ಶಿವಮೊಗ್ಗ,ಅ.೨೬:ರಾಜ್ಯದಲ್ಲಿ ಗಾಂಜಾ ಹಾಗೂ ಮಾದಕ ದ್ರವ್ಯಗಳ ಮಾರಾಟ ಜಾಲವನ್ನು ಬುಡ ಸಹಿತ ಕಿತ್ತುಹಾಕಲು ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪನವರ ೯೨ನೇ ಹುಟ್ಟುಹಬ್ಬ ಸೊರಬದ ಬಂಗಾರಧಾಮದಲ್ಲಿ ನಡೆಯಲಿದ್ದು, ಈ ಸಮಾರಂಭ ಹಾಗೂ ಪೊಲೀಸ್ ಸಮುದಾಯ ಭವನದ ಉದ್ಘಾಟನೆಗಾಗಿ ಶಿವಮೊಗ್ಗಕ್ಕೆ ಬಂದಿದ್ದೇನೆ ಎಂದರು.
ಗಾಂಜಾ ನಿಯಂತ್ರಣಕ್ಕೆ ಮತ್ತು ಸಂಪೂರ್ಣ ನಾಶಕ್ಕೆ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಎಲ್ಲಾ ಠಾಣಾ ವ್ಯಾಪ್ತಿ ಹಾಗೂ ಎಸ್‌ಪಿ, ಡಿಸಿಪಿಯವರ ವ್ಯಾಪ್ತಿಯಲ್ಲಿ ಗಾಂಜಾ ಕೇಸುಗಳು ಮಿತಿಮೀರಿದರೆ ಅವರನ್ನೇ ಹೊಣೆಯಾಗಿಸುವುದಾಗಿ ಈಗಾಗಲೇ ಅಧಿಸೂಚನೆ ನೀಡಿದ್ದೇನೆ. ಗಾಂಜಾ

ಆರೋಪಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು. ಬೆಂಗಳೂರಿನಲ್ಲಿ ನಿನ್ನೆಯಷ್ಟೆ ಒಂದೂವರೆ ಕೋಟಿ ರೂ.ಗಳ ಗಾಂಜಾ ವಶಪಡಿಸಿಕೊಂಡು ನೈಜೀರಿಯ ಪ್ರಜೆಯನ್ನು ಬಂಧಿಸಲಾಗಿದೆ. ವಾರದ ಹಿಂದೆ ೫ ಕೋಟಿ ರೂ.ಗಳ ಗಾಂಜಾವನ್ನು ವಶಪಡಿಸಿಕೊಂಡಿದೆ ಎಂದರು.
ಜಾತಿಗಣತಿ ವರದಿ ಮಂಡನೆ ಮುಂದಿನ ಸಂಪುಟದಲ್ಲಿ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದರು. ಶಾಸಕ ಎಸ್.ಟಿ.ಸೋಮಶೇಖರ್ ಅವರು ಬಿಜೆಪಿಯ ೮ ಶಾಸಕರು, ಕಾಂಗ್ರೆಸ್ಸಿಗೆ ಬರುತ್ತಾರೆ ಎಂದು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ನೀವು ಅವರಿಗೆ ಈ ಪ್ರಶ್ನೆ ಕೇಳಿದರೆ ಇನ್ನೂ ಹೆಚ್ಚಿನ ಮಾಹಿತಿ ಸಿಗುತ್ತದೆ ಎಂದರು.
ತುಮಕೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಬಗ್ಗೆ ಈಗಾಗಲೇ ೩-೪ಕಡೆ ಜಾಗ ಗುರುತಿಸಿದ್ದೇವೆ. ವಿಮಾನಯಾನ ಇಲಾಖೆಯ ಕೇಂದ್ರ ತಂಡ ಮತ್ತು ತಜ್ಞರ ತಂಡ ಪರಿಶೀಲನೆ ನಡೆಸಿ ಮಾಹಿತಿ ಪಡೆದು ಸೂಕ್ತ ಜಾಗ ಗುರುತಿಸುತ್ತಾರೆ ಎಂದರು.
ಹೆಚ್.ಎಂ.ಟಿ. ಕಾರ್ಖಾನೆಗೆ ನೀಡಿದ ಜಾಗ ಅರಣ್ಯ ಇಲಾಖೆ ವಶಪಡಿಸಿಕೊಳ್ಳುತ್ತಿದೆಯಲ್ಲ ಎಂಬ ಪ್ರಶ್ನೆಗೆ ಹಿಂದೆ ಅರಣ್ಯ ಇಲಾಖೆಯ ಜಾಗವನ್ನು ಹೆಚ್.ಎಂ.ಟಿ. ಕಾರ್ಖಾನೆಗೆ ನೀಡಲಾಗಿತ್ತು. ಈಗ ಕಾರ್ಖಾನೆ ನಿಂತಿದೆ. ಹಾಗಾಗಿ ಕಾನೂನಿನ ಪ್ರಕಾರ ಆ ಜಾಗವನ್ನು ಮತ್ತೆ ಅರಣ್ಯ ಇಲಾಖೆ ವಾಪಾಸ್ಸು ಪಡೆಯುತ್ತದೆ ಎಂದರು.


ಹಿಂದೆ ನಾನು ಉಪಮುಖ್ಯಮಂತ್ರಿ ಇದ್ದಾಗ ಬೆಂಗಳೂರಿನ ಜನರಿಗೆ ತೀವ್ರ ಕುಡಿಯುವ ನೀರಿನ ಸಮಸ್ಯೆ ಇದ್ದಾಗ ಬೆಂಗಳೂರಿಗೆ ನೀರಿನ ವಿವಿಧ ಮೂಲಗಳಿಂದ ನೀರು ಸರಬರಾಜು ಮಾಡುವ ಬಗ್ಗೆ ಚರ್ಚೆ ನಡೆದಿತ್ತು. ಹಾಗ ಶರಾವತಿ ನೀರು ಬೆಂಗಳೂರಿಗೆ ಒಯ್ಯುವ ಬಗ್ಗೆಯೂ ವಿಸ್ತಾರ ಚರ್ಚೆ ನಡೆದಿತ್ತು. ಆದರೆ ಮುಂದಿನ ಯಾವುದೇ ಕ್ರಮವಾಗಿಲ್ಲ. ಚರ್ಚೆಯಷ್ಟೇ ನಡೆದಿದೆ ಎಂದರು.


ಬಿಜಾಪುರದಲ್ಲಿ ವಕ್ಫ್ ಆಡಳಿತ ಮಂಡಳಿ ತನ್ನದೇ ಜಾಗ ಎಂದು ವಶಪಡಿಸಿಕೊಳ್ಳಲು ಮುಂದಾಗಿದೆ ಎಂಬ ಪ್ರಶ್ನೆಗೆ ಕಂದಾಯ ಇಲಾಖೆಯ ಅಧಿಕಾರಿಗಳು ಎಲ್ಲಾ ದಾಖಲೆಗಳನ್ನು ಪರಿಶೀಲನೆ ನಡೆಸಿ ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತಾರೆ. ಇದರಲ್ಲಿ ಯಾವುದೇ ವಿವಾದವಿಲ್ಲ ಎಂದರು.
ಮೂರು ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಯಾವುದೇ ಸಂಶಯಬೇಡ. ಈಗಾಗಲೇ ಆಂತರಿಕ ವರದಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯಕೂಡ ಗೆಲುವಿನ ಬಗ್ಗೆ ಖಚಿತವಾಗಿ ತಿಳಿಸಿದೆ ಎಂದರು.
ಕಾಂಗ್ಸೆಸ್ಸಿನ ಜನಪ್ರಿಯ ಗ್ಯಾರಂಟಿಗಳು ಮತ್ತು ಅಭಿವೃದ್ಧಿ ಕಾರ್ಯಗಳು ಗೆಲುವು ತರಲಿದ್ದು, ಎನ್‌ಡಿಎ ಮೈತ್ರ್ರಿಕೂಟದ ಅಭ್ಯರ್ಥಿಗಳ ಸೋಲು ನಿಶ್ಚಿತ ಎಂದರು. ಶಿಗ್ಗಾಂವಿಯಲ್ಲೂ ಕೂಡ ಖಾದ್ರಿಯವರು ತಮ್ಮ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. ಕಾಂಗ್ರೆಸ್ಸ್‌ನಲ್ಲಿ ಯಾವುದೇ ಬಂಡಾಯವಿಲ್ಲ. ಬಂಡಾಯವಿದ್ದರೆ ಅದು ಬಿಜೆಪಿಯಲ್ಲಿ ಎಂದರು.
ಈ ಸಂದರ್ಭದಲ್ಲಿ ಶಾಸಕ ಬೇಲೂರು ಗೋಪಾಲಕೃಷ್ಣ, ಬಲ್ಕೀಶ್ ಬಾನು, ಮಂಜುನಾಥ್ ಭಂಡಾರಿ, ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್ ಇದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!