ಶಿವಮೊಗ್ಗ : ಕನ್ನಡ ರಾಜ್ಯೋತ್ಸವ ಅಂಗವಾಗಿ ಕರ್ನಾಟಕ ಜಾನಪದ ಪರಿಷತ್ತು ನೇತೃತ್ವದಲ್ಲಿ ಪುರದಾಳು ಗ್ರಾಮಪಂಚಾಯಿತಿ ಸಹಯೋಗದಲ್ಲಿ ಜನಪದ ಆಟಗಳು ಸ್ಪರ್ಧೆ ಏರ್ಪಡಿಸಲಾಗಿದೆ. ನವೆಂಬರ್ 17 ರಂದು ಭಾನುವಾರ ಬೆಳಿಗ್ಗೆ ಯಿಂದ ಪುರದಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ತಾಲ್ಲೂಕು ವ್ಯಾಪ್ತಿಯ ಜನಪದ ಆಟಗಳ ಸ್ಪರ್ಧೆ ಮತ್ತು ಜನಪದ ಹಾಡುಗಳ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಸಮಿತಿ ಅಧ್ಯಕ್ಷರಾದ ಡಿ. ಮಂಜುನಾಥ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನಪದ ಆಟಗಳ ಸ್ಪರ್ಧೆ ಯಲ್ಲಿ ಗೋಲಿ, ಬುಗುರಿ, ಹಗ್ಗ ಜಿಗಿತ, ಮಡಿಕೆ ಒಡೆಯುವುದು, ಹಗ್ಗ ಜಗ್ಗಾಟ, ಲಗೋರಿ ಆಟಗಳನ್ನು ಆಡಿಸಲಾಗುವುದು. ಜನಪದ ಹಾಡು ಹೇಳಲು ಸೋಬಾನೆ ಹಾಡು, ಜೋಗುಳ ಪದ, ಬೀಸುವ, ಕುಟ್ಟುವ, ನಾಟಿಮಾಡುವ ಹಾಡುಗಳನ್ನು ಹಾಡಿಸುವ, ದಾಖಲಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಡಿ. ಮಂಜುನಾಥ ವಿವರಿಸಿದ್ದಾರೆ.
ಆಧುನಿಕ ಭರಾಟೆಯಲ್ಲಿ ಅಳಿದು ಹೋಗದಂತೆ ತಡೆಯುವ ಸಲುವಾಗಿ ಈ ಕಾರ್ಯಕ್ರಮ. ಹೊಸತಲೆಮಾರಿಗೆ ಸಂಭ್ರಮದಲ್ಲಿ ತಲುಪಿಸುವ ಪ್ರಯತ್ನ ಕರ್ನಾಟಕ ಜಾನಪದ ಪರಿಷತ್ತು ಮಾಡುತ್ತಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿಯಿರುವ ಸ್ತ್ರೀ ಶಕ್ತಿತಂಡಗಳು, ಯುವಕ, ಯುವತಿ ಸಂಘಗಳು, ಶಾಲಾ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರ ತಂಡಗಳು, ಸಂಘ, ಸಂಸ್ಥೆಗಳವರು, ವ್ಯಕ್ತಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಮಕ್ಕಳು, ಯುವಕರು, ದೊಡ್ಡವರು ಎಲ್ಲರಿಗೂ ಭಾಗವಹಿಸಲು ಅವಕಾಶ ನೀಡಲಾಗಿದೆ.
ಆಸಕ್ತಿಯಿರುವವರು ಡಿ. ಮಂಜುನಾಥ, ದೂರವಾಣಿ : 9449552795, ಕೃಷ್ಣಮೂರ್ತಿ ಹಿಳ್ಳೋಡಿ, ಪ್ರಧಾನ ಕಾರ್ಯದರ್ಶಿ, ದೂರವಾಣಿ : 9448203018 ಸಂಪರ್ಕ ಮಾಡಿ ನವೆಂಬರ್ 15 ರೊಳಗೆ ಹೆಸರು ನೋಂದಾಯಿಸಲು ಕೋರಲಾಗಿದೆ.