ಬೆಂಗಳೂರು,ಜೂ.28: ಒಂದೇ ದಿನ ಬರೋಬ್ಬರಿ 918 ಕೋವಿಡ್ 19 ನ ಕೊರೊನಾ ಪ್ರಕರಣಗಳು ದಾಖಲಾಗಿವೆ.
ಬೆಂಗಳೂರೊಂದರಲ್ಲೇ 596 ಪ್ರಕರಣಗಳು ದೃಢಪಟ್ಟಿವೆ. ಶಿವಮೊಗ್ಗ ಸೇರಿದಂತೆ ಉಳಿದೆಡೆ ದಶಕ ದಾಟಿರುವ ಕೊರೊನಾ ಸೊಂಕಿತರಿಂದ ರಾಜ್ಯದಲ್ಲಿ ಈಗ ಒಟ್ಟು ಸೋಂಕಿತರ ಸಂಖ್ಯೆ 11,923 ತಲುಪಿದೆ.
ಕಳೆದ 24 ದಿನಗಳಲ್ಲಿ 11 ಮಂದಿ ಮೃತಪಟ್ಟಿದ್ದಾರೆ.
ಒಟ್ಟು 7287 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಟ್ಟು 195 ಮಂದಿ ಮೃತಪಟ್ಟಿದ್ದಾರೆ. ಸದ್ಯ 4441 ಸಕ್ರಿಯ ಪ್ರಕರಣಗಳಿದ್ದು, 197 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಕ್ಷಿನ ಕನ್ನಡ, ಗದಗ, ಕಲಬುರಗಿ, ಮಂಡ್ಯಾದ ಸಂಖ್ಯೆ ಹೆಚ್ಚಿದೆ. ಉಳಿದಂತೆ ಎಲ್ಲಾ ಜಿಲ್ಲೆಗಳೂ ಕಾಣಿಸಿಕೊಂಡಿವೆ.
ಮದ್ಯಮಾರಾಟಕ್ಕೆ ಬ್ರೇಕ್ :
ರಾಜ್ಯ ಸರ್ಕಾರವು ಮದ್ಯ ಪ್ರಿಯರಿಗೆ ಬಿಗ್ ಶಾಕ್ ನೀಡಿದ್ದು, ಜುಲೈ 5 ರಿಂದ ರಾಜ್ಯವ್ಯಾಪಿ ಭಾನುವಾರ ಬೆಳಗ್ಗೆ 8 ರಿಂದ ಸಂಜೆ 5 ರವರೆಗೆ ಸಂಪೂರ್ಣ ಲಾಕ್ ಡೌನ್ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿದ ಹಿನ್ನೆಲೆ ಪ್ರತಿ ಸಂಡೇ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಪ್ರತಿ ಭಾನುವಾರ ಕರ್ಪ್ಯೂ ಜಾರಿಗೊಳಿಸಲಾಗಿದ್ದು, ಅಂದು ಮದ್ಯ ಮಾರಾಟಕ್ಕೆ ಯಾವುದೇ ರೀತಿಯಲ್ಲಿ ಅವಕಾಶ ಇರುವುದಿಲ್ಲ. ಈ ಮೂಲಕ ವೀಕೆಂಟ್ ನಲ್ಲಿ ಎಣ್ಣೆ ಪಾರ್ಟಿ ಮಾಡೋ ಮದ್ಯ ಪ್ರಿಯರಿಗೆ ಶಾಕ್ ನೀಡಿದೆ.ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.ಲಾಕ್ ಡೌನ್ ಬದಲಾಗಿ ವೀಕೆಂಡ್ ಸಂಪೂರ್ಣ ಬಂದ್ ಮಾಡಲಾಗುವುದು . ಶನಿವಾರ ಮತ್ತು ಭಾನುವಾರ ಕಂಪ್ಲೀಟ್ ಲಾಕ್ಡೌನ್ ಜಾರಿ ಮಾಡುವ ಹಾಗೂ ನೈಟ್ ಕರ್ಫ್ಯೂ ಜಾರಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.