ಶಿವಮೊಗ್ಗ,ಆ.೨೭: ಮಲ್ಲಿಗೇನಹಳ್ಳಿಯ ವಾಜಪೇಯಿ ಬಡಾವಣೆಯಲ್ಲಿರುವ ದೆಹಲಿ ವರ್ಲ್ಡ್ ಸ್ಕೂಲ್‌ನಲ್ಲಿ ಆ.೩೦ ಹಾಗೂ ೩೧ರಂದು ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಲೆಯ ಪ್ರಾಂಶುಪಾಲೆ ದಿವ್ಯಾ ಶೆಟ್ಟಿ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ಕೂಲ್ ಸಿನಿಮಾದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ಈ ಚಲನ ಚಿತ್ರೋತ್ಸವ ೭೦ಕ್ಕೂ ಹೆಚ್ಚು ಸಣ್ಣ ಚಲನ ಚಿತ್ರವನ್ನು ಒಳಗೊಂಡಿದ್ದು, ೧೫ಕ್ಕೂ ಅಧಿಕ ಭಾಷೆಯ ಚಿತ್ರವನ್ನೊಳಗೊಂಡು ೨೦ಕ್ಕೂ ಹೆಚ್ಚು ರಾಷ್ಟ್ರಗಳ ಆಯ್ದ ಅತ್ಯುತ್ತಮ ಚಲನ ಚಿತ್ರವನ್ನು ನಗರದ ವಿಧ್ಯಾರ್ಥಿಗಳು ವೀಕ್ಷಿಸ ಬಹುದಾಗಿದೆ. ಕನ್ನಡದಲ್ಲಿ ೧೦ಕ್ಕೂ ಹೆಚ್ಚು ಸಿನಿಮಾಗಳನ್ನು ಪ್ರದರ್ಶಿಸಲಾಗುವುದು ಎಂದರು.


ಇತ್ತೀಚಿನ ದಿನಗಳಲ್ಲಿ ವಿಧ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಮಕ್ಕಳ ಚಲನ ಚಿತ್ರವನ್ನು ವೀಕ್ಷಿಸುವ ಅವಕಾಶ ಬಹಳ ಕಡಿಮೆಯಿದ್ದು ಈ ನಿಟ್ಟಿನಲ್ಲಿ ಇಂತಹ ಮಕ್ಕಳ ಚಲನ ಚಿತ್ರೋತ್ಸವಗಳು ಮಕ್ಕಳಿಗೆ ಉತ್ತಮ ಸಂದೇಶವನ್ನು ನೀಡಲು ಸಹಕಾರಿಯಾಗಿದೆ.

ಮಕ್ಕಳಲ್ಲಿ ಸೃಜನ ಶೀಲತೆ, ವಿವಿಧತೆಯ ಮಹತ್ವ, ಸಾಮಾಜಿಕ ಸಮಸ್ಯೆ ಹಾಗೂ ಅದರ ಮೂಲ, ಅದನ್ನು ನಿರ್ಮೂಲನೆ ಮಾಡುವ ಬಗೆ, ಸಾಮಾಜಿಕ ಕಳಕಳಿಯನ್ನು ಹೆಚ್ಚಿಸುವ, ವಿವಿಧ ಭಾಷೆ, ಧರ್ಮ ಸಂಸ್ಕೃತಿಯನ್ನು ಗೌರವಿಸುವ, ಮನೋಭಾವನೆಯನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಚಲನ ಚಿತ್ರೋತ್ಸವ ವಿಧ್ಯಾರ್ಥಿಗಳ ವಿಕಸನಕ್ಕೆ ಸಹಕಾರಿಯಾಗಲಿದೆ ಎಂದರು.


ಇಂದಿನ ಶಿಕ್ಷಣ ಕೇವಲ ಓದು ಮತ್ತು ಬರವಣಿಗೆಗೆ ಮಾತ್ರ ಸೀಮಿತವಾಗಿಲ್ಲ, ಅದು ದೃಶ್ಯವನ್ನು ಒಳಗೊಂಡಿದೆ. ಮತ್ತು ಮನೋರಂಜನೆಯ ಮೂಲಕ ಜ್ಞಾನದ ವಿಕಾಸ ಕೂಡ ಆಗಬೇಕಾಗಿದೆ. ಈ ಹಿನ್ನಲೆಯಲ್ಲಿ ಒಂದು ದಿನದ ಫಿಲಂ ಮೇಕರ್ ಕಾರ್ಯಗಾರ ಕೂಡ ಆಯೋಜಿಸಲಾಗಿದ್ದು, ಸುಮಾರು ೪೦ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳಿಗೆ ಈಗಾಗಲೇ ಕರೆ ನೀಡಿದ್ದೇವೆ. ೬ ರಿಂದ ೧೩ ವರ್ಷದ ಮಕ್ಕಳು ಯಾರೇ ಆಗಲಿ ಈ ಚಿತ್ರತೋತ್ಸವಕ್ಕೆ ಪಾಲ್ಗೊಂಡು ವೀಕ್ಷಿಸಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸುರೇಶ್ ನಾಯಕ್ ಇದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!