???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
ಸಾಗರ, ಜು.೨೩- ಮಳೆ ಅನಾಹುತದಿಂದ ಪೂರ್ಣ ಮನೆ ಕಳೆದುಕೊಂಡವರಿಗೆ ರಾಜ್ಯ ಸರ್ಕಾರ ೫ ಲಕ್ಷ ರೂ. ಪರಿಹಾರ ನೀಡಬೇಕು. ಭಾಗಶ: ಮನೆ ಕಳೆದುಕೊಂಡವರಿಗೆ ೧.೨೫ ಲಕ್ಷ ರೂ. ಪರಿಹಾರ ನೀಡಬೇಕು ಎಂದು ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಚ್.ಹಾಲಪ್ಪ ಹರತಾಳು ಆಗ್ರಹಿಸಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಪೂರ್ಣ ಮನೆ ಕಳೆದುಕೊಂಡವರಿಗೆ ೯೨ ಸಾವಿರ ರೂ. ಪರಿಹಾರ ನೀಡಲಾಗುತ್ತಿತ್ತು. ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ನಂತರ ಇದನ್ನು ೫ ಲಕ್ಷ ರೂ. ಗೆ ಏರಿಸಿದರು. ಭಾಗಶ: ಮನೆ ಕಳೆದುಕೊಂಡವರಿಗೆ ೧.೨೫ ಲಕ್ಷ ರೂ. ಪರಿಹಾರ ಕೊಡಲು ಆದೇಶಿಸಿದ್ದರು. ತಕ್ಷಣ ಅವರಿಗೆ ಆಹಾರ, ದವಸ ಧಾನ್ಯ ಇತರೆ ಖರ್ಚುಗಳಿಗೆ ೧೦ ಸಾವಿರ ರೂ. ಆಯಾ ಗ್ರಾಮ ಪಂಚಾಯಿತಿ ಅಥವಾ ನಗರಸಭೆ ಕೊಡಲು ತಿಳಿಸಿತ್ತು. ಆದರೆ ಈಗಿನ ರಾಜ್ಯ ಸರ್ಕಾರ ಯಾವ ಸ್ಪಷ್ಟ ಆದೇಶವನ್ನೂ ಮಾಡಿಲ್ಲ. ತಕ್ಷಣ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಎರಡು ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು ಮಳೆಹಾನಿಗೀಡಾದ ಪ್ರದೇಶ, ಮನೆಕಳೆದುಕೊಂಡ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಆದರೆ ಸರ್ಕಾರದಿಂದ ಯಾವ ಹೇಳಿಕೆಯೂ ಬಂದಿಲ್ಲ. ಇಂಥ ಸಂದರ್ಭದಲ್ಲಿ ಸರ್ಕಾರ ಪರಿಹಾರದ ಪ್ರಕಟಣೆಯನ್ನು ಹೊರಡಿಸಬೇಕು. ಈಗ ಸದನ ನಡೆಯುತ್ತಿರುವುದರಿಂದ ಶಾಸಕ ಬಿ.ವೈ.ವಿಜಯೇಂದ್ರ ಅವರು ಈ ಕುರಿತು ಪ್ರಸ್ತಾಪ ಮಾಡಿ ಕ್ರಮ ಕೈಗೊಳ್ಳಲು ಸರ್ಕಾರವನ್ನು ಒತ್ತಾಯಿಸಿದ್ದಾರೆ. ನಮ್ಮ ತಾಲ್ಲೂಕಿನಲ್ಲಿ ೪೮ ಹಾಗೂ ಹೊಸನಗರದಲ್ಲಿ ೨೭ ಮನೆಗಳು ಬಿದ್ದುಹೋಗಿವೆ ಎಂದು ಅಧಿಕಾರಿಗಳು ಮಾಹಿತಿ

ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಒಂದು ದಿನ ಕಾಟಾಚಾರಕ್ಕೆ ಬಂದು ಹೋಗಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಯಾವುದೇ ಸಭೆ ನಡೆಸಿಲ್ಲ. ಜಿಲ್ಲಾಧಿಕಾರಿಗಳ ಬಳಿ ಹಣ ಇದೆ. ಆದರೂ ಸಂಬಂಧಿಸಿದವರಿಗೆ ಪರಿಹಾರ ನೀಡಲು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಮನೆ ಬಿದ್ದುಹೋದವರಿಗೆ ಪರಿಹಾರ ನೀಡಲು ಹಕ್ಕುಪತ್ರ ಇರಬೇಕೆಂದೇನೂ ಇಲ್ಲ. ಅಧಿಕೃತ, ಅನಧಿಕೃತ ಎಂದು ನೋಡಬಾರದು. ಜನರು ವಾಸವಿದ್ದರೆ ಸಾಕು, ಪರಿಹಾರ ನೀಡಬೇಕು. ಆ ಮನೆ ಕಟ್ಟಲು ಲೈಸೆನ್ಸ್ ಕೊಟ್ಟಿದ್ದಾರೆ, ಗ್ರಾಮ ಪಂಚಾಯಿತಿಯವರು ಕಂದಾಯ

ಕಟ್ಟಿಸಿಕೊಂಡಿರುತ್ತಾರೆ. ವಿದ್ಯುತ್, ನೀರಿನ ಸಂಪರ್ಕ ಕೊಟ್ಟಿದ್ದಾರೆ. ರೇಷನ್ ಕಾರ್ಡ್ ಕೊಟ್ಟಿದ್ದಾರೆ. ಆಧಾರ್ ಕಾರ್ಡ್ ಕೊಟ್ಟಿದ್ದಾರೆ. ಇವೆಲ್ಲ ಇದ್ದಾಗ ಮನೆ ಅನಧಿಕೃತ ಎಂದು ಹೇಳಬಾರದು. ಈ ಮನೆಗೆ ಹಕ್ಕುಪತ್ರ ಇಲ್ಲ ಎಂದು ಪ್ರಕೃತಿಗೆ ಗೊತ್ತೇ ಎಂದು ಪ್ರಶ್ನಿಸಿದ ಅವರು, ಮನೆ ಕಳೆದುಕೊಂಡ ಎಲ್ಲರಿಗೂ ಪರಿಹಾರ ನೀಡಬೇಕು ಎಂದು ಪ್ರತಿಪಾದಿಸಿದರು. ನಮ್ಮ ಸರ್ಕಾರವಿದ್ದಾಗ ೫ ಲಕ್ಷ ರೂ. ಕೊಟ್ಟಿದ್ದೇವೆ. ಈಗ ಅದನ್ನು ೮-೧೦ ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಮೊನ್ನೆ ಕಾರವಾರಕ್ಕೆ ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ. ಮನೆ ಕಳೆದುಕೊಂಡ ವಾಸ್ತವ ವಿಷಯ ಅವರಿಗೆ ಗೊತ್ತಿದೆ. ಆದರೂ ಪರಿಹಾರದ ಕುರಿತು ಹೇಳಿಕೆ ನೀಡಿಲ್ಲ. ಈ ಸರ್ಕಾರ ಹಗರಣದಲ್ಲೇ ಮುಳುಗಿದೆ. ಜನರು ಬವಣೆ ಪಡುತ್ತಿದ್ದಾರೆ. ಅವರ ಸಂಕಷ್ಟ ಪರಿಹಾರಕ್ಕೆ ಸರ್ಕಾರ ತಕ್ಷಣ ಮುಂದಾಗಬೇಕು ಎಂದರು.

ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಾಗಿದೆ. ಇಲ್ಲಿ ೨, ರಿಪ್ಪನ್ಪೇಟೆಯಲ್ಲಿ ೨ ಸಾವಾಗಿದೆ. ಗೌತಮಪುರದಲ್ಲಿ ಒಬ್ಬ ಎಂಜಿಯನಿಯರಿಗೆ ತಗಲಿದೆ. ರಾಜ್ಯಾದ್ಯಂತ ಡೆಂಗ್ಯೂ ಹಾವಳಿ ಕೊರೋನಾ ರೀತಿ ಹರಡುತ್ತಿದೆ. ಸರ್ಕಾರ ಕೊರೋನಾ ಸಂದಭದಲ್ಲಿ ರಚಿಸಿದಂತೆ ಟಾಸ್ಕ್ಫೋರ್ಸ್ ಮಾಡಬೇಕಿತ್ತು. ಸರ್ಕಾರ ಇದನ್ನೂ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಗೂಂಡಾಗಳು ಹೇಳಿಲ್ಲ :
ನಾನು ಕಾಂಗ್ರೆಸ್ ಗೂಂಡಾಗಳು ಎಂದು ಹೇಳಿಲ್ಲ. ಆದರೆ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಗೂಂಡಾಗಳು ಎಂದು ಹೇಳಿದ್ದೇನೆ. ಆ ಬಗ್ಗೆ ನನಗೆ ಮಾಹಿತಿ ಇದೆ. ಯಾಕೆ ಕಾಂಗ್ರೆಸ್ ಮುಖಂಡರು ಈ ರೀತಿ ತಪ್ಪು ಭಾವಿಸಿ ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ನಾನು ಕ್ಷಮೆ ಯಾಚಿಸಬೇಕು, ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಹೇಳಿದ್ದಾರೆ. ನಾನು ಹಾಗೆ ಹೇಳಿಯೇ ಇಲ್ಲ, ಇನ್ನು ಕ್ಷಮೆ ಯಾಚಿಸುವುದು ಯಾಕೆ ಎಂದು ಪ್ರಶ್ನಿಸಿದ ಅವರು, ಆ ಪಕ್ಷದವರಲ್ಲೇ ಕೆಲವು ಭಿನ್ನಾಭಿಪ್ರಾಯವಿದೆ ಎಂದರು. ಆರೋಪ ಬಂದವರು ಜೈಲಿಗೆ ಹೋಗುತ್ತಾರೆ, ಬರುತ್ತಾರೆ. ಕಾಂಗ್ರೆಸ್ ಮಂತ್ರಿಗಳೂ ಜೈಲಿಗೆ ಹೋಗಿದ್ದಾರೆ. ಯಾರ್ಯಾರು ಜೈಲಿಗೆ ಹೋಗಿದ್ದಾರೆ ಎಂಬ ಪಟ್ಟಿಯೂ ನನ್ನ ಬಳಿ ಇದೆ ಎಂದವರು ತಿರುಗೇಟು ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಗ್ರಾಮಾಂತರ ಘಟಕದ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ, ನಗರ ಘಟಕದ ಅಧ್ಯಕ್ಷ ಗಣೇಶ್ ಪ್ರಸಾದ್, ಮುಖಂಡರಾದ ಡಾ.ರಾಜನಂದಿನಿ ಕಾಗೋಡು, ರತ್ನಾಕರ ಹೊನಗೋಡು, ಸುವರ್ಣ ಟೀಕಪ್ಪ, ಭರ್ಮಪ್ಪ, ಭೈರಪ್ಪ, ಸತೀಶ್ ಮೊಗವೀರ, ಪ್ರಶಾಂತ ಕೆ.ಎಸ್., ಗಿರಿಗೌಡ್ರು, ಸಂತೋಷ್ ಹಾಜರಿದ್ದರು.