ಶಿವಮೊಗ್ಗ; ಜು ೨೮-೨೯ ರಂದು ನಗರದ ಗುಡ್ಡೇಕಲ್ ಬಾಲಸುಬ್ರಹ್ಮಣ್ಯ ಸ್ವಾಮಿಯ ಅಡಿಕೃತಿಕೆ ಜಾತ್ರೆ ನಡೆಯುತ್ತಿರುವ ವ್ಯಾಪ್ತಿಯ ನಿವಾಸಿಗಳ ಸಂಚಾರಕ್ಕೆ ಅಡಚಣೆ ಆಗದಂತೆ ಜಿಲ್ಲಾಡಳಿತದ ಕ್ರಮವಹಿಸಬೇಕೆಂದು ನಾಗರೀಕರು ಮನವಿ ಮಾಡಿಕೊಂಡಿದ್ದಾರೆ.


ಪ್ರತಿವರ್ಷ ಜಾತ್ರೆಯ ಸಂದರ್ಭದಲ್ಲಿ ತುಂಗಾ ಸೇತುವೆಯಿಂದಲೆ ಹೊಳೆಹೊನ್ನೂರು ರಸ್ತೆಗೆ ಎಲ್ಲಾ ಬಗೆಯ ವಾಹನ ಸಂಚಾರವನ್ನು ನಿಷೇಧಿಸುತ್ತಿದ್ದರಿಂದ ಶಾಂತಮ್ಮ ಲೇಔಟ್, ಚಿಕ್ಕಲ್,ಸಿದ್ದೇಶ್ವರ ನಗರ,

ಗುರುಪುರ ನಿವಾಸಿ ಗಳಿಗೆ, ಶಾಲಾ – ಕಾಲೇಜು ವಿದ್ಯಾರ್ಥಿಗಳು ಪರದಾಡಬೇಕಿತ್ತು.


ಈ ವರ್ಷ ಮೇಲ್ಸುತುವೆ ನಿರ್ಮಾಣವಾಗಿರುವುದರಿಂದ ಆ ರಸ್ತೆ ಬಳಕೆ ಕೂಡ ಆಗುತ್ತಿದೆ. ಜಾತ್ರೆ ಗೆ ಬರುವ ಭಕ್ತಾದಿಗಳಿಗೆ ಯಾವುದಾದರೂ ಒಂದು ರಸ್ತೆ ಬಳಕೆಗೆ ಅವಕಾಶ ಮಾಡಿಕೊಡುವ ಮೂಲಕ ಮತ್ತೊಂದು

ರಸ್ತೆಯಲ್ಲಿ ಜಾತ್ರಾ ವ್ಯಾಪ್ತಿಯ ನಿವಾಸಿಗಳ ಲಘುವಾಹನಗಳ ಸಂಚಾರಕ್ಕೆ ಅವಕಾಶಮಾಡಿಕೊಡಬೇಕಾಗಿ ಶಾಂತಮ್ಮ

ಲೇಔಟ್, ಚಿಕ್ಕಲ್,ಸಿದ್ದೇಶ್ವರ ನಗರ, ಗುರುಪುರ ನಿವಾಸಿಗಳು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!