https://tungataranga.com/?p=33387
ಒಳ್ಳೆಯವರಾಗಿದ್ರೆ ನಾಕಾಣೆ ‘ಸಾಲ’ ಸಿಗೊಲ್ಲ!, ಗಜೇಂದ್ರಸ್ವಾಮಿ ಅವರ ಇಂದಿನ ನೆಗಿಟೀವ್ ಥಿಂಕಿಂಗ್ ಅಂಕಣ ಓದಿ ಕ್ಲಿಕ್ link
ತುಂಗಾತರಂಗ ಗುಂಪಲ್ಲಿ ಇಲ್ಲದವರು ಇಲ್ಲಿ ಸೇರಿ
https://chat.whatsapp.com/HURi0BXGAC8G7NsgyLJXXt
ಸಾಕಷ್ಟು ಪ್ರಚಾರ ಪಡೆದಿರುವ, ಓದುಗರ ಅಪಾರ ಮೆಚ್ಚುಗೆಗೆ ಪಾತ್ರವಾದ #ನೆಗೆಟಿವ್ ಥಿಂಕಿಂಗ್” ಅಂಕಣ ಪ್ರತಿವಾರ ಸಿದ್ಧವಾಗುವ ಹೊತ್ತಿನಲ್ಲಿ ಓದುಗದೊರೆಗಳು ಹೊಸ ಹೊಸ ಮಾಹಿತಿಗಳನ್ನು ನೀಡುತ್ತಿರುವುದು ಅತ್ಯಂತ ಸಂತೋಷದ ಸಂಗತಿ.
ಇಲ್ಲಿ ಯಾವುದೇ ವ್ಯಕ್ತಿಯನ್ನು ಯಾವುದೇ ಘಟನೆಯನ್ನು ಆಧರಿಸಿ ಯಾವುದೇ ದುರುದ್ದೇಶದಿಂದ ಬರೆದಂತಹ ವಿಷಯವಲ್ಲ ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ಮತ್ತೊಮ್ಮೆ ಓದುಗವಲಯದ ಗಮನಕ್ಕೆ ತರಲು ಇಚ್ಚಿಸುತ್ತೇವೆ.
ಪ್ರತಿವಾರ ಅಂಕಣ ಹೊರಬಂದಾಕ್ಷಣ ಅದರ ಸಾಧ್ಯತೆಗಳನ್ನು ಅನುಭವಿಸಿದ ನೋವುಗಳನ್ನು ಆಯಾ ಓದುಗ ತನ್ನ ಮನೋವ್ಯಾಪ್ತಿಯಲ್ಲಿ ವಿಸ್ತರಿಸಿಕೊಳ್ಳುತ್ತಿದ್ದಾನೆ. ಹಾಗೆಯೇ ಒಂದಿಷ್ಟು ಮಾಹಿತಿಗಳನ್ನು ಲೇಖಕರ ಜೊತೆ ಹಂಚಿಕೊಳ್ಳುತ್ತಿರುವುದು ಸರಿಯಷ್ಟೇ.
ಯಾರೂ ಯಾವುದೇ ಘಟನೆಯ ರೂವಾರಿ ನಾನು ಎಂಬ ಕಲ್ಪನೆಯನ್ನು ಹೊಂದಿಲ್ಲ. ಅವರವರ ಮನಸ್ಸಿನಲ್ಲಿ ಅವರವರು ಇಟ್ಟುಕೊಂಡಿರುತ್ತಾರೆ.
ಆದರೆ ಓದುಗರೊಬ್ಬರು ನನ್ನ ವಿಷಯ ಏಕೆ ಬರೆದಿರಿ ಎಂದು ನೇರವಾಗಿ ಪ್ರಶ್ನಿಸಿ ಬಿಟ್ಟರಿ. ನಿಜಕ್ಕೂ ಅಚ್ಚರಿಯಾಯಿತು. ಇಡೀ ಘಟನೆಯಲ್ಲಿ ಯಾವುದೇ ವ್ಯಕ್ತಿಯ ಹೆಸರನ್ನಾಗಲಿ, ಧರ್ಮವನ್ನಾಗಲಿ, ಜಾತಿಯನ್ನಾಗಲಿ, ಯಾವುದೇ ವಿಷಯವನ್ನಾಗಲಿ ಉದ್ದೇಶಿಸಿ ಬರೆದಿಲ್ಲ. ಇಡೀ ಸಮಾಜದ ಈಗಿನ ವಾಸ್ತವ ಸ್ಥಿತಿಗಳ ದುರಂತಗಳು ಇಲ್ಲಿವೆ. ಇರುತ್ತವೆ. ಇದು ಇಲ್ಲಿ ನಡೆದಿರುವ ಅವಾಂತರಗಳ ಚಿತ್ರಣವನ್ನು ನೀಡುವ ಪ್ರಯತ್ನ ಮಾಡಿದ್ದೇವೆ. ಆದರೆ ಆ ಅವಾಂತರಗಳ ರೂವಾರಿ ನಾನೇ ಎಂದು ಹೆಗಲು ಮುಟ್ಟುಕೊಂಡು ನೋಡಿಕೊಳ್ಳುವ, ಪ್ರಶ್ನಿಸುವ ಓದುಗರಿಗೆ ನೀವ್ ಅವರಲ್ಲ, ನೀವು ಒಳ್ಳೆಯವರು, ದೇವರ ತುಂಡು ಎಂದು ಹೇಳಬೇಕೇ? ಅರ್ಥವಾಗಲಿಲ್ಲ.
ಸಮಾಜಮುಖಿಯಾಗಿ ಬರೆದ ಈ ಲೇಖನ ಇಂದಿನ ವಾಸ್ತವದ ನೈಜ ಚಿತ್ರಣಗಳ ಒಂದು ಸಂದೇಶ ಅಷ್ಟೇ. ಹೆಗಲು ಮುಟ್ಟಿಕೊಂಡು ನೋಡಿಕೊಂಡ ಓದುಗನ ಮಾತು ಕೇಳಿ ನಿಜಕ್ಕೂ ನಗು ಬಂತು.
ಇದು ಯಾರನ್ನೂ ಯಾವುದನ್ನೂ ಉದ್ದೇಶಿಸಿ ಬರೆದ ಅಂಕಣವಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇವೆ.
– ಲೇಖಕರು/ ಸಂಪಾದಕರು
ನೆಗಿಟೀವ್ ಥಿಂಕಿಂಗ್- ರೆಸ್ಪಾನ್ಸ್, ಓದುಗರಿಗೆ ಅಭಿನಂದನೆ
ಕೆಲವೇ ಕೆಲವು ಬೆರಳೆಣಿಕೆಯ ಜನ ಹೊಂದಿರುವ ವಿಚಿತ್ರ ವಿಕೃತ ಮನಸುಗಳನ್ನು ಕುರಿತ ಬರಹ ಇದು. ನೊಂದವರಿಗೆ ಸಹಾಯ ಮಾಡಿಸುವ ವಿಚಾರದಲ್ಲಿ ಮದ್ಯವರ್ತಿಗಳಾಗಿ ಎತ್ತುವಳಿ ಮಾಡುವ ಕೆಲವರ ವರ್ತನೆ ಇದು.
ನಮ್ಮ ನಡುವಿನ ಸಕಾರಾತ್ಮಕ ಚಿಂತನೆಯ ಮನಸುಗಳು ಇಲ್ಲಿ ಅನುಭವಿಸುವ ನರಕ ಯಾತನೆಯನ್ನು ನಿಮ್ಮ ಮುಂದೆ ಕಟ್ಟಿಡುವಂತಹ ಪ್ರಯತ್ನವಾದ ಈ ನೆಗೆಟಿವ್ ಥಿಂಕಿಂಗ್ ಏಳನೇ ಅಂಕಣದ ಮತ್ತೊಂದು ವಿಶೇಷ “ಒಳ್ಳೆಯವರಾಗಿದ್ರೆ ನಾಕಾಣೆ ಸಾಲ ಸಿಗೊಲ್ಲ” ಓದಿ.
ನೆಗೆಟಿವ್ ಥಿಂಕಿಂಗ್ ಕಾಲಂಗೆ ಓದುಗರಿಂದ ಸಾಕಷ್ಟು ಪೂರಕವಾದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ತಾವು ಅನುಭವಿಸಿದ ಅನುಭವಗಳ ಎಳೆಗಳನ್ನು ಸಹ ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
ತುಂಗಾತರಂಗ ದಿನಪತ್ರಿಕೆ ಹೊಸಬಗೆಯ ಸಾಹಿತ್ಯದ ಬರಹಗಳಿಗೆ ಸದಾ ಪೂರಕ ವಾತಾವರಣವನ್ನು ಅವಕಾಶವನ್ನು ಕಲ್ಪಿಸುತ್ತಲೇ ಬಂದಿದೆ. ಕಥೆ ಕವನ ಲೇಖನ ಅಂಕಣಗಳ ಜೊತೆ ಇಂತಹ ಅಂಕಣಗಳನ್ನು ಸಹ ಓದುಗರು ನಿರೀಕ್ಷಿಸುತ್ತಿದ್ದರು.
ಕೇವಲ ಸಕಾರಾತ್ಮಕ ಚಿಂತನೆಗಳನ್ನು ಜನರ ಮುಂದಿಟ್ಟರೆ ಅದರಿಂದ ಸಕಾರಾತ್ಮಕ ಮನಸ್ಸು ಬೆಳೆಯುವುದು ಎಂಬ ನಂಬಿಕೆ ನಮ್ಮದಲ್ಲ. ಎಲ್ಲಿ ವಿಕಾರಾತ್ಮಕ ಚಿಂತನೆಗಳು, ವಿಜೃಂಭಿಸುವುದಿಲ್ಲವೋ ಅಲ್ಲಿಯವರೆಗೆ ಸಕಾರಾತ್ಮಕ ಚಿಂತನೆಗಳಿಗೆ ಬೆಲೆ ಸಿಗುವುದಿಲ್ಲ. ಅಂತಹ ಬೆಲೆ ಸಿಗುವ ಹಿನ್ನೆಲೆಯಲ್ಲಿ ವಿಕಾರಾತ್ಮಕ ಮನಸುಗಳಲ್ಲಿ ಹುದುಗಿರುವ ಮನದ ಜ್ವಾಲೆಯನ್ನು ಚಿಕ್ಕ ಪ್ರಯತ್ನಗಳ ಮೂಲಕ ತಮ್ಮ ಮುಂಡಿಡುವ ಇಂತಹ ಅಂಕಣಗಳಿಗೆ ಓದುಗರಿಂದ ಬಾರಿ ಹೆಚ್ಚಿನ ಪ್ರೋತ್ಸಾಹ ದೊರಕಿದೆ. ಎಲ್ಲಾ ಓದುಗ ದೊರೆಗಳಿಗೆ ಅಭಿನಂದನೆಗಳು.
ಈಗಾಗಲೇ ಯಾರ್ಗೂ ಸಾ
ಲ ಕೊಡೇಡ್ರಿ, ಯಾರ್ಗೂ ಪುಗ್ಸಟ್ಟೆ ಅಯ್ಯೋ ಪಾಪ ಅನ್ಬೇಡ್ರಿ, ಯಾರೇ ಆಗ್ಲಿ ತುಂಬಾ ಹಚ್ಕೋಬ್ಯಾಡ್ರಿ, ಗುಮ್ಮಣ್ಗುಸ್ಕ ಸಾವಾಸ ಬ್ಯಾಡ್ರಿ, ಹಣ ಮಾಯೆನಾ? ಸಮಾಜಸೇವೆ ಹೆಸರಿನಲ್ಲಿ ಎತ್ತುವಳಿ ವಂಚಕರಿದ್ದಾರೆ. ಎಚ್ಚರ” ಓದಿದ್ದೀರಿ. ಇಂದು ಇಂದಿನ ವಿಶೇಷ ನೋಡಿ.
ಒಟ್ಟಾರೆ ಇಲ್ಲಿ ನೆಗೆಟಿವ್ ಥಿಂಕಿಂಗ್ ಎಂದರೆ ಸಮಾಜದ ಇಡೀ ಮುಖವಾಣಿ ಅಲ್ಲ. ಸಮಾಜದಲ್ಲಿರುವ ಕೆಲವೇ ಕೆಲವು ಮುಖಗಳ ದರ್ಶನ ಅಷ್ಟೇ. ಈ ಮುಖಗಳಿಂದ ಜನರು ಅನುಭವಿಸುವ ಗೋಳಿನ ಕಥೆಗಳನ್ನು ಅಂಕಣದ ಮೂಲಕ ಸೂಕ್ಷ್ಮವಾಗಿ ತಮ್ಮ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುವ ಪ್ರಯತ್ನವಾಗಿದೆ. ನಿಮ್ಮ ಅಭಿಪ್ರಾಯ ನಮಗೆ ಸದಾ ಇರಲಿ
– ಸಂ