ಸಾಮಜಿಕ ಜಾಲತಾಣದ ಚಿತ್ರ
ಪಾಪಚ್ಚಿಗಳ ಕಥೆ-1 : ಸ್ವಾಮಿ, ತುಂಗಾತರಂಗ
ಇದೊಂದು ಕಳೆದೆರಡು ದಿನದಿಂದ ಸದಾ ಕಾಡಿದ ಮಾತು. ಜೀವನದಲ್ಲಿ ಎಲ್ರೂ ನಾ ಸತ್ರೆ ನನ್ ಹೆಂಡ್ತಿ ಮಕ್ಳು ಚಂದಾಗಿರಲಿ ಅಂತ ವಿಮಾ ಪಾಲಿಸಿ ಕಟ್ಟೋದು ವಾಡಿಕೆ.
ಆದ್ರೆ ಇಲ್ಲೊಬ್ಬ “ಈಶ” ಅಂತ ಐವತ್ತರ ವ್ಯಕ್ತಿ ನಾ ಸತ್ರೆ ನನಗೇ, ನನ್ ಕೈಗೇ ಐವತ್ತು ಲಕ್ಷ ಇನ್ಶುರೆನ್ಸ್ ಹಣ ಬರುತ್ತೆ ಅಂತೀದಾನೆ.
ಇಂತಹ ಜನರ ಈ ಮನೋಭಾವಕ್ಕೆ ಏನು ಹೇಳಬೇಕು. ಸುಮ್ನೆ ಪದೇ ಪದೇ ನಾ ಸತ್ರೆ ನನಗೆ ಇನ್ಶುರೆನ್ಸ್ ಹಣ ಬರುತ್ತೆ ಅಂತಿದ್ದಾನೆ.
ಪಾಪ ಈ ಅಮಾಯಕನಿಗೆ ಸತ್ಯ ಗೊತ್ತಿಲ್ಲ ಅನಿಸುತ್ತೆ. ಇನ್ಶುರೆನ್ಸ್ ಕಟ್ಟೆದ್ದರೆ ಅವ ಸತ್ತ ಮೇಲೆ ನಾಮಿನಿಯಾಗಿರುವ ಹೆಂಡ್ತಿ, ಮಕ್ಕಳೋ ಆ ದಾಖಲೆ ನೀಡಿ ಅರ್ಜಿ ಹಾಕಿದರೆ ಕನಿಷ್ಟ ಐದಾರು ತಿಂಗಳಾದ ಮೇಲೆ ಆ ಹಣ ಅವನ ನಾಮಿನಿಯವರಿಗೆ ಸಿಗುತ್ತೆ. ಇಲ್ಲೋ ನಾನಾ ಷರತ್ತುಗಳಿವೆ ಎಂಬುದೇ ಗೊತ್ತಿಲ್ಲದ ನಿರುಪದ್ರವಿ ಮನುಷ್ಯ ಅನಿಸುತ್ತೆ.
ಸತ್ತು, ಆ ನೆನಪೇ ಮರೆತು ಹೋಗಿ ಸುಟ್ಟ ಬೂದಿ, ಇದ್ದಲಿಯೇ ನಾಪತ್ತೆಯಾದಾಗ ಬರುವ ಇನ್ಸುರೆನ್ಸ್ ಹಣದ ಬಗ್ಗೆ ಭಯಂಕರ ಅಸೆ ಇಟ್ಟುಕೊಂಡಿದ್ದಾನೆ.
ಸತ್ತ ದಿನವೇ ಇನ್ಶುರೆನ್ಸ್ ಕಂಪನಿಯವರು ಅವ ಹೆಣವಾಗಿ ಸುಡುವಾಗ ಹಣ ಕೊಡ್ತಾರೆ ಅಂದುಕೊಂಡಿದ್ದಾನೆ. ಪಾಪಚ್ಚಿ.
ಬದುಕಿದ್ದಾಗಷ್ಟೆ ನಿಮ್ ಬಗ್ಗೆ ಪ್ರೀತಿ, ಕಾಳಜಿ, ಗೌರವ ಅಷ್ಟೆ. ಭ್ರಮಾಲೋಕ ಅತಿಯಾಗದಿರಲಿ. …
(ಮುಂದುವರೆಯುತ್ತೆ…)
(ನೊಂದವನ ಮನದ ನೆಮ್ಮದಿಗೆ ಬರೆದ ಸುದ್ದಿ, ನಗಲಿಕ್ಕೆ ಮಾತ್ರ)
https://tungataranga.com/?p=32938
ನೆಗಿಟೀವ್ ಥಿಂಕಿಂಗ್ ಅಂಕಣ ಕುರಿತ ಒಂದ್ ಚಿತ್ರಣ/ ಇದರಲ್ಲಿಯೇ ಅಂಕಣಗಳನ್ನು ಓದಬಹುದು..,
ಸಂಪೂರ್ಣ ಮಾಹಿತಿಗೆ ಲಿಂಕ್ ಬಳಸಿ.
ತುಂಗಾತರಂಗ ಗುಂಪಲ್ಲಿ ಇಲ್ಲದವರು ಈ ಕೆಳಗಿನ ಲಿಂಕ್ ಬಳಸಿ ಸೇರಿ
https://chat.whatsapp.com/IzhQLfWK8ud0fRtId61ehs