ಶಿವಮೊಗ್ಗ,ಜು.5: ಕೊನಗವಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಕಲಿ ದೃಢೀಕರಣ ಪತ್ರ ನೀಡಿದ್ದು, ಅವರನ್ನು ಕೂಡಲೇ ಸೇವೆಯಿಂದ ವಜಾಮಾಡಬೇಕು ಎಂದು ಯಡವಾಲ ಗ್ರಾಮದ ಜಿ.ಎಂ. ಹಾಲೇಶಪ್ಪ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೊನಗವಳ್ಳಿ ಗ್ರಾ.ಪಂ. ಪಿಡಿಓ ಅವರು ಗ್ರಾಮದ ಖಾತೆ ನಂ. 49ಕ್ಕೆ ಸಂಬಂಧಿಸಿದಂತೆ ಅನಧಿಕೃತವಾಗಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕರ್ತವ್ಯ ಲೋಕ ಎಸಗಿ ಅನಧಿಕೃತವಾಗಿ ತಪ್ಪು ಮಾಹಿತಿ ವುಳ್ಳ

ದೃಢೀಕರಣವನ್ನು ನೀಡಿದ್ದಾರೆ. ಇದನ್ನು ಸಮಗ್ರ ತನಿಖೆ ಮಾಡಿ ಅವರನ್ನು ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದರು.

ಗ್ರಾಮದ ಜಿ.ಎ.ಶರಣಪ್ಪ ಎನ್ನುವವರು ಮನೆ ನಿರ್ಮಾಣದ ಕಿಟಕಿಗಳನ್ನು ಅಳವಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ದೌರ್ಜನ್ಯ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕುಂಸಿ ಪೊಲೀಸ್‍ಠಾಣೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೂರು ಕೂಡ ನೀಡಿದ್ದೇನೆ ಎಂದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶರಣಪ್ಪ ಗೌಡರು, ಕೊನಗವಳ್ಳಿ ಗ್ರಾ.ಪಂ.ಗೆ ಖಾತೆ ನಂ. 49ಕ್ಕೆ ಸಂಬಂಧಿಸಿದಂತೆ ಅರ್ಜಿ ಹಾಕಿದ್ದರು. ಆದರೆ, ಅಲ್ಲಿನ ಪಿಡಿಓ ಅವರು ಕರ್ನಾಟಕ ಸರ್ಕಾರದ ಲಾಂಛನ ಚಿಹ್ನೆಯಿಲ್ಲದ ನಕಲಿ ಪತ್ರದಲ್ಲಿ ನನ್ನ ಹೆಸರಿನಲ್ಲಿರುವ ಜಾಗವನ್ನು ಶರಣ್ಣಪ್ಪ ಗೌಡರ

ಅನುಭವದಲ್ಲಿ ಇರುತ್ತದೆ ಎಂದು ದೃಢೀಕರಣ ಪತ್ರ ನೀಡಿದ್ದಾರೆ. ಈ ರೀತಿ ನಕಲಿ ಪ್ರಮಾಣ ಪತ್ರವನ್ನು ನೀಡುವ ಮೂಲಕ ನ್ಯಾಯಾಲಯಕ್ಕೂ ಸುಳ್ಳು ಹೇಳಿದಂತ್ತಾಗಿದೆ. ವಾಸ್ತವವಾಗಿ ಶರಣಪ್ಪ ಗೌಡರ ಅನುಭವದಲ್ಲಿ ಈ ಜಾಗ ಇರುವುದಿಲ್ಲ. ಈ ಬಗ್ಗೆ ಗ್ರಾಮಸ್ಥರ ಹೇಳಿಕೆಯನ್ನು ಕೂಡ ಪಿಡಿಓ ಪಡೆದಿಲ್ಲ. ಆದರೂ ಕೂಡ ಸುಳ್ಳು ದೃಢೀಕರಣ ಪತ್ರವನ್ನು ನೀಡಿದ್ದಾರೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿ.ಎಂ.ಶಿವಾನಂದ ಇದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!