ಶಿವಮೊಗ್ಗ, ಜೂ.27: ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಬಳಿಯ ಅರೆಬಿಳಚಿ ಗ್ರಾಮದ ಯುವಕನೋರ್ವನಿಗೆ ಕೊರೊನಾ ಸೊಂಕು ಕಾಣಿಸಿಕೊಂಡಿದೆ.
ಈ ಅರಬಿಳಚಿಯ ನಿಗದಿತ ಪ್ರದೇಶವನ್ನ ಸೀಲ್ ಡೌನ್ ಮಾಡಲಾಗಿದೆ. ಯುವಕನನ್ನು ಕೋವಿಡ್ ನ ನಿಗದಿತ ಆಸ್ಪತ್ರೆಗೆ ಸೇರಿಸಲಾಗಿದೆ.
ಇತ್ತೀಚೆಗೆ ಸೌದಿಯಿಂದ ಬಂದ ಈ ಯುವಕ ಮಂಗಳೂರಲ್ಲಿ ಕ್ವಾರಂಟೈನ್ ಮುಗಿಸಿ ಬಂದಿದ್ದ. ಕಳೆದವಾರದ ಹಿಂದಷ್ಟೆ ಸ್ವಂತ ಊರಾದ ಅರಬಿಳಚಿಗೆ ಬಂದಿದ್ದ ಈ ಯುವಕನಿಗೆ ಕೊರೋನ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಆತನ ಮನೆಯ 100 ಮೀಟರ್ ಆಜುಬಾಜು ಸೀಲ್ ಡೌನ್ ಮಾಡಲಾಗಿದೆ.
ಜೂನ್ 11 ರಂದು ಸೌದಿಯಿಂದ ಮಂಗಳೂರಿಗೆ ಬಂದಿದ್ದ ಯುವಕನಿಗೆ ಕ್ವಾರಂಟೈನ್ ಮಾಡಲಾಗಿತ್ತು. ಮಂಗಳೂರಿನಿಂದ ಅರಬಿಳಚಿಗೆ ಹೊರಡುವ ವೇಳೆ ಈತನಿಗೆ ಕೊರೋನ ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್ ಎಂದು ವರದಿ ಬಂದಿತ್ತು.
ಜೂನ್ 20 ರಂದು ಅರೆಬಿಳಚಿಗೆ ಬಂದ ಯುವಕನಿಗೆ ಆರೋಗ್ಯ ಇಲಾಖೆಯವರು 24 ರಂದು ಪರೀಕ್ಷೆಗೆ ಒಳಪಡಿಸಿದ್ದರು. ನಿನ್ನೆ ಕೊರೋನ ಪಾಸಿಟಿವ್ ಎಂದು ವರದಿ ಬಂದ ಬೆನ್ನಲ್ಲೆ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯುವಕನ ಪ್ರಾಥಮಿಕ ಸಂಪರ್ಕವನ್ನೂ ಪತ್ತೆ ಹಚ್ಚಲಾಗಿದ್ದು ಈತನ ಕುಟುಂಬದ 6 ಜನರನ್ನೂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
ಈತ ಅರಬಿಳಚಿ, ಕೈಮರ ಸೇರಿದಂತೆ ಸುತ್ತ ಹತ್ತಾರು ಹಳ್ಳಿಗಳಿಗೆ ಬೇಟಿ ನೀಡಿದ್ದು ಆತಂಕ ಸೃಷ್ಟಿಸಿದೆ.