ಶಿವಮೊಗ್ಗ : ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ ಪ್ರಯುಕ್ತ ಅ.೩ರಿಂದ ಅ. ೧೨ರವರೆಗೆ ಶರನ್ನವರಾತ್ರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.


ಪ್ರತಿನಿತ್ಯ ಬೆಳಿಗ್ಗೆ ೮ಗಂಟೆಯಿಂದ ಚಂಡಿಕಾಪಾರಾಯಣ ಹಾಗೂ ದೇವಿಗೆ ವಿಶೇಷ ಅಲಂಕಾರ , ಬೆಳಿಗ್ಗೆ ೧೦ಗಂಟೆಯಿಂದ ಹೋಮ ಪ್ರಾರಂಭವಾಗಲಿದೆ ೧೨.೩೦ಕ್ಕೆ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗವಿರುತ್ತದೆ.


ಪ್ರತಿನಿತ್ಯ  ಸಂಜೆ ೬.೦೦ ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ ೮ಗಂಟೆಗೆ ಉಯ್ಯಾಲೇ ಸೇವೆ ಪ್ರಾರಂಭ, ೮.೩೦ಕ್ಕೆ ಮಹಾಮಂಗಳಾರತಿ ರ್ಥಪ್ರಸಾದ ವಿನಿಯೋಗವಿರುತ್ತದೆ.


ಅ.೦೩ಗುರುವಾರದಂದು ಶ್ರೀಮತಿ ಡಾ|| ರಶ್ಮಿ  ಶ್ರೀ ಡಾ || ಅನಿಲ್‌ಕುಮಾರ್ ಕುಟುಂಬದವರಿಂದ  ದೇವಿಗೆ ಅರಿಶಿನ-ಕುಂಕುಮ ಅಲಂಕಾರ, ಶ್ರೀಮತಿ ಭವಾನಿ ಶ್ರೀ ಜಯಣ್ಣ ಕುಟುಂಬದವರಿಂದ , ಶ್ರೀಮತಿ ಭವಾನಿ ಮತ್ತು  ಶ್ರೀ ಶಶಿಧರ್ ಕುಟುಂಬದವರಿಂದ ದೀಪ ನಮಸ್ಕಾರ, ಶ್ರೀಮತಿ ದಿವ್ಯ ಡಾ|| ಮೋಹನ್ ಕುಟುಂಬದವರಿಂದ ಉಯ್ಯಾಲೇ ಸೇವೆಯನ್ನು ಹಮ್ಮಿಕೊಳ್ಳಲಾಗಿದೆ.


ಹೆಚ್ಚಿನ ಮಾಹಿತಿಗಾಗಿ  ಶ್ರೀ ಚೇತನ್ ಭಟ್ ೯೯೮೦೨೪೭೦೮೧, ಶ್ರೀ ಕೆ. ಶೇಖರ್ ೯೪೪೮೮೮೮೧೨೯ ಸಂಪರ್ಕಿಸಬಹುದು.
ಭಕ್ತಾದಿಗಳು ಎಲ್ಲಾ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

By admin

ನಿಮ್ಮದೊಂದು ಉತ್ತರ

error: Content is protected !!