ಶಿವಮೊಗ್ಗ:ನ.19 ರಾಷ್ಟಭಕ್ತರ ಬಳಗದಿಂದ ಕಾಶಿಯಾತ್ರೆ ಮತ್ತು ಅಯೋಧ್ಯ ಯಾತ್ರೆಯನ್ನು ಏರ್ಪಡಿಸಲಾಗಿದ್ದು, ನ.೨೩ ರ ಬೆಳಗ್ಗೆ ೬ ಗಂಟೆಗೆ ಶಿವಮೊಗ್ಗದಿಂದ ವಿಶೇ? ರೈಲು ಹೊರಡಲಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶ ಹಾಗೂ ಹಾಗೂ ರಾ?ಭಕ್ತರ ಬಳಗದ ಮುಖಂಡ ಮಹಾಲಿಂಗಶಾಸ್ತ್ರಿ ತಿಳಿಸಿದರು.


ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ನ.೨೩ ರ ಬೆಳಿಗ್ಗೆ ೬.೧೫ ಕ್ಕೆ ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಹೊರಡಲಿರುವ ವಿಶೇ?ವಾದ ರೈಲಿಗೆ ಬೆಕ್ಕಿನಕಲ್ಮಠ ಸ್ವಾಮಿಗಳು, ಬಸವ ಮರುಳಸಿದ್ದ ಸ್ವಾಮಿಗಳು, ಸಾಯಿನಾಥ್ ಸ್ವಾಮಿಜಿಗಳು ಧ್ವಜ ತೋರಿಸುವ ಮೂಲಕ ಚಾಲನೆ ನೀಡಲಿದ್ದಾರೆ. ಒಟ್ಟು ೧೫೦೦ ಜನರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು, ೨೪ ಭೋಗಿಗಳಲ್ಲಿ ಸಂಚರಿಸಲಿದ್ದೇವೆ ಎಂದರು.


ನ.೨೩ ರಿಂದ ಶಿವಮೊಗ್ಗದಿಂದ ಯಾತ್ರೆ ಹೊರಡಲಿದ್ದು, ೪೮ ಗಂಟೆ ಪ್ರಯಾಣ ನಡೆಸಿ, ನ.೨೫ ರ ಬೆಳಗ್ಗೆ ೧೦.೦೦ ಗಂಟೆಗೆ ಅಯೋಧ್ಯ ತಲುಪಲಿದ್ದೇವೆ. ನ.೨೬ ಕ್ಕೆ ಕಾಶಿ ತಲುಪಲಿದ್ದು, ಕಾಶಿ ಜಗದ್ಗುರುಗಳು ಯಾತ್ರಾರ್ಥಿಗಳಿಗೋಸ್ಕರ ವಿಶೇ? ಉಪನ್ಯಾಸ ನೀಡಲಿದ್ದಾರೆ ಎಂದರು.
ಕಾಶಿ ಜಗದ್ಗುರು ನೇತೃತ್ವದಲ್ಲಿ ಮಣಿಕಂಟ ಘಾಟು ತುಪಲಿದ್ದೇವೆ. ಧ್ಯಾನ ಭಜನೆ ಸೇರಿದಂತೆ ಎರಡು ದಿನಗಳ ಕಾಲ ಕಾಶಿಯಲ್ಲಿ ತಂಗಲಿದ್ದೇವೆ. ಕಾಶಿ ವಿಶ್ವನಾಥ, ವಿಶಾಲಾಕ್ಷಿ ದರ್ಶನ ಮಾಡಿ, ನ.೨೭ ರಂದು ಅಲ್ಲಿಂದ ಹೊರಟು ನ.೨೯ ರ ರಾತ್ರಿ ಶಿವಮೊಗ್ಗ ತಲುಪಲಿದ್ದೇವೆ ಎಂದು ತಿಳಿಸಿದರು.


ಒಟ್ಟಾರೆ ಯಾತ್ರೆಗೆ ೭,೫೦೦ ರೂ. ಶುಲ್ಕವಿದ್ದು, ಯಾತ್ರೆ ಸಮಯದ ಇತ್ಯಾದಿ ಖರ್ಚುಗಳನ್ನು ರಾ? ಭಕ್ತ ಬಳಗದ ವತಿಯಿಂದ ಭರಿಸಲಾಗುತ್ತಿದೆ. ವಿಶೇ? ರೈಲನ್ನು ಹೊರತುಪಡಿಸಿ ಯಾತ್ರಾ ಸಲುವಾಗಿಯೇ ೩೦೦ ಆಟೋಗಳು ಹಾಗೂ ೧೦೦ ಜೀ??ಗಳ ವ್ಯವಸ್ಥೆ ಮಾಡಲಾಗಿದೆ.
ಪತ್ರಿಕಾಗೋಷ್ಟಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಎಂ.ಶಂಕರ್, ಬಾಲು, ಮಾಂಡೇನಕೊಪ್ಪ ಗಂಗಾಧರ್, ಮೋಹನ್, ಈ.ವಿಶ್ವಾಸ್, ಶಿವಾಜಿ ಸೇರಿದಂಯತೆ ಇನ್ನಿತರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!