ಶಿವಮೊಗ್ಗ, ಜು 16: ಶಾಲೆಗಳಲ್ಲಿ ವಿದ್ಯಾರ್ಥಿ ನಾಯಕರ ಆಯ್ಕೆ ಮತದಾನದ ಮೂಲಕ ಸಾಗಿದ್ದು ಮಕ್ಕಳಿಗೆ ಚಿಕ್ಕಂದಿನಿಂದಲೇ ಚುನಾವಣಾ ಮಜಲುಗಳನ್ನು ಅರಿಯಲು ಗುರುಪುರದ ಬಿಜಿಎಸ್ ಶಾಲೆಯಲ್ಲಿ ಮತದಾನ ಕಾರ್ಯಕ್ರಮ ಶ್ಲಾಘನೆಗೆ ಕಾರಣವಾಗಿದೆ.
ಶಾಲೆಗಳಲ್ಲಿ ಆಯಾ ವರ್ಷದ ವಿದ್ಯಾರ್ಥಿ ನಾಯಕನ ಆಯ್ಕೆ ಪ್ರಕ್ರಿಯೆ ಚುನಾವಣೆಯ ಮೂಲಕ ಸಾಗುತ್ತದೆ. ಶಾಲೆಗಳಲ್ಲಿ ಮಕ್ಕಳಿಗೆ ಚುನಾವಣೆಯ ಅರಿವು, ಜಾಗೃತಿ ಮೂಡಿಸುವ ಮೂಲಕ ಮಕ್ಕಳಿಗೆ ದೇಶದ ರಾಜಕೀಯ ವ್ಯವಸ್ಥೆಯನ್ನು ತಿಳಿಯುವಲ್ಲಿ ಸಹಕಾರಿಯಾಗಿದೆ.
ಶಾಲಾ ಸಂಸತ್ ಚುನಾವಣೆ, ಚುನಾವಣಾ ಆಯೋಗದ ನೀತಿ ನಿಯಮಗಳನ್ವಯ ನಡೆಯುತ್ತಿದ್ದು ಬಹಳ ವಿಶೇಷವೆನಿಸುತ್ತದೆ. ಚುನಾವಣಾ ದಿನಾಂಕ ಘೋಷಣೆ, ನಾಮಪತ್ರ ಸಲ್ಲಿಕೆಗೆ ಗಡವು, ಹಿಂಪಡೆಯುವಿಕೆಗೆ ಅವಕಾಶ, ಚುನಾವಣಾ ಚಿಹ್ನೆ ನೀಡುವುದು, ಮತ ಪ್ರಚಾರಕ್ಕೆ ಅವಕಾಶ, ಮತದಾನ, ಫಲಿತಾಂಶ ಘೋಷಣೆ ಹೀಗೆ ನಿಯಮಬದ್ಧವಾಗಿ ಚುನಾವಣೆ ನಡೆಸಲಾಗುತ್ತದೆ. ಬಳಿಕ ಮಂತ್ರಿಮಂಡಲ ರಚನೆ ಹಾಗೂ ಖಾತೆ ಹಂಚಿಕೆ, ಜವಾಬ್ದಾರಿ ಹಂಚಿಕೆ ನಡೆಯಿತು.
ಶಾಲೆಗಳಲ್ಲಿ ನಡೆದ ಚುನಾವಣೆಗಳ ಅನ್ವಯ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಖಾತೆಗಳ ಹಂಚಿಕೆ ಮಾಡಿ ಆಯಾ ವರ್ಷದ ಶಾಲಾ ಜವಾಬ್ದಾರಿ ವಹಿಸಲಾಗುತ್ತದೆ. ಪ್ರಧಾನ ಮಂತ್ರಿ, ಶಿಕ್ಷ ಣ ಮಂತ್ರಿ, ಸ್ವಚ್ಛತಾ ಮಂತ್ರಿ, ಗ್ರಂಥಾಲಯ ಪಾಲನೆ, ರಕ್ಷ ಣಾ ಮಂತ್ರಿ, ಆಹಾರ ಮಂತ್ರಿ ಹೀಗೆ ನಾನಾ ಖಾತೆಗಳನ್ನು ನೀಡಿ ಮಕ್ಕಳಿಗೆ ಜವಾಬ್ದಾರಿಯನ್ನು ನೀಡುವುದರಿಂದ ವರ್ಷವಿಡೀ ಶಾಲೆಯ ನಿರ್ವಹಣೆ ಮಾಡಲು ಶಿಕ್ಷ ಕರಿಗೆ ಸುಲಭವೆನಿಸುತ್ತದೆ.
ಬಿಜಿಎಸ್ ಶಾಲಾ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸುರೇಶ್ ಎಸ್. ಹೆಚ್. ಮುಖ್ಯ ಚುನಾವಣಾ ಆಯುಕ್ತರಾಗಿ ಹಾಗೂ ಪ್ರೌಢಶಾಲೆಯ ಸಂಯೋಜಕರಾದ ಮಾಲತೇಶ್ ಮತ್ತು ಸಂಯೋಜಕರಾದ ಶ್ರೀಮತಿ ದಿವ್ಯಶ್ರೀ ಜೆ.ಮತದಾನ ಕೇಂದ್ರದ ಅಧಿಕಾರಿಗಳಾಗಿ ಮಾರ್ಗದರ್ಶನ ಮಾಡಿದರು.ಇದೇ ಸಂದರ್ಭದಲ್ಲಿ ಇನ್ನು ಮುಂತಾದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.