ಶಿವಮೊಗ್ಗದಲ್ಲಿ ಸಂಭ್ರಮದ ಗಣೇಶೋತ್ಸವ

ಗಣಪತಿ ಬಪ್ಪ ಮೋರಿಯಾ, ಜೈ ಶ್ರೀರಾಮ್, ಅಬ್ಬಾಬ್ಬ..! ಏನ್ ಕಿರುಚಾಟ, ಏನ್ ಅರಚಾಟ, ಇನ್ನೊಂದು ಕಡೆ ಡೊಳ್ಳು, ತಮಟೆ ಸದ್ದಿಗೆ ಯುವಕರು ಎರಡು ಸ್ಟೇಪ್ ಹಾಕಿ ಸಂತಸಪಟ್ಟರು.


ಹೌದು ಇಂದು ಬೆಳಗ್ಗೆ ಶಿವಮೊಗ್ಗ ನಗರದ ಮೀನಾಕ್ಷಿ ಭವನಕ್ಕೆ ಗಣಪನ್ನು ಕೊಂಡೊಯ್ಯಲು ನಾನಾ ಭಾಗಗಳಿಂದ ಟ್ಯ್ರಾಕ್ಟರ್, ಟೆಂಪೋ, ಆಟೋಗಳಲ್ಲಿ ಬಂದಿದ್ದ ಯುವ ಜನತೆಯ ಸಮೂಹವೇ ಸೇರಿತ್ತು..
ಮೀನಾಕ್ಷಿ ಭವನ ಸೇರಿದಂತೆ ಹಲವು ವೃತ್ತಗಳಲ್ಲಿ ಗಣೇಶ ಮೂರ್ತಿಗಳ ಮಾರಾಟ ಜೋರಾಗಿದ್ದು, ಗಣಪನ ಖರೀದಿಯಲ್ಲಿ ಜನರು ತೊಡಗಿದರು.

ಕಳೆದ ಬಾರಿಗಿಂತ ಈ ಬಾರಿ ಗಣೇಶ ಮೂರ್ತಿ ಮಾರಾಟ ಹೆಚ್ಚಾಗಿದ್ದು,1 ಅಡಿಯಿಂದ 4 ಅಡಿಯವರೆಗಿನ ವಿಘ್ನೇಶ್ವರ ಮೂರ್ತಿಗಳ ಮಾರಾಟವಾಗ್ತಿದೆ. ಹಲವು ರೂಪಗಳಲ್ಲಿರುವ ಗಣಪನನ್ನು ಖರೀದಿಸುತ್ತಿರುವ ಜನ . ಕುಟುಂಬ ಸಮೇತ ಬಂದು ಗಣಪನ ಮೂರ್ತಿಗಳ ಖರೀದಿ ಮಾಡಿದ್ರು.ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳತ್ತ ಜನರ ಒಲವು ಹೆಚ್ಚಾಗಿತ್ತು.


ಹಲವು ಭಾಗಗಳಿಂದ ಆಗಮಿಸಿದ ವಾಹನ ಸವಾರರಿಗೆ ಯಾವುದೇ ಸಮಸ್ಯೆಯಾಗದಂತೆ ನಿಭಾಯಿಸುತ್ತಿದ್ದ ಶಿವಮೊಗ್ಗ ಟ್ರಾಫಿಕ್ ಪೊಲೀಸರ ಕಾರ್ಯ ನಿಜಕ್ಕೂ ಶ್ಲಾಘನೀಯ.


ರವೀಂದ್ರ ನಗರದ ಗಣಪತಿ ದೇವಸ್ಥಾನದಲ್ಲಿ ಪ್ರತಿಷ್ಟಾಪಿಸಿದ್ದ ಪರಿಸರ ಸ್ನೇಹಿ ಗಣಪ ಜನರನ್ನು ಕೈ ಬಿಸಿ ಕರೆಯುವಂತಿತ್ತು..

By admin

ನಿಮ್ಮದೊಂದು ಉತ್ತರ

error: Content is protected !!