.
ವಾರದ ಅಂಕಣ- 17
ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ
ಈ ಜಗತ್ತು ಅತ್ಯಂತ ವಿಶಾಲವಾಗಿದೆ, ಮುಕ್ತ ಪ್ರೀತಿಯ ಉದಾರ ಮನಸುಗಳಿವೆ ಎಂಬುದೇನೋ ಸತ್ಯ. ಹಾಗೆಯೇ, ಕೆಲವೇ ವಿಕೃತತೆಯ ಮನಸು ಹೊಂದಿರುವವರು ಪಡೆದ ಸಾಲದಲ್ಲೇ, ಕೈಗಡದಲ್ಲೇ ತಾವೇ ಬಡ್ಡಿ ಹಾಕಿ ಸಾಲಕಟ್ಟಿದಂತೆ ನಾಟ್ಕ ಆಡ್ತಾರೆ. ನಿಮ್ ಸಾಲದಲ್ಲೇ ಒಂದಿಷ್ಟನ್ನು ತಿನ್ನೋದನ್ನೇ ಮಾಡ್ತಾರೆ ಎಂಬುದೇ ಇಂದಿನ ನೆಗಿಟೀವ್ ಥಿಂಕಿಂಗ್ ಅಂಕಣದಿಂದ ಹೊರಬರುತ್ತಿರುವ ನೈಜ ಕಣ್ಣಾರೆ ಕಂಡ ಸತ್ಯ.
ನಿಮ್ಮ ಸಾಲ ಅಥವಾ ಕೈಗಡ ಏನೇ ಆಗಲಿ, ಅದಕ್ಕೊಂದಿಷ್ಟು ದಾಖಲಾತಿ ಇಟ್ಟುಕೊಳ್ಳಿ. ಒಂದಿಷ್ಟು ಚಿಕ್ಕದಾದರೂ ಪರವಾಗಿಲ್ಲ ಚೊಕ್ಕದಾದ ಬಡ್ಡಿ ಹಾಕಿ. ಇಲ್ಲದಿದ್ದರೆ ನಿಮ್ಮ ಸಾಲದಲ್ಲೇ ಅವರು ಬಡ್ಡಿ ವಸೂಲಿ ಮಾಡಿಕೊಂಡು ನಿಮ್ಮ ಸಾಲವನ್ನ ವಾಪಸ್ ಕೊಡುವ ನಾಟಕವಾಡುತ್ತಾರೆ ಎಂಬುದು ಇಂದಿನ ಜಗತ್ತಿನ ಕೆಲವೇ ಕೆಲವು ಕಿರಾತಕ ಮನಸ್ಸುಗಳ ಸಾಲ ಕೇಳುವ ತಿಮಿಂಗಿಲಗಳ ನೈಜ ಸತ್ಯ ಎಂಬುದು ಬಹುತೇಕ ಎಲ್ಲರೂ ಕಂಡ ವಿಷಯವಲ್ಲವೇ?
ವಾಸ್ತವದ ವಿಷಯಗಳನ್ನು ನಾವು ಇಂದಿನ ದಿನಮಾನಗಳಲ್ಲಿ ಯೋಚಿಸುತೊಡಗಿದಾಗ ನೀವೇನಾದರೂ ಒಂದಿಷ್ಟು ಹಣವನ್ನು ಯಾವುದೇ ಅವರ ತುರ್ತು ಎಂದುಕೊಂಡು ಕೊಟ್ಟಿದ್ದರೆ ನೀವು ಯಾವುದೋ ಕೆಲಸಕ್ಕೆಂದು ಭದ್ರವಾಗಿ ಇಟ್ಟುಕೊಂಡಿದ್ದ ಹಣ ನಿಮಗೆ ಚಿಲ್ಲರೆ ಚಿಲ್ಲರೆಯಾಗಿ ಸಿಗುತ್ತದೆ. ನಿಮ್ಮ ಕೆಲಸವು ಕೈಕೊಡುತ್ತದೆ. ನೀವು ಕೊಟ್ಟ ಹಿಡಿಗಂಟು ನಿಮ್ಮ ಲೆಕ್ಕದಲ್ಲೇ ಸಿಗುವುದಿಲ್ಲ ಎಂಬುದು ಇಂದಿನ ಬಹುತೇಕ ಜನರು ಅನುಭವಿಸಿರುವ ವಾಸ್ತವದ ಸತ್ಯಾಂಶಗಳು ಎಂದರೆ ತಪ್ಪಾಗಲಿಕ್ಕಿಲ್ಲ ಅಲ್ಲವೇ?
ನಿಮ್ಮ ಮನಸ್ಸು ಮುಗ್ಧ ಹಾಗೂ ಮುಕ್ತ ಎಂದು ಗೊತ್ತಾದರೆ ಅದಕ್ಕೆ ಒಂದಿಷ್ಟು ಬೆಂಕಿ ಹಚ್ಚುವ. ಜೊತೆ ಯಾವುದೇ ಕಾರಣಕ್ಕೂ ಅಂತಹ ಮನಸ್ಸನ್ನು ಉಳಿಯದಂತೆ ಮಾಡುವ ಕೆಲವೇ ಕೆಲವು ಎತ್ತುವಳಿ ಶೂರರು ನಮ್ಮ ನಡುವೆ ಈಗಲೂ ಇದ್ದಾರೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ ಎಂಬುದನ್ನು ಸಹಜವಾಗಿ ಬಹುತೇಕ ಜನ ಒಪ್ಪುತ್ತಾರೆ ಏಕೆಂದರೆ ಅದನ್ನು ಅವರು ಅನುಭವಿಸಿದ್ದಾರೆ ತಮ್ಮ ಇಡೀ ಗಂಟು ಅನ್ಯಾಯವಾಗಿ ಚಿದ್ತ-ಚಿದ್ರಾಯಿತು. ಅದು ನಮಗೆ ಕಣ್ಣಿಗೆ ಕಾಣಲೇ ಇಲ್ಲ. ಏನೋ ಮಾಡಬೇಕೆಂದಿದ್ದೆ ಏನೇನೋ ಆಯಿತು ಅಯ್ಯೋ ಕರ್ಮವೇ ಎಂದು ಮನದೊಳಗೆ ಹೊಡಿ ಶಾಪ ಹಾಕುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಸಾಮಾನ್ಯವಾಗಿದೆ.
ಇಲ್ಲಿ ಹಣ ಒಂದೇ ಮುಖ್ಯ ಕಾರಣವಾಗುವುದಿಲ್ಲ. ಈ ಹಣ ನಂಬಿಕೆ ವಿಶ್ವಾಸ ಹಾಳು ಮಾಡುವ ಒಂದು ವಸ್ತುವಾಗಿ ನಿಲ್ಲುವುದು ಜೊತೆ ಜಗಳಕ್ಕೆ ಎಡೆ ಮಾಡಿಕೊಡುವುದು ಇಂತಹ ಘಟನೆಗಳಿಗೆ ಕಾರಣವೂ ಆಗಿ ನಿಲ್ಲುತ್ತದೆ.
ಸಾಲ ಪಡೆಯುವಾಗ ದಮ್ಮಯ್ಯ ದತ್ತಯ್ಯ ಎಂದು ಬೇಡುತ್ತಾರೆ ಎನ್ನುವ ಪದವನ್ನು ಸಾಕಷ್ಟು ಬಾರಿ ಈ ನೆಗೆಟಿವ್ ಥಿಂಕಿಂಗ್ ಅಂಕಣದಲ್ಲಿ ತಾವುಗಳು ಗಮನಿಸಿದ್ದೀರಿ. ಎಂತೆಂತಹ ನಾಟಕ ಆಡಿದರೆ ಯಾವ್ಯಾವ ವ್ಯಕ್ತಿಯಿಂದ ಹೇಗೆ ಸಾಲ ಪಡೆಯಬಹುದು ಎಂಬುದು ಕೆಲ ಮನಸುಗಳಿಗೆ ಸಲೀಸಾಗಿ ಪಾಠವಾಗಿ ಹೋಗಿರುತ್ತದೆ. ಅದೇ ಸಾಲ ಕೊಟ್ಟವನು ಪರಿಸ್ಥಿತಿ ಅನಿವಾರ್ಯತೆಗೆ ಸಾಲ ಕೇಳಲು ಹೋದರೆ 5 ಪೈಸೆ ಹುಟ್ಟದಿರುವುದು ಅದೆಷ್ಟೋ ಬಾರಿ ಬಹಳಷ್ಟೂ ಕಡೆ ಕಂಡಿದ್ದೇವೆ, ನೋಡಿದ್ದೇವೆ, ಅನುಭವಿಸಿದ್ದೇವೆ.
ಏನೇ ಆಗಲಿ ದಾಖಲೆ ಹಾಗೂ ನಿಮ್ಮ ನಡುವೆ ಬಡ್ಡಿ ವ್ಯವಹಾರ ನಿಮ್ಮ ಹಣ ನಿಮಗೆ ವಾಪಸ್ ಬರಲು ಅತ್ಯಂತ ಅನಿವಾರ್ಯವಾದ ಪರಿಸ್ಥಿತಿ ಇಂದಿನ ದಿನಮಾನಗಳಲ್ಲಿ ಸಹಜವಾಗುತ್ತಿರುವುದು ಒಂದು ಕಡೆ ಸತ್ಯವಾಗಿದ್ದರೆ ಮತ್ತೊಂದು ಕಡೆ ಯಾರನ್ನು ನಂಬುವುದು ಯಾರನ್ನು ಬಿಡುವುದು ಅವರಿಗೆ ಕೊಟ್ಟು ನಮಗೇನು ಆಗುತ್ತದೆ? ನಾವೇಕೆ ಒಳ್ಳೆಯವರಾಗಬೇಕು ಹಾಳಾಗಿ ಹೋದರೆ ಹೋಗಲಿ ಅವರು ಉದ್ದಾರಾದರೆ ನಮಗೇನು ಲಾಭ ಎಂಬ ಮನೋಭಾವ ಮುಗ್ಧ ಹೃದಯಗಳಲ್ಲಿ ಬೆಳೆಯುವುದು ನೈಜ ಹಾಗೂ ವಾಸ್ತವದ ಸಂಗತಿ ಆಗಿರುವುದು ಸುಳ್ಳೇನಲ್ಲ.
ಸಾಲವನು ಪಡೆವಾಗ ಗುಳ್ಳೆನರಿ ಆಟ ಆಡುವ ಮನುಷ್ಯ ಅಂದು ಹಾಕಿಕೊಂಡಿದ್ದ ಉಂಗುರ ಹಾಗೂ ಕೊಳಚೈನ್ ಮರು ದಿನದಿಂದಲೇ ಮಾಯವಾಗಿರುತ್ತದೆ. ಕೇಳಿದರೆ ಬಂತು ಕೊಟ್ಟೆ ಎಂಬ ಮಾತು ಸಹಜವಾಗಿರುತ್ತದೆ. ಮತ್ತೊಮ್ಮೆ ಚೆಕ್ ಕೇಳಿದರೆ ನನ್ನ ಬ್ಯಾಂಕ್ ಅಕೌಂಟ್ ಇಲ್ಲ ಎಂದು ಎಷ್ಟು ಚೆನ್ನಾಗಿ ಸುಳ್ಳು ಹೇಳುತ್ತಾನೆ ಎಂಬುದನ್ನು ಸಾಕಷ್ಟು ಕಣ್ಣಾರೆ ಕಂಡ ನಿದರ್ಶನಗಳನ್ನು ಓದುಗರು ಅಂಕಣದ ಮೂಲಕ ಬಿಂಬಿಸುತ್ತಿರುವುದು ನೆಗೆಟಿವ್ ಥಿಂಕಿಂಗ್ ದೊಡ್ಡ ಪ್ರಮಾಣದಲ್ಲಿ ಗುರುತಿಸಿಕೊಳ್ಳುವ ಓದಿಸಿಕೊಳ್ಳುವ ಅಂಶವಾಗಿರುವುದು ನಿಜಕ್ಕೂ ಸಂತಸದ ಸಂಗತಿ.
(ಮುಂದುವರೆಯುತ್ತದೆ)