ಶಿವಮೊಗ್ಗ: ಸ್ವಾತಂತ್ರ್ಯ ಕಿಚ್ಚು ತರುಣರಲ್ಲಿ ಹಬ್ಬಿಸುವಲ್ಲಿ ಭೂಪಾಳಂ ಚಂದ್ರಶೇಖರಯ್ಯ ನವರು ಯಶಸ್ವಿಯಾಗಿದ್ದರು ಎಂದು ಮಾಜಿ ವಿಧಾನ ಪರಿಷತ್ತು ಅಧ್ಯಕ್ಷ ಡಿ. ಎಚ್. ಶಂಕರಮೂರ್ತಿ ಹೇಳಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯು ಕರ್ನಾಟಕ ಜಾನಪದ ಪರಿಷತ್ತು ಜೊತೆಯಾಗಿ ಏರ್ಪಡಿಸಿದ್ದ ಶಿವಮೊಗ್ಗ ಜಿಲ್ಲೆಯ ಸಾಧಕರ ಸ್ಮರಣೆ ಕೃತಜ್ಞತೆ ಸಮರ್ಪಣೆ ಹಾಗೂ ಭೂಪಾಳಂ ಚಂದ್ರಶೇಖ ರಯ್ಯ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾತನಾಡಿದರು.
ಅವರ ಹೋರಾಟದ ಮನೋಭಾವ ಇಂದು ಪರಿಚಯಿಸುವ ಕೆಲಸ ಸಾರ್ಥಕ. ಸಮಾಜ ಶ್ರಮಿಸಿದವರನ್ನು ನೆನಪಿಸಿಕೊಳ್ಳುವ ಕಾರ್ಯ ಅಗತ್ಯವಾಗಬೇಕು. ಸ್ಮರಣೆ ಮಾಡುವ, ಇಂದಿನವರಿಗೆ ತಿಳಿಸುವ ಕಾರ್ಯ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸಕೃತಿಕ ವೇದಿಕೆಯು ನಿರಂತರವಾಗಿ ಒಳ್ಳೆಯ ಪ್ರಯತ್ನ ಮಾಡಿದೆ. ಆದರ್ಶವಿದ್ದವರು ಮುಂದೆ ಬರಬೇಕು ಎನ್ನುವ ಆಶಯ ಅವರದ್ದು. ಅವರ ಚಿಂತನೆ ಹಿಂದೂ ಮಹಾಸಭಾ ಗಟ್ಟಿ ಯಾಗಬೇಕು. ಅದಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿ ಕೊಡಿದ್ದರು ಎಂದು ವಿವರಿಸಿದವರು
ಉದ್ಯಮಿಯಾಗಿ, ವ್ಯಾಪಾರ, ವ್ಯವಹಾರ, ಕೃಷಿ, ಸಾಹಿತ್ಯ, ಪತ್ರಿಕೋದ್ಯಮ ಎಲ್ಲಾ ವಿಚಾರಗಳಲ್ಲೂ ಪ್ರತಿಭಾವಂತರಾಗಿದ್ದರು. ಸಾರ್ವಕರ್ ಅಖಿಲ ಭಾರತ ಮಟ್ಟದಲ್ಲಿ ನಾಯಕಾರಾದರೆ ಕರ್ನಾಟಕದಲ್ಲಿ ಚಂದ್ರಶೇಖ ರಯ್ಯ ಮುಂಚೂಣಿ ನಾಯಕರಾಗಿದ್ದರು. ಕುವೆಂಪು ಅವರೊಂದಿಗಿನ ಗೆಳೆತನಕ್ಕೆ ಅವರ ಚಿಂತನೆಗಳು ಅಡ್ಡಿಯಾಗಿರಲಿಲ್ಲ ಎಂದು ಡಿ. ಎಚ್. ಶಂಕರಮೂರ್ತಿ ವಿವರಿಸಿದರು.
ಭೂಪಾಳಂ ಚಂದ್ರಶೇಖರಯ್ಯ ಅವರು, ಕುವೆಂಪು ಅವರೊಂದಿಗಿನ ಒಡನಾಟ ಕುರಿತು ಮಾತನಾಡಿದ ಸಾಹಿತಿಗಳು, ಹಂಪಿ ವಿ.ವಿ. ಪ್ರಾಧ್ಯಾಪಕ ಡಾ. ಕೆ. ಸಿ. ಶಿವಾರೆಡ್ಡಿ ಅವರು, ಕುವೆಂಪು ಅವರ ನೆನಪಿನ ದೋಣಿ ಕೃತಿಯಲ್ಲಿ ಹಲವು ಬಾರಿ ಇವರ ಹೆಸರು ಪ್ರಸ್ಥಾಪವಾಗಿದೆ. ಅವರಿಬ್ಬರು ಬಾಲ್ಯದ ಗೆಳೆಯರು. ಇಬ್ಬರೂ ವಿವೇಕಾನಂದರ ಸೆಳೆತಕ್ಕೆ ಒಳಗಾದವರು. ಅವರ ಮಂಡಿಯ ಅಟ್ಟದಲ್ಲಿ ಎಲ್ಲರೂ ಸೇರುತ್ತಿದ್ದರು. ಅದೊಂದು ಅನುಭವ ಮಂಟಪದಂತೆ ಬಾಸವಾಗುತ್ತಿತ್ತು. ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಿಲ್ಲದ ನಮ್ಮ ನಗರ ಮಾಂಗಲ್ಯ ವಿಲ್ಲದ ಸುಂದರಿಯಂತೆ ಆಗಿತ್ತು ಎಂದು ಕುವೆಂಪು ಅವರು ಉಲ್ಲೇಖಿಸುತ್ತಾರೆ. ಶಿವಮೊಗ್ಗದಲ್ಲಿ ಕರ್ನಾಟಕ ಸಂಘ ಸ್ಥಾಪನೆಯಾಗಲು ಅನೇಕರು ಶ್ರಮಿಸಿದ್ದಾರೆ. ಅಲ್ಲೊಂದು ಸಾಂಸ್ಕೃತಿಕ ವಾತಾವರಣ ಕಟ್ಟು ವಲ್ಲಿ ಇವರ ಶ್ರಮ ಮಹತ್ವದ್ದು. ದೇಶಾಭಿಮಾ ನಿಗಳೆಲ್ಲರೂ ಸಾಹಿತ್ಯ ಪ್ರಚಾರಕರಾಗ ಬೇಕು ಎಂದು ಬಯಸಿದ್ದನ್ನು ಉಲ್ಲೇಖ ಮಾಡಿದರು.
ಶಿವಮೊಗ್ಗದ ಹೆಮ್ಮೆ ಭೂಪಾಳಂ ವಿಚಾರ ವಾಗಿ ಮಾತನಾಡಿದ ಶರಾವತಿ ನರ್ಸಿಂಗ್ ಹೋಂನ ವೈದ್ಯರು ರೋಟೇರಿಯನ್ ಡಾ. ಪಿ. ನಾರಾಯಣ ಅವರು ದೊಡ್ಡ ಮನೆತನ, ಸಾಮಾಜಿಕ ಕಾರ್ಯಗಳ ಮೂಲಕ ಊರಿಗೆ ದೊಡ್ಡಹೆಸರು ಎಂದರು.
ಅಮೇರಿಕಾದ ಚಿಕಾಗೋದಿಂದ ಅವರು ಪುತ್ರಿ ಡಾ. ಬಿ. ಸಿ. ನಿರ್ಮಲಾ, ಅವರ ಪುತ್ರ ಬೆಂಗಳೂರಿನಿಂದ ವಕೀಲರಾದ ಬಿ. ಸಿ. ಪ್ರಭಾಕರ್ ಅವರು ನಾ ಕಂಡಂತೆ ಅಪ್ಪಾಜಿ ವಿಚಾರವಾಗಿ ಮಾತನಾಡಿದರು.
ವೇದಿಕೆಯ ಅಧ್ಯಕ್ಷ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಗಾಯಕಿ ಪ್ರತಿಭಾ ನಾಗ ರಾಜ್ ನಾಡಗೀತೆ ಹಾಡಿದರು. ರಿಪ್ಪನ್‌ಪೇಟೆ ಮಂಜುನಾಥ ಕಾಮತ್ ಸ್ವಾಗತಿಸಿದರು. ಕಾರ್ಯದರ್ಶಿ ಡಿ. ಗಣೇಶ್ ವಂದಿಸಿದರು.

By admin

ನಿಮ್ಮದೊಂದು ಉತ್ತರ

You missed

error: Content is protected !!