“ಕಾರ್ಬನ್ ಫೈಬರ್ ದೋಟಿ ಪೂರೈಸುವ ಕಂಪನಿಗಳಾದ, ವಿ ಆಗ್ರೋ ಟೆಕ್‌ನಂತಹ ಕಂಪನಿಯು ೨೦೨೪ರ ಜುಲೈ ೩ರಂದು ನೀಡಿದ ಮಧ್ಯಂತರ ತಡೆಯಾಜ್ಞೆ ಪ್ರಶ್ನಿಸಿ ಬೆಂಗಳೂರಿನ ಕರ್ಮಿಷಿಯಲ್ ಕೋರ್ಟ್ಗೆ ಮೊರೆ ಹೋಗಿದೆ. ರೈತರು ದೋಟಿ ಖರೀದಿಸುವ ಹಕ್ಕನ್ನು ಕಸಿದು, ದುರುದ್ದೇಶ ಹಾಗೂ ಮಾರುಕಟ್ಟೆಯಲ್ಲಿ

ಏಕಸ್ವಾಮ್ಯತೆ ತರುವ ಕುತಂತ್ರದ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡುವ ಅವಕಾಶವು ನಮ್ಮದಾಯಿತು. ““ಇನೋಮೆಕ್ ಕಂಪನಿಯು (ಹೈಟೆಕ್ ದೋಟಿ ) ಯಾಂತ್ರೀಕರಣಕ್ಕಾಗಿ ಮಾತ್ರ ಪೇಟೆಂಟ್ ಪಡೆದಿದ್ದು, ಅದರ ವಾಯಿದೆ ಕೂಡ ೨೦೨೨ರಲ್ಲಿಯೇ ಮುಗಿದಿದೆ. ಇನೋಮೆಕ್ ಕಂಪನಿಯು ಟೆಲಿಸ್ಕೋಪಿಕ್ ಪೋಲ್, ಬಣ್ಣ ಹಾಗೂ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಉತ್ಪನ್ನಕ್ಕೆ ಪೇಟೆಂಟ್ ಪಡೆದಿಲ್ಲ.

ಮಧ್ಯಂತರ ತಡೆಯಾಜ್ಞೆ ಕೋರಿ ಕಂಪನಿಯು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ವೇಳೆಯೂ ಆ ಕಂಪನಿಯ ಪೇಟೆಂಟ್ ಅವಧಿ ಮುಗಿದಿದೆ. ಆದರೆ, ಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಈ ಕುರಿತು ಉಲ್ಲೇಖ ಮಾಡಿಲ್ಲ. ನ್ಯಾಯಾಲಯಕ್ಕೆ ತಪುö್ಪ ಮಾಹಿತಿ ಒದಗಿಸುವುದು ಕೂಡ ಶಿಕ್ಷಾರ್ಹ ಅಪರಾಧವಾಗಿದ್ದು, ನಮ್ಮ ವಕೀಲರು ಅವರ ಉದ್ದೇಶವನ್ನು ನ್ಯಾಯಾಲಯಕ್ಕೆ ತಿಳಿಸಿದರು. ಹಾಗೆಯೇ, ಮಧ್ಯಂತರ

ತಡೆಯಾಜ್ಞೆ ಹೇಗೆ ಅಸಮಂಜಸ ಎಂಬುದರ ಕುರಿತು ವಾದಿಸಿದರು. ಇದಾದ ಬಳಿಕ ಇನೋಮೆಕ್ ಕಂಪನಿಯು ಕೊನೆಗೂ ಸರಿಯಾದ ಸ್ಪಷ್ಟನೆ ನೀಡಲು ಆಗದೆ ಅರ್ಜಿಯನ್ನು ಹಿಂಪಡೆದಿದೆ. ನ್ಯಾಯಾಲಯವು ಕೋರ್ಟ್ ಶುಲ್ಕವನ್ನು ಕಟ್ಟುವಂತೆ ಆದೇಶಿಸಿ ಅರ್ಜಿಯನ್ನು ಹಿಂಪಡೆಯಲು ಸೂಚಿಸುವ ಜತೆಗೆ ಎಚ್ಚರಿಕೆಯನ್ನೂ ನೀಡಿದೆ. ““ಕಾರ್ಬನ್ ಫೈಬರ್ ಟೆಲಿಸ್ಕೋಪಿಕ್ ಪೋಲ್‌ಗಳನ್ನು ಚೀನಾದಲ್ಲಿ ಉತ್ಪಾದಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿರುವ ಬಹುತೇಕ ಪೂರೈಕೆದಾರರು ಇವುಗಳನ್ನು

ಆನ್‌ಲೈನ್ ಮೂಲಕ ಖರೀದಿಸುತ್ತಿದ್ದು, ತತ್‌ಕ್ಷಣವೇ ಬಳಸಲು ಇವು ನೆರವಾಗುತ್ತಿವೆ. ಹಾಗಾಗಿ, ಯಾರೂ ಕೂಡ ಟೆಲಿಸ್ಕೋಪಿಕ್ ಪೋಲ್‌ಗಳ ಪೇಟೆಂಟ್‌ಗೆ ಅರ್ಜಿ ಹಾಕುವ ಹಕ್ಕು ಹೊಂದಿಲ್ಲ. ತುಂಬ ಕಂಪನಿಗಳು ಪೋಲ್‌ಗಳನ್ನು ಅಮೆರಿಕ ಸೇರಿ ಬೇರೆ ಬೇರೆ ದೇಶಗಳಲ್ಲಿ ತಯಾರಿಸಲಾಗುತ್ತಿದೆ ಎಂಬುದಾಗಿ ರೈತರಿಗೆ ನೀಡುತ್ತಿರುವ ಮಾಹಿತಿಯು ತಪ್ಪಾಗಿದೆ. ““ರೈತರು ಗುಣಮಟ್ಟದ ಕಾರ್ಬನ್ ಫೈಬರ್ ಪೋಲ್‌ಗಳನ್ನು

ಸ್ಪರ್ಧಾತ್ಮಕ ದರದಲ್ಲಿ ಖರೀದಿಸುವ, ಕಂಪನಿಗಳ ಗುಣಮಟ್ಟದ ಆಧಾರದ ಮೇರೆ ಖರೀದಿ ಮಾಡುವ, ಸೇವೆ ಪಡೆಯುವ ಸ್ವಾತಂತ್ರ÷್ಯ ಹೊಂದಿದ್ದಾರೆ. ಕ್ರಿಮಿನಾಶಕ ಸಿಂಪಡಣೆ, ಕೊಯ್ಲು, ಮರಗಳ ಟ್ರಿಮ್ಮಿಂಗ್ ಸೇರಿ ಹಲವು ಕೃಷಿ ಚಟುವಟಿಕೆಗಳಿಗೆ ಬಳಸುವ ಹ್ಯಾಂಡ್

ಟೂಲ್‌ಗಳ ಪೂರೈಕೆಗೆ ತುಂಬ ಕಂಪನಿಗಳು ಸರ್ಕಾರದ ಸಬ್ಸಿಡಿಯನ್ನೂ ಪಡೆದಿವೆ. ““ರೈತರು ಗುಣಮಟ್ಟದ ಕಾರ್ಬನ್ ಫೈಬರ್ ಟೆಲಿಸ್ಕೋಪಿಕ್ ಪೋಲ್‌ಗಳನ್ನು ಖರೀದಿಸಲು ಹಾಗೂ ಯಾವುದೇ ಮಾಹಿತಿ ಬೇಕಿದ್ದರೂ ವಿ ಆಗ್ರೋ ಟೆಕ್‌ನ ಮೊಬೈಲ್ ನಂಬರ್ ೯೭೪೧೦೮೨೫೦೨ / ೬೦೨ಗೆ ಕರೆ ಮಾಡಬಹುದಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!