ಶಿವಮೊಗ್ಗ,ಜು.6: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರಯತ್ನ ಮತ್ತು ಆತ್ಮ ವಿಶ್ವಾಸ ಅತಿ ಮುಖ್ಯ ಎಂದು ಖ್ಯಾತ ವೈದ್ಯೆ ಡಾ. ವಾಣಿ ಕೋರಿ ಹೇಳಿದರು.

ಅವರು ಇಂದು ಆರ್ಯ ಅಕಾಡೆಮಿ ವತಿಯಿಂದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ನೀಟ್ ಹಾಗೂ ಜಿಇಇ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಇದು ಸ್ಪರ್ಧಾತ್ಮಕ ಯುಗವಾಗಿದೆ. ವಿದ್ಯಾರ್ಥಿಗಳು ಅಂಕಗಳಷ್ಟೇ ಅಲ್ಲದೇ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾಗಿದೆ. ವಿದ್ಯಾರ್ಥಿಗಳು ಭವ್ಯ ಕನಸುಗಳನ್ನು ಕಂಡರಷ್ಟೇ ಸಾಲದು, ಅದಕ್ಕಾಗಿ ಪ್ರಯತ್ನಿಸಬೇಕು. ಬಹಳಷ್ಟು ವಿದ್ಯಾರ್ಥಿಗಳು ತುಂಬಾ ಬುದ್ಧಿವಂತರೇ ಇರುತ್ತಾರೆ. ಆದರೆ, ಪರೀಕ್ಷೆಗಳ ಎದುರಿಸುವುದು. ಮತ್ತು ಅದಕ್ಕಾಗಿ ತಯಾರಿ ನಡೆಸಿಕೊಳ್ಳುವುದು ಕಷ್ಟವಾಗುತ್ತದೆ. ಇದರಿಂದ ಬಡ, ಮಧ್ಯಮ ವರ್ಗದ ಮಕ್ಕಳು ವೈದ್ಯಕೀಯ, ಇಂಜಿನಿಯರಿಂಗ್ ಮುಂತಾದ ಉನ್ನತ ಶಿಕ್ಷಣದಿಂದ ವಂಚಿತಾಗುತ್ತಾರೆ ಎಂದರು.

ಇದನ್ನು ಮನಗಂಡು ಆರ್ಯ ಅಕಾಡೆಮಿ ಒಂದು ಉತ್ತಮ ಕೆಲಸ ಮಾಡುತ್ತಿದೆ. ನೀಟ್ ಮತ್ತು ಜೆಇಇ ಕಾರ್ಯಾಗಾರದ ಮೂಲಕ ಪರೀಕ್ಷೆಗಳ ಮಹತ್ವವನ್ನು ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ನೀಡುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ. ನೀಟ್ ಪರೀಕ್ಷೆಗೆ ಲಕ್ಷಾಂತರ ಮಂದಿ ಕುಳಿತುಕೊಳ್ಳುತ್ತಾರೆ. ಆದರೆ, ಸೀಟುಗಳು ಮಾತ್ರ ತುಂಬಾ ಕಡಿಮೆ ಇರುತ್ತವೆ. ಅದಕ್ಕೆ ತಯಾರಿ ಅಗತ್ಯ್ಯವಾಗಿರುತ್ತದೆ. ಸ್ಪರ್ಧೆ ಇದೆ. ಇದನ್ನು ಎದುರಿಸಲು ಸಿದ್ಧತೆ ಅನಿವಾರ್ಯ ಎಂದರು.

ಪ್ರ್ರಾಸ್ತಾವಿಕವಾಗಿ ಮಾತನಾಡಿದ ಅಕಾಡೆಮಿ ಕಾರ್ಯದರ್ಶಿ ಎನ್. ರಮೇಶ್, ವಿದ್ಯಾರ್ಥಿಗಳ ಕನಸನ್ನು ನನಸು ಮಾಡಲು ಆರ್ಯ ಅಕಾಡೆಮಿ ಈಗ ಸಜ್ಜಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಕೋಚಿಂಗ್ ನೀಡಲಾಗುತ್ತಿದೆ. ಇದುವರೆಗೂ ಸ್ಪÀರ್ಧಾತ್ಮಕ ಪರೀಕ್ಷೆಗಳ ತರಬೇತಿ ಪಡೆಯಲು ನೇರೆ ಊರುಗಳಿಗೆ ಹೋಗಬೇಕಿತ್ತು. ಆದರೆ, ಈಗ ಮಲೆನಾಡಿನಲ್ಲಿಯೇ ಈ ತರಬೇತಿ ನೀಡುವುದರಿಂದ ವಿದ್ಯಾರ್ಥಿಗಳ ಕಷ್ಟ ತಪ್ಪಿದೆ ಎಂದರು.

ಇಲ್ಲಿ ತರಬೇತಿ ಪಡೆಯುವ ವಿದ್ಯಾರ್ಥಿಗಳು ನಮ್ಮ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಪರೀಕ್ಷೆ ಎದುರಿಸಲು ಸಂಪೂರ್ಣ ತಯಾರಾಗುತ್ತಾರೆ. ಅಕಾಡೆಮಿ ರಾಷ್ಟ್ರಮಟ್ಟದಲ್ಲಿ ಹೆಸರು ಪಡೆಯಬೇಕೆಂಬುದೇ ನಮ್ಮ ಉದ್ದೇಶವಾಗಿದೆ. ವಿದ್ಯಾರ್ಥಿಗಳು ಈ ಕಾರ್ಯಾಗಾರದ ಪ್ರಯೋಜನ ಪಡೆಯಬೇಕು ಎಂದರು. 

ಕಾರ್ಯಕ್ರಮದಲ್ಲಿ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಡಾ. ವಿನಾಯಕ, ಆರ್ಯ ಸೈನ್ಸ್ ಕಾಲೇಜಿನ ಉಪನ್ಯಾಸಕರಾದ ರಮಣ ಅಮರನೇನಿ, ಚಂದ್ರಮೋಹನ್, ಚಂದ್ರಶೇಖರ್  ಜೋಸ್ಯುಳ, ಚಂದ್ರಶೇಖರ ಕಣ್ಣನ್, ಶ್ರೀನಿವಾಸ ಆಚಾರ್ಯ, ಸುನಿತಾದೇವಿ, ಮುತಾದವರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!