ಸಾಮಾಜಿಕ ಜಾಲತಾಣದ ಚಿತ್ರ
ಗಜೇಂದ್ರ ಸ್ವಾಮಿ, ಎಸ್.ಕೆ., ಶಿವಮೊಗ್ಗ
ಈ ನಮ್ ಜನ ಹೇಗಿದ್ದಾರೆ ಗೊತ್ತೇನ್ರಿ? ತುತ್ತು ಕೂಳಿಗೆ ಕಾಸಿಲ್ಲ ಕೊಡ್ರಿ ಅಂದ್ರೆ ಏನೇನೂ ಇಲ್ಲ ಅಂತಾರೆ. ನಮ್ ಕಡೆಯವರು ಆಸ್ಪತ್ರೆಯಲ್ಲಿ ಸೀರಿಯಸ್ ಇದ್ದಾರೆ ಎಂದು ಕಾಸು ಕೇಳುವಂತಹವರಾದರೆ ಅತ್ತ ತಿರುಗಿ ನೋಡುವುದಿಲ್ಲ. ಅದೇ ಮಜಾ ಮಾಡಲು, ಎಣ್ಣೆ ಹೊಡೆಯಲು ಎಲ್ಲಿ ಬೇಕಾದರೂ ಸಾಲ ಕೊಡುತ್ತಾರೆ. ಇದು ನಿಜ ಅಲ್ವೇನ್ರೀ. ಇದು ವಾಸ್ತವ ಅಲ್ವಾ?
ಇತ್ತೀಚಿನ ದಿನಮಾನಗಳಲ್ಲಿ ನಮ್ಮ ನಡುವಿನ ಹಲವು ಘಟನೆಗಳನ್ನು ಅವಲೋಕಿಸಿದಾಗ ಎಷ್ಟೋ ಕಡೆ ಸಾಲ ಕೊಟ್ಟಿದ್ದಾತ ಅದು ವಾಪಸ್ ಬರೆದಿದ್ದಾಗ ಬೇರೆಯವರ ಬಳಿ ಹತ್ತು ರೂಪಾಯಿ ಸಾಲ ಕೇಳಿದರೆ ನಾಟಕದ ಬುಳ್ಳಾಟದ ಮಾತುಗಳೇ ಹೊರತು ಯಾವುದೇ ಕಾರಣಕ್ಕೂ ಕೊಡುವ ವ್ಯವಹಾರವೇ ಇಲ್ಲ ಎಂಬಂತೆ ದುರಾಬ್ಯಾಸಗಳಿಗೆ, ಕೆಟ್ಟ ಹವ್ಯಾಸಗಳಿಗೆ ಹಣ ಕೇಳಿದರೆ ಖಂಡಿತ ಸಿಗುತ್ತದೆ ಎಂಬ ವಾಡಿಕೆ ಜನಜನಿತವಾಗಿರುವುದು ನಾನಾ ಸ್ಪಷ್ಟ ನಿದರ್ಶನಗಳಿಂದ ಎಂದರೆ, ತಪ್ಪಾಗಲಿಕ್ಕಿಲ್ಲ. ದುಶ್ಚಟಗಳ ಯಾವುದೇ ವ್ಯಕ್ತಿ ನೋಡಿ ಆತನ ಬಳಿ ಬಳಿ ಹಣ ಇರುವುದಿಲ್ಲ. ಆದರೆ ಆ ವಿಷಯದಲ್ಲಿ ಎಲ್ಲೂ ತನ್ನ ನಿಷ್ಠೆಯನ್ನು ಮರೆಯುವುದಿಲ್ಲ ಎಂಬ ನಗು Orders ಮಾತು ಸಹಜವಾಗಿ ಕೇಳಿ ಬರುತ್ತದೆ, ಕಂಡು ಬರುತ್ತಿದೆ . ಎಲ್ಲಿ ಹಣ ಹುಟ್ಟದಿದ್ದರೂ ಅಲ್ಲಿಗೆ ಮಾತ್ರ ಹಣ ಹುಟ್ಟುತ್ತದೆ ಎಂಬ ವಾಡಿಕೆ ಪ್ರತೀತಿ ಪ್ರಬಲವಾಗಿದೆ ಅಲ್ಲವೇ?