ಬೆಂಗಳೂರು ನವೆಂಬರ್ 05: ಐದು ವರ್ಷಗಳ ನಂತರ ವಿಶ್ವವಿಖ್ಯಾತ ಜಾದುಗಾರರಾದ ಪಿ.ಸಿ ಸರ್ಕಾರ್ (ಪೋರುಶ್) ಬೆಂಗಳೂರು ನಗರದಲ್ಲಿ ಮೆಗಾ ಮ್ಯಾಜಿಕ್ ಶೋ “ಇಂದ್ರಜಾಲ” ಪ್ರದರ್ಶನ ನೀಡಲಿದ್ದಾರೆ.
ವಿಶ್ವವಿಖ್ಯಾತ ಜಾದೂಗಾರ ಪಿ.ಸಿ. ಸರ್ಕಾರ್ (ಪೋರುಶ್) ನಗರದಲ್ಲಿದ್ದು, ತಮ್ಮ ಮಂತ್ರಮುಗ್ಧಗೊಳಿಸುವ ಮೆಗಾ ಮ್ಯಾಜಿಕ್ ಶೋ “ಇಂದ್ರಜಾಲ” ಪ್ರದರ್ಶನದ ಮೂಲಕ ಜನರನ್ನು ರಂಜಿಸಲಿದ್ದಾರೆ. ಜೆ.ಸಿ.ರಸ್ತೆಯಲ್ಲಿರುವ ಟೌನ್ ಹಾಲ್ ನಲ್ಲಿ ನವೆಂಬರ್ 9, 10, 16, 17 ಮತ್ತು 18ರಂದು (ಕೇವಲ 5 ದಿನಗಳವರೆಗೆ) ಮ್ಯಾಜಿಕ್ ಪ್ರದರ್ಶನ ನೀಡಲಿದ್ದಾರೆ.
ಪಿ.ಸಿ. ಸರ್ಕಾರ್ ಮತ್ತು ಮ್ಯಾಜಿಕ್ ಸಂಬಂಧ ಬೇರ್ಪಡಿಸಲಾಗದಂತಹದ್ದು. ಏಕೆಂದರೆ, ಮ್ಯಾಜಿಕ್ ಅವರ ರಕ್ತದಲ್ಲಿ ಪಿ.ಸಿ. ಸರ್ಕಾರ್ (ಹಿರಿಯ) ಆಳವಾಗಿ ಬೇರೂರಿದೆ. “ನಿದ್ದೆ ಮಾಡುವಾಗ ನಾನು ಮ್ಯಾಜಿಕ್ ಅನ್ನು ಉಸಿರಾಡುತ್ತೇನೆ; ಎಚ್ಚರವಾದಾಗ ನಾನು ಮ್ಯಾಜಿಕ್ ಕೆಲಸ ಮಾಡುತ್ತೇನೆ” ಎಂದು ಅವರು ಪ್ರತಿಪಾದಿಸುತ್ತಾರೆ. ವಿಶ್ವದ ಮ್ಯಾಜಿಕ್ ಲೋಕಕ್ಕೆ ಪಿ.ಸಿ. ಸರ್ಕಾರ್ ಅವರ ಮಹತ್ವದ ಕೊಡುಗೆ ಎಂದರೆ ಭಾರತೀಯ ಮ್ಯಾಜಿಕ್ ಅನ್ನು ಪ್ರತಿಷ್ಠಾಪನೆ ಮಾಡಿರುವುದು. ಅವರು ಅತ್ಯಂತ ಪ್ರೀತಿಸುವ ಇಂದ್ರಜಾಲದ ಮೂಲಕ ಅವರು ಹೆಚ್ಚಿನ ಪ್ರಭಾವಲಯದೊಂದಿಗೆ ಪ್ರಾಚೀನ ವೈಭವದ ಮುಕುಟಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಮ್ಯಾಜಿಕ್ ಕ್ಷೇತ್ರದಲ್ಲಿ ಅವರು ತೋರಿದ ಪ್ರದರ್ಶನ, ಅವರ ಮುನ್ನಡಿಗಳು ಇಂದು ಅಂತಾರಾಷ್ಟ್ರೀಯ ಆಕರ್ಷಣೆಯ ಕಲೆಯಾಗಿ ಹೊರಹೊಮ್ಮುವಂತೆ ಮಾಡಿವೆ.
ಮ್ಯಾಜಿಕ್ ಪರಂಪರೆಯನ್ನು ಪರಿಗಣಿಸಿದಾಗ ಪಿ.ಸಿ. ಸರ್ಕಾರ್ ಕುಟುಂಬವು ವಿಶ್ವದ ಶ್ರೇಷ್ಠ ಜಾದೂಗಾರರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಭಾರತೀಯ ಮ್ಯಾಜಿಕ್ ಅನ್ನು ವಿಶ್ವ ವೇದಿಕೆಗೆ ಕೊಂಡೊಯ್ಯುವಲ್ಲಿ ಪಿ.ಸಿ. ಸರ್ಕಾರ್ (ಹಿರಿಯ) ಕಾರಣವಾಗಿದ್ದರೆ, ಅವರ ಮಕ್ಕಳು ವಿಶ್ವ ವೇದಿಕೆಯಲ್ಲಿ ಇಂದ್ರಜಾಲಕ್ಕೆ ಮಹತ್ವದ ಹೆಸರು ತಂದುಕೊಡುವಲ್ಲಿ ಮಹತ್ವದ ಹೆಜ್ಜೆಗಳೊಂದಿಗೆ ಮುಂದುವರಿದಿದ್ದಾರೆ. ಜಗತ್ತಿನಾದ್ಯಂತ ಅನೇಕ ಮಹತ್ವದ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಸೊರ್ಕಾರ್ ಕುಟುಂಬದವರು ಭಾರತೀಯ ಮ್ಯಾಜಿಕ್ ಲೋಕದ ಉತ್ತಮ ರಾಯಭಾರಿಗಳಾಗಿ ಹೊರಹೊಮ್ಮಿದ್ದಾರೆ.
ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪಿ.ಸಿ. ಸರ್ಕಾರ್ (ಯಂಗ್) ಆಗಾಗ್ಗೆ ಭಾರತದ ಲಿಯೊನಾರ್ಡೊ-ಡಾ-ವಿಂಚಿ ಎಂದು ಕರೆಸಿಕೊಳ್ಳುತ್ತಾರೆ. ಆ ಮೂಲಕ ಅವರು ತಮ್ಮದೇ ಆದ ದಂತಕಥೆಯನ್ನು ಸೃಷ್ಟಿಸಿಕೊಂಡಿದ್ದರು. ಅವರ ಮಗ ಪಿ.ಸಿ. ಸರ್ಕಾರ್ (ಪೋರುಶ್) ಆ ಕುಟುಂಬದ ಕಿರಿಯ ಜಾದೂಗಾರ. ಒಬ್ಬ ಪೇಂಟರ್ ಮತ್ತು ಡ್ರಮ್ಮರ್ ಆಗಿರುವ ಅವರು ಈಗಾಗಲೇ ತಮ್ಮ ತಾತ ಖ್ಯಾತಿಗಳಿಸಿದ್ದ ಹಲವು ಶ್ರೇಷ್ಠ ತಂತ್ರಗಳಲ್ಲಿ ಕೆಲಸ ಮಾಡುವುದರ ಜತೆಗೆ ತಮ್ಮದೇ ಆದ ವಿಶಿಷ್ಟ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಸೋರ್ಕಾರ್ ಕುಟುಂಬದಲ್ಲಿ ಮ್ಯಾಜಿಕ್ ಬೆಳಕು ಪೂರ್ಣ ಹೊಳಪಿನಿಂದ ಉರಿಯುತ್ತಲೇ ಇದೆ.