ಶಿವಮೊಗ್ಗ ಜ.26:
ಕಳೆದ ವರ್ಷವಿಡೀ ವಿಶ್ವವನ್ನೇ ಕಾಡಿದ ಭೀಕರ ಕೊರೋನಾ ಮಾಸುವ ಮುನ್ನವೇ ಶಿವಮೊಗ್ಗ ಸಮೀಪದಲ್ಲಿ ಬಾರೀ ಸ್ಫೋಟ ಸಂಭವಿಸಿದ್ದು ಜನರನ್ನು ಮತ್ತೆ ಆತಂಕಕ್ಕೆ ದೂಡಿದೆ ಎಂದು ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ತಿಳಿಸಿದರು. ಅವರು ಇಂದು ಮಧ್ಯಾಹ್ನ ಕಲ್ಮಠದ ಗುರುಬಸವ ಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವ ಅಂಗವಾಗಿ ನಡೆಯುವ ಸಾಹಿತ್ಯ ಮತ್ತು ಭಾವೈಕ್ಯ ಸಮ್ಮೇಳನದ ಕುರಿತು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಮನುಷ್ಯ ನಿರೀಕ್ಷೆ ಮೀರಿ ವರ್ತಿಸುತ್ತಿರುವುದೇ ಇದಕ್ಕೆ ಕಾರಣ. ಇದು ಜನರಿಗೆ ಪಾಠವಾಗಬೇಕು. ಮನುಷ್ಯ ಮಿತಿ ಇಲ್ಲದೆ ಇರುವುದು ಹಾಗೂ ಅಂತಹ ಕಾರ್ಯಗಳನ್ನು ಮಾಡುತ್ತಿರುವುದು ಮತ್ತು ಪ್ರಕೃತಿ ಮೇಲಿನ ದಬ್ಬಾಳಿಕೆ ಹೆಚ್ಚಾಗುತ್ತಿರುವುದು ಇಂತಹ ಘಟನೆಗೆ ಕಾರಣ. ಎಲ್ಲರೂ ತಮ್ಮನ್ನು ರಕ್ಷಿಸಿಕೊಳ್ಳುವ ಜೊತೆಗೆ ಸಮಾಜವನ್ನು ಉಳಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಕೆಲವರು ಚೇಷ್ಟೆಯ ಸ್ವಭಾವದಿಂದ ವರ್ತಿಸುತ್ತಿರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ. ಅಂತಹವರನ್ನು ಗುರುತಿಸಿ ಶಿಕ್ಷಿಸಬೇಕು. ಇಂತಹ ಘಟನೆಗಳು ಮರುಕಳಿಸಬಾರದು ಎಂದು ಹೇಳಿದರು.