ತೀರ್ಥಹಳ್ಳಿ,ಆ.8: ಕಳೆದ ಮೂರು ವರ್ಷಗಳಿಂದ ಮಂಡಗದ್ದೆ ಮತ್ತು ಮೇಗರವಳ್ಳಿ (ಆಗುಂಬೆ) ವಲಯ ಅರಣ್ಯ ಅಧಿಕಾರಿಗಳಾಗಿ ಅರಣ್ಯ ರಕ್ಷಣೆ ,ಅರಣ್ಯದಲ್ಲಿ ಆಕ್ರಮಗಳನ್ನು ನಿಯಂತ್ರಣ, ಮಣ್ಣು ಮಾಫಿಯಾ ,ಮರಳು ಮಾಫಿಯಾದ ವಿಚಾರಗಳಲ್ಲಿ ಹದ್ದಿನ ಕಣ್ಣಿಟ್ಟು ದಕ್ಷತೆ ಮತ್ತು
ಪ್ರಾಮಾಣಿಕತೆಯಿಂದ ಕೆಲಸ ಮಾಡಿದ ಮಂಡಗದ್ದೆ ವಲಯ ಅರಣ್ಯ ಅಧಿಕಾರಿ ಆದರ್ಶ.ಎಂ.ಪಿ. ರವರನ್ನು ಕೊಪ್ಪ ವಿಭಾಗದ ಚಿಕ್ಕ ಅಗ್ರಹಾರ (ಎನ್ ಆರ್ ಪುರ) ವಲಯ ಅರಣ್ಯ ಅಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.
ಇದಕ್ಕೆ ಸ್ಥಳೀಯರು, ಹೋರಾಟಗಾರರು, ಪರಿಸರ ಪ್ರೇಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೆ ಆದರ್ಶ ಅವರು ಮುಖ್ಯಮಂತ್ರಿಗಳ ಪ್ರಶಸ್ತಿ ಪಡೆದಿದ್ದರು.
ಮಂಡಗದ್ದೆ ವಲಯ ಅರಣ್ಯ ಅಧಿಕಾರಿಯಾಗಿ ವಿನಯಕುಮಾರ್ ಆರ್. ಬೇಲೂರು ಹಾಸನ ಜಿಲ್ಲೆಯಿಂದ ಮಂಡಗದ್ದೆಗೆ ವರ್ಗಾವಣೆ ಮಾಡಲಾಗಿದೆ.
ಮಂಡಗದ್ದೆಯ ಆದರ್ಶರಂತೆ ಉತ್ತಮ ಕೆಲಸ ಮಾಡಿ ಜನರಿಂದ ಹೆಸರುಗಳಿಸಿರುವ ತಮ್ಮ ವಲಯದಲ್ಲಿ ಆಕ್ರಮಗಳಿಗೆ ಅವಕಾಶ ಕೊಡದೆ ಕರ್ತವ್ಯ ನಿರ್ವಹಿಸಿದ ಜನಮನಗಳಿಸಿದ ಮೇಗರವಳ್ಳಿ (ಆಗುಂಬೆ) ಮಧುಕರ್ ಎನ್.ವಿ. ರವರನ್ನು
ಶೃಂಗೇರಿ ವಲಯ ಅರಣ್ಯ ಅಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದ್ದು, ಅವರ ಜಾಗಕ್ಕೆ ಹೇಮಗಿರಿ ಅಂಗಡಿ ಮಂಗಳೂರಿನಿಂದ ಮೇಗರವಳ್ಳಿಗೆ ವರ್ಗಾವಣೆ ಮಾಡಲಾಗಿದ್ದು, ತೀರ್ಥಹಳ್ಳಿಯ ವಲಯ ಅರಣ್ಯ ಅಧಿಕಾರಿ ಡಾಕ್ಟರ್ ಲೋಕೇಶ್ ಎಸ್. ಎಲ್. ರವರನ್ನು ಮುಳಬಾಗಿಲು ಕೋಲಾರ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ತೀರ್ಥಹಳ್ಳಿಗೆ ಸಂಜಯ್ .ಬಿ. ಎಸ್. ನಗರ ವಲಯದಿಂದ ವರ್ಗಾವಣೆ ಮಾಡಲಾಗಿದೆ.
ತೀರ್ಥಹಳ್ಳಿಯಲ್ಲಿ ಈ ಹಿಂದೆ ವಲಯ ಅರಣ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅಂದಿನ ನ್ಯಾಯಾಧೀಶರಾದ ಮಾನ್ಯ ಸಂದೀಪ್ ಸಾಲಿಯಾನ ರವರೊಂದಿಗೆ ಸೇರಿಕೊಂಡು ತುಂಗಾ ಕಾಲೇಜು ಆವರಣ, ಪ್ರವಾಸಿ ಮಂದಿರ, ಕುಶಾವತಿ ನೆಹರು ಪಾರ್ಕ್,
ಎಡೇಹಳ್ಳಿ ಕೆರೆಯ ಮೇಲ್ಭಾಗದ ಅಬ್ದುಲ್ ಕಲಾಂ ಉದ್ಯಾನವನ ಮುಂತಾದ ಹತ್ತಾರು ಕಡೆಯಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಇಂದಿಗೂ ಗಿಡಗಳನ್ನು ಸಂರಕ್ಷಣೆ ಮಾಡಿ ಮಾದರಿಯಾಗಿದ್ದ ಮಧುಸೂದನ್ .ಎ .ರವರನ್ನು ತೀರ್ಥಹಳ್ಳಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸರ್ಕಾರ ವರ್ಗಾವಣೆ ಮಾಡಿ ಆದೇಶಿಸಿದೆ. ವರದಿ: ಲಿಯೋಅರೋಜ