬರಬಹುದಾದ ಅಂಗವಿಕಲತೆಯನ್ನು ತಡೆಯಬಹುದು. ಆದ್ದರಿಂದ ಪ್ರತಿಯೊಬ್ಬ ತಾಯಿಯೂ ನಿರ್ಲಕ್ಷö್ಯ ವಹಿಸದೇ ತಪಾಸಣೆ ಮಾಡಿಸಿಕೊಳ್ಳಬೇಕೆಂದು ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು ಕಿವಿ ಮಾತು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲೆಯಲ್ಲಿ ವಿಕಲಚೇತನರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿರುವ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗರ್ಭ ಧರಿಸಿದ ಪ್ರತಿಯೊಬ್ಬ ತಾಯಂದಿರು ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ನಿರ್ಲಕ್ಷ್ಯ ಮಾಡಲೇಬಾರದು. ಹೀಗೆ ಮಾಡಿದಲ್ಲಿ ಮಕ್ಕಳಲ್ಲಿ ಹುಟ್ಟಿನಿಂದ ಸಂಭವಿಸಬಹುದಾದ ಕೆಲವು ರೀತಿಯ ವಿಕಲಾಂಗತೆಯನ್ನು ತಡೆಯಬಹುದು.
ನೀವು ವಿಕಲಚೇತನರಲ್ಲ. ಬದಲಾಗಿ ವಿಶೇಷಚೇತನರು. ಇತರಿರಿಗಿಂತ ವಿಶೇಷರು. ದೊಡ್ಡತನ ನಿಮ್ಮಲ್ಲಿದ್ದು, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಬೇಳೆಯಲು ನಿರ್ಧರಿಸಬೇಕು. ಪೋಷಕರು ಸಹ ಬೇರೆ ಮಕ್ಕಳೊಂದಿಗೆ ಇವರನ್ನು ಹೋಲಿಕೆ ಮಾಡದೇ ಧೈರ್ಯ,ಸ್ಥೆöÊರ್ಯ ತುಂಬಬೇಕು. ವಿಕಲಚೇತನರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿರುವ ಸಂಘ ಸಂಸ್ಥೆಗಳು ಹಾಗೂ ಪೋಷಕರಿಗೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ವಿಧಾನ ಪರಿಷತ್ ಶಾಸಕರಾದ ಧನಂಜಯ ಸರ್ಜಿ ಮಾತನಾಡಿ, ಭಗವಂತನ ಉತ್ತಮ ಸೃಷ್ಟಿ ಮಾನವ ಆಗಿದ್ದು ಎಲ್ಲ ಅಂಗಾAಗಳನ್ನು ಹೊಂದಿ ಏನೂ ಮಾಡದೇ ಸುಮ್ಮನೇ ಸಾವಯುವವರು ನಿಜವಾದ ಅಂಗವಿಕಲರು. ಇಲ್ಲಿ ನೆರೆದಿರುವ ಎಲ್ಲ ವಿಕಲಚೇತನರು ವಿಶೇಷ ಚೇತನರು. ನಿಮ್ಮಲ್ಲಿ ಏನಾದರೂ ಸಾಧಿಸಬೇಕೆಂಬ ಮನಸ್ಸಿದೆ. ಹುಮ್ಮಸ್ಸಿದೆ. ಬಾಯಿದ್ದು ಮೂಗರು, ಕಣ್ಣಿದ್ದು ಕುರುಡರು ಹೀಗೆ ಎಲ್ಲ ಇದ್ದು ಇಲ್ಲದಂತಿರುವವರ ಮುಂದೆ ನೀವೇ ವಿಶೇಷರು.
ವಿಕಲಚೇತನರಿಗೆ ಬೇಕಿರುವುದು ಅನುಕಂಪವಲ್ಲ. ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು. ಇದನ್ನು ನಾವು ನೀವು, ಸಮಾಜ ಮಾಡಬೇಕಿದೆ. ಒಳ್ಳೊಳ್ಳೆ ಗುರಿ ಇಟ್ಟುಕೊಂಡವರು ದೊಡ್ಡದನ್ನು ಸಾಧಿಸಿದ್ದಾರೆ. ಕಾಲು ಕಳೆದುಕೊಂಡ ಹರುಣಿಮಾ ಸಿನ್ಹಾರವರು ನಾಲ್ಕು ದಿಕ್ಕಿನಿಂದಲೂ ಹಿಮಾಲಯ ಪರ್ವತವನ್ನು ಏರಿ ಸಾಧನೆ ಮಾಡಿದ್ದಾರೆ. ಪ್ಯಾರಿಸ್‌ನಲ್ಲಿ ನಡೆದ ಪ್ಯಾರಾ ಒಲಂಪಿಕ್ಸ್ನಲ್ಲಿ ವಿಶೇಷ ಚೇತನರು 29 ಪದಕ ಗೆದ್ದಿದ್ದಾರೆ. ಜಿಲ್ಲೆಂiÀ ಶೇಖರ್ ನಾಯ್ಕ್ ಸಹ ಉತ್ತಮ ಸಾಧನೆ ಮಾಡಿದ್ದಾರೆ. ವಿಶೇಷ ಚೇತನರಾದ ಪ್ರಜ್ವಲ್ ಪಾಟಿಲ್ ಮೊದಲ ಅಂಧ ಐಎಎಸ್ ಅಧಿಕಾರಿಯಾಗಿದ್ದಾರೆ, ಹೀಗೆ ಹಲವಾರು ವಿಶೇಷಚೇತನರು ವಿವಿಧ ವಲಯಗಳಲ್ಲಿ ಸಾಧನೆ ಮಾಡಿದ್ದಾರೆ. ಆದರೆ ಎಲ್ಲಾ ಸರಿ ಇದ್ದವರು ಕಂಫರ್ಟ್ ಝೋನ್‌ನಲ್ಲಿರುತ್ತಾರೆ ಎಂದ ಅವರು ವಿಶೇಷಚೇತನರ ಗುರಿಗಳು ಎತ್ತರವಾಗಿರಲಿ ಎಂದರು.
ಕಿವಿ ಸಮಸ್ಯೆಯೊಂದಕ್ಕೆ ಅಗತ್ಯವಿರುವ ಕಾಕ್ಲಿಯರ್ ಇಂಪ್ಲಾAಟ್ ಎಂಬ ಚಿಕಿತ್ಸೆಗೆ ರೂ. 20 ಲಕ್ಷ ಬೇಕಾಗುತ್ತದೆ. ಆದರೆ ಸರ್ಕಾರದ ವತಿಯಿಂದ ಈಗ ಮೆಗ್ಗಾನ್ ಅಲ್ಲಿ ಉಚಿತವಾಗಿ ಈ ಚಿಕಿತ್ಸೆ ಲಭ್ಯವಿದೆ, ಇದೇ ರೀತಿ ಸರ್ಕಾರದಿಂದ ವಿಶೇಷ ಚೇತನರಿಗೆ ಸಾಧನೆ-ಸಲಕರಣೆಗಳನ್ನು ನೀಡಲಾಗುತ್ತಿದೆ ಎಂದರು.
ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಎಸ್.ರವಿಕುಮಾರ್ ಮಾತನಾಡಿ, ವಿಶೇಷ ಚೇತನರ ಪ್ರತಿಭೆ ವಿಶೇಷವಾಗಿವೆ. ನೀವು ನಿಜವಾದ ಸಾಧಕರು. ನಾವು ಅವರಿಗೆ ಸಹಕಾರಿಯಾಗಿ ಇರಬೇಕು. ಕೇಲವ ಸರ್ಕಾರದ ಸೌಲಭ್ಯಗಳು ಮಾತ್ರವಲ್ಲ, ನಮ್ಮ ಕೈಲಾದ ಸಹಾಯವನ್ನು ವಿಕಲಚೇತನರಿಗೆ ಮಾಡಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಮಾತನಾಡಿ, ವಿಕಲಚೇತನರಿಗೆ ದೇವರು ವಿಶೇಷ ಶಕ್ತಿ ನೀಡಿರುತ್ತಾನೆ. ಈ ಶಕ್ತಿಯನ್ನು ಬಳಸಿಕೊಂಡು ಎಲ್ಲ ರಂಗದಲ್ಲಿ ಮುನ್ನುಗ್ಗಬೇಕು. ವಿಶೇಷಚೇತನರಲ್ಲಿ ನಾಯಕತ್ವವನ್ನು ಮೂಡಿಸುವುದು ಸರ್ಕಾರದ ಉದ್ದೇಶವಾಗಿದ್ದು 2030 ಹೊತ್ತಿಗೆ ಇದನ್ನು ಸಾಧಿಸಲು ಯೋಜಿಸಿದೆ.
ಪ್ಯಾರಿಸ್‌ನಲ್ಲಿ ನಡೆದ ಪ್ಯಾರಾ ಒಲಂಪಿಕ್‌ನಲ್ಲಿ ವಿಶೇಷಚೇತನರು 29 ಪದಕ ಗೆದ್ದು ನಮ್ಮ ದೇಶ 18 ನೇ ಸ್ಥಾನದಲ್ಲಿರುವಂತೆ ಮಾಡಿರುವುದು ನಿಜಕ್ಕೂ ಸಾಧನೆ. ಅವರನ್ನು ನಾವು ಆರ್ಥಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ಮುಂದೆ ತರಬೇಕು. ವಿಕಲಚೇನತರು ಮತ್ತು ಕನ್ನಡಿಗರಾದ ಸುಹಾಸ್ ಯತಿರಾಜ್ ಉತ್ತರ ಪ್ರದೇಶದ ಜಿಲ್ಲಾಧಿಕಾರಿ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ಪ್ಯಾರಾ ಒಲಂಪಿಕ್‌ನಲ್ಲಿ ಭಾಗವಹಿಸಿ ಬೆಳ್ಳಿ ಪದಕ ಪಡೆದಿದ್ದಾರೆ. ತುಮಕೂರಿನವರಾದ ಅಂಧತ್ವ ಸಮಸ್ಯೆ ಇರುವ ಕೆಂಪಹೊನ್ನಯ್ಯ ಅವರು ಐಎಎಸ್ ಪಾಸ್ ಮಾಡಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರಿಯಾಗಿದ್ದಾರೆ. ಹೀಗೆ ಅನೇಕ ವಿಶೇಷಚೇತನ ಸಾಧಕರು ನಮಗೆ ಮಾದರಿಯ ಆಗಿದ್ದಾರೆ ಎಂದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್ ಮಾತನಾಡಿ, ಯಾರು ನಾಡು ನುಡಿಗೆ ದ್ರೋಹ ಮಾಡುತ್ತಿದ್ದಾರೋ ಅವರೇ ನಿಜವಾದ ಅಂಗವಿಕಲರು. ಆದರೆ ನಿಜವಾದ ವಿಕಲಚೇತನರಲ್ಲಿ ವಿಶೇಷವಾದ ಶಕ್ತಿಯನ್ನು ಭಗವಂತ ನಿಡಿದ್ದು, ವಿಶೇಷವಾದದ್ದನ್ನು ಅವರು ಸಾಧಿಸಲು ನಾವು ಉತ್ತೇಜಿಸಬೇಕು ಎಂದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ತಾಜುದ್ದೀನ್ ಖಾನ್ ಮಾತನಾಡಿ, ವಿಕಲಚೇತನರಿಗೆ ಅನುಕಂಪ ಬೇಡ, ಅವಕಾಶಗಳನ್ನು ನೀಡಬೇಕು. ನಿತ್ಯ ಅವರ ವಿರುದ್ದ ಒಂದಿಲ್ಲೊAದು ಶೋಷಣೆ, ದೌರ್ಜನ್ಯ ಆಗುತ್ತಿದ್ದು ಅವರ ರಕ್ಷಣೆ ನಮ್ನೆಲ್ಲರ ಜವಾಬ್ದಾರಿಯಾಗಿದೆ ಎಂದ ಅವರು ಮಕ್ಕಳು ತಮ್ಮ ಜೊತೆ ಯಾರಾದರೂ ಅನುಚಿತವಾಗಿ ವರ್ತಿಸಿದಲ್ಲಿ ಆ ವೇಳೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿಕೊಟ್ಟರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಿ.ಹೆಚ್.ಕೃಷ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 21,694 ವಿಷೇಶ ಚೇತನರು ಇದ್ದು ಇವರುಗಳಿಗೆ ತ್ರಿಚಕ್ರ ವಾಹನ ಮತ್ತು ವಿವಿಧ ಸೌಲಭ್ಯ, ಸವಲತ್ತುಗಳನ್ನು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಇವರಿಗೆಂದೇ ಪ್ರತ್ಯೇಕ ಕಟ್ಟಡದ ವ್ಯವಸ್ಥೆ ಇಲ್ಲದ ಕಾರಣ ಮುಂದಿನ ದಿನಗಳಲ್ಲಿ ಒಂದು ಸುಸರ್ಜಿತ ಕಟ್ಟಡವನ್ನು ನಿರ್ಮಾಣ ಮಾಡಿಕೊಡಬೇಕೆಂದು ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದರು.
ವಿಕಲಚೇತನರಿಗೆ ಏರ್ಪಡಿಸಲಾಗಿದ್ದ ವಿವಿಧ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹಾಗೂ ವಿಕಲಚೇತನರ ಶ್ರೇಯೋಭಿವೃದ್ದಿದಾಗಿ ಶ್ರಮಿಸಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ವಿಕಲಚೇತನರ ಅಧಿಕಾರಿ ಸುವರ್ಣ ವಿ ನಾಯಕ್ ಸ್ವಾಗತಿಸಿದರು. ವಿಕಲಚೇತನರ ಜಿಲ್ಲಾ ಅಧ್ಯಕ್ಷೆ ಯಶೋಧಾ ದೇವಿ, ಮಹಾನಗರಪಾಲಿಕೆ ಅಧಿಕಾರಿ ಅನುಪಮ ಇತರೆ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.