ಹೊಸನಗರ: ಶಿವಮೊಗ್ಗ ಜಿಲ್ಲೆಯ ಅಡಿಕೆ ವ್ಯಾಪಾರ ಹಾಗೂ ಅಡಿಕೆ ಮಂಡಿಗಳಿಗೆ ಅಡಿಕೆ ಆಮದು ಹಂತದಲ್ಲಿ ಸುರಕ್ಷಿತವಾಗಿದ್ದು ಅಡಿಕೆ ಮದ್ಯವರ್ತಿಗಳಿಂದ ಅಡಿಕೆಯ ಮಾನ ತೆಗೆಯುತ್ತಿದ್ದಾರೆ ಎಂದು ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡರವರು ಹೇಳಿದರು.
ಹೊಸನಗರದ

ಎಪಿಎಂಸಿ ಯಾಡ್ ಆವರಣದಲ್ಲಿ ತುಂಗಾ ಅಡಿಕೆ ಮಂಡಿಯ ೬ನೇ ವರ್ಷದ ಸರ್ವಸದಸ್ಯರ ಸಭೆಯ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.

ಹೊಸನಗರ ತಾಲ್ಲೂಕಿನ ಅಡಿಕೆಗಳು ಸುರಕ್ಷಿತವಾಗಿದ್ದು ಪ್ರತಿಯೊಬ್ಬ ಅಡಿಕೆ ಬೆಳೆಗಾರರು ಅಡಿಕೆ ಮಂಡಿಗಳಿಗೆ ಅಡಿಕೆ ಹಾಕಿರಿ ನೀವು ಮದ್ಯವರ್ತಿಗಳಿಗೆ ಅಡಿಕೆ ನೀಡುತ್ತಿರುವುದರಿಂದ ಅವರು ಕಲಬೆರಿಕೆ ಮಾಡಿ ವ್ಯಾಪಾರ ಮಾಡುತ್ತಿದ್ದಾರೆ


ಮುಂದಿನ ದಿನಗಳಲ್ಲಿ ಹೊರ ರಾಷ್ಟ್ರಗಳಿಗೆ ಅಡಿಕೆ ಕಳುಹಿಸಿದಾಗ ಅಡಿಕೆ ಗುಣಮಟ್ಟ ಸರಿಯಿಲ್ಲ ಎಂದು ವಾಪಾಸು ಕಳುಹಿಸುವುದರಿಂದ ನೀವು ಬೆಳೆದ ಅಡಿಕೆಗೆ ಬೆಲೆಯಿಲ್ಲದಂತಾಗಿ ಅಡಿಕೆ ದಾರಣೆ ಕುಂಠಿತವಾಗುತ್ತದೆ ಇದರ ಜೊತೆಗೆ ಪುನ ಎಲೆಚುಕ್ಕಿ ರೋಗ ಕಾಣಿಸಿಕೊಳ್ಳುತ್ತಿದೆ ಇದರಿಂದ ಮತ್ತೆ ಅಡಿಕೆ ಬೆಳೆಗಾರರಿಗೆ ಸಂಕಷ್ಟ ಎದರುರಾಗಲಿದೆ ಎಂದರು.

ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಠೇವಣಿ ಇಡಬೇಡಿ: ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಠೇವಣಿ ಇಡುವಾಗ ಎಚ್ಚರಿಕೆ ಇರಲಿ ರಾಷ್ಟ್ರೀಕೃತ ಬ್ಯಾಂಕ್ಗಳು ಸಾಲ ಕೇಳುವ ಪರಿಸ್ಥಿತಿಯಲ್ಲಿದೆ ಎಚ್ಚರಿಕೆಯಿಂದ ಹೆಜ್ಜೆ ಇಡಿ ಎಂದರು.