ಸುದ್ದಿ ಓದಲು ಈ ಲಿಂಕ್ ಸಹ ಬಳಸಿ:

ಶಿವಮೊಗ್ಗ ಜಿಮ್ ಗಳಲ್ಲಿ ಅಪಾಯಕ್ಕೆ ದಾರಿಯಾಗಿರುವ ಕಳಪೆ ಟ್ರೈನಿಂಗ್!ವಿನೋಬನಗರ ನರೇನ್ ಜಿಮ್ ನಲ್ಲಿ ಕುಸಿದುಬಿದ್ದ ಮಹಿಳೆ/ ಹಣ ಮಾಡೋದೇ ಜಿಮ್ ಕೆಲಸನಾ? https://tungataranga.com/?p=34263

ಮೇಲಿನ 👆👆ಸಂಪೂರ್ಣ ಸುದ್ದಿ ಓದಲು ಕೊಟ್ಟಿರುವ ಲಿಂಕ್ ಬಳಸಿ

ಶಿವಮೊಗ್ಗ,ಸೆ.04:

ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜಿಮ್ ಸೆಂಟರ್ ತೆರೆದು ಆ ಹಣವನ್ನು ಆದಷ್ಟು ಬೇಗನೆ ಬಾಚಬೇಕೆಂಬ ಹೆಬ್ಬಯಕೆ ಹೊಂದಿರುವ ಮಾಲೀಕರ ಜೊತೆಗೆ ಕೈಜೋಡಿಸಿರುವ ಸರಿಯಾದ ತರಬೇತಿ ಇಲ್ಲದ ತರಬೇತುದಾರರು ಜಿಮ್ ತರಬೇತಿಗೆ ಬರುವ ಯುವಕರ ಮನವನ್ನು ದುರ್ಬಳಕೆ ಮಾಡಿಕೊಂಡು ಇಂಜಕ್ಷನ್ ಹಾಗೂ ಪ್ರೊಟೀನ್ ಪೌಡರ್ ನೆಪದಲ್ಲಿ ಸಾಕಷ್ಟು ದೋಚುತ್ತಿರುವ ಹಾಗೂ ಜಿಮ್ ತರಬೇತಿ ಪಡೆಯುವವರ ಆರೋಗ್ಯವನ್ನು ಶಾಶ್ವತವಾಗಿ ಅಳಿಸಿ ಹಾಕುವ ವ್ಯವಸ್ಥಿತ ಜಾಲತಾಣ ನಿರಂತರವಾಗಿ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.


ಬಹುತೇಕ ಜಿಮ್ ಸೆಂಟರ್ ಗಳಲ್ಲಿ ಓಡುವ ಕುದುರೆಗೆ ನೀಡುವ ಇಂಜೆಕ್ಷನ್ ಗಳನ್ನು ತೆಗೆದುಕೊಳ್ಳಲು ತರಬೇತುದಾರರು ಜಿಮ್ ಕಲಿಕೆಗೆ ಬರುವ ಯುವಕರ ಮನದಲ್ಲಿ ತುಂಬಿ, ನಿಮ್ಮ ದೇಹ ಹೊರನೋಟದಲ್ಲಿ ಸೂಪರ್ ಆಗುತ್ತದೆ ಇದನ್ನು ತೆಗೆದುಕೊಳ್ಳಿ ಎಂದು ಪ್ರಚೋದಿಸುವ ಮೂಲಕ ಬಂದ ಲಾಭದಲ್ಲಿ ಮಾಲೀಕ ಹಾಗೂ ತರಬೇತಿದಾರ ತಲಾ 50ರಷ್ಟು ವ್ಯವಹಾರ ಮಾಡುತ್ತಿದ್ದಾನೆ ಎಂಬ ಗಂಭೀರವಾದ ಆರೋಪವನ್ನು ಜಿಮ್ ತರಬೇತಿ ಪಡೆಯುತ್ತಿರುವ ಸಾಕಷ್ಟು ಜನ ಆರೋಪಿಸಿದ್ದಾರೆ.
ಈ ಇಂಜೆಕ್ಷನ್ ಹಾಗೂ ಪೌಡರ್ ಅನ್ನು ಯಾವತ್ತೂ ಬಳಸದೆ ಇದೇ ತರಬೇತಿದಾರ ತಾನು ಮಾತ್ರ ರಾಗಿ ಅಂಬಲಿ ಹಾಗೂ ತರಕಾರಿ ತಿನ್ನುತ್ತಾನೆ. ತರಬೇತಿ ಪಡೆಯುವ ಯುವಕರಿಗೆ ಈ ಈ ಬಗ್ಗೆ ಹೊಸ ರಾಗ ತೆಗೆದು ಇವುಗಳನ್ನು ಮಾರಾಟ ಮಾಡುತ್ತಾನೆ.


ಒಂದು ಮಾಹಿತಿ ಪ್ರಕಾರ ಇವುಗಳು ಹೊರಭಾಗದ ದೇಹದಲ್ಲಿ ಹೊಸ ವರ್ತುಲವನ್ನು ತೋರಿಸಿದರೂ ಸಹ ದೇಹದ ಒಳ ಅಂಗಾಂಗಗಳು ತನ್ನ ಬೆಳವಣಿಗೆಯಲ್ಲಿ ಹಾಗೂ ಅದರ ಚಟುವಟಿಕೆಗಳಲ್ಲಿ ನಿಧಾನವಾಗಿ ಕುಂಠಿತವಾಗುತ್ತಾ ಬರುತ್ತವೆ ಎನ್ನಲಾಗಿದೆ.


ಪ್ರಾಣಿಗಳಿಗೆ ಕೊಡುವ ಇಂಜೆಕ್ಷನ್ ಬಳಕೆ ಅತ್ಯಂತ ಅಪಾಯಕಾರಿಯಾಗಿದ್ದು, ಇದು ನಿಷೇಧಿತವಾಗಿದ್ದರೂ ಸಹ ಗುಪ್ತ ಮಾರ್ಗದಿಂದ ಇಂತಹ ಔಷಧಿಗಳನ್ನು ತರಿಸಿಕೊಂಡು ಮಾರಾಟ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಒಮ್ಮೆ ಎಲ್ಲೆಡೆ ಪರೀಕ್ಷೆ ನೋಡುವ ಅಗತ್ಯವಿದೆ ಎನ್ನಲಾಗಿದೆ.
ಬಹುತೇಕ ಜಿಮ್ ಗಳಲ್ಲಿರುವ ಕಿಟ್ಗಳಲ್ಲಿ ಇಂತಹ ಪೌಡರ್ ಹಾಗೂ ಇಂಜೆಕ್ಷನ್ ಟ್ಯೂಬ್ ಗಳು ಸಿಗುತ್ತವೆ ಎಂದು ಹೇಳಲಾಗುತ್ತದೆ. ರೈಡ್ ಎಂಬ ಹೆಸರು ಹೇಳಿದ ಕ್ಷಣ ನಾಲ್ಕು ದಿನ ಬಚ್ಚಿಡುವ ಕಾಯಕ ಮಾಡುತ್ತಾರೆ ಎಂದು ಇದೇ ತರಬೇತಿ ಪಡೆಯುವ ಯುವಕರು ಹೇಳುತ್ತಿದ್ದರೆ, ಇದು ದೇಹದ ಅಂಗಗಳಿಗೆ ಮಾತ್ರವಲ್ಲದೆ ಕಿಡ್ನಿ ಹಾಗೂ ಹೃದಯ ಸಂಬಂಧಿ ತೊಂದರೆಗಳಿಗೆ ಕಾರಣವೆನ್ನಲಾಗುತ್ತಿದೆ. ಹಾಗಾಗಿ ಜಿಮ್ ತರಬೇತಿ ಪಡೆಯುವ ಯುವಕರು ಇದರತ್ತ ಸೂಕ್ಷ್ಮವಾಗಿ ಎಚ್ಚರ ವಹಿಸಬೇಕು. ರಾಗಿ ಅಂಬಲಿ ಹಾಗೂ ತರಕಾರಿ ಜೊತೆ ಅವರು ಹೇಳಿದಂತೆ ಕೇವಲ ಚಪಾತಿಗೆ ಸೀಮಿತವಾಗದೆ ನಿಯಮಿತವಾಗಿ ಅನ್ನ ಸೇವನೆ ಮಾಡಲೇಬೇಕು ಎಂಬುದು ಸಾಕಷ್ಟು ಜನರ ಅಭಿಪ್ರಾಯ.


ಆರೋಗ್ಯ ಇಲಾಖೆಯವರೇ, ಶಿವಮೊಗ್ಗ ಜಿಲ್ಲಾಧಿಕಾರಿಗಳೇ ಒಮ್ಮೆ ಇತ್ತ ಗಮನಿಸಿ ಸದ್ದು ಮಾಡದೆ ಒಮ್ಮೆ ಎಲ್ಲಾ ಜಿಮ್ ಗಳನ್ನು ಏಕಕಾಲದಲ್ಲಿ ಪರಿಶೀಲಿಸಿ ನೋಡಿ.

By admin

ನಿಮ್ಮದೊಂದು ಉತ್ತರ

You missed

error: Content is protected !!