ಸಾಗರಜುಲೈ.೦೨ :ಲೋಕಸಭೆಯಲ್ಲಿ ವಿಪಕ್ಷದ ನಾಯಕ ರಾವುಲ್‌ಗಾಂಧಿಯ ವರು ೧೩೦ ಕೋಟಿ ಹಿಂದೂ ಗಳ ಭಾವನೆಗೆ ಧಕ್ಕೆ ತರು ವಂತಹ ಹೇಳಿಕೆ ನೀಡಿರು ವುದು ಅತ್ಯಂತ ಖಂಡನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಹೇಳಿದರು.
ಅವರು ಸಾಗರ ಬಿಜೆಪಿ ವತಿಯಿಂದ ರಾವುಲ್‌ಗಾಂಧಿ ಯವರ ಹಿಂದೂ ವಿರೋಧಿ ಹೇಳಿಕೆ ಖಂಡಿಸಿ ಸಾಗರ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಹಮ್ಮಿ ಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಹಿಂದೂಗಳು ದ್ವೇಷಬಿತ್ತು ವವರು,ಬೆಂಕಿಹಚ್ಚುವವರು ಎಂದು ಹೇಳುವ ಮೂಲಕ ರಾವುಲ್‌ಗಾಂಧಿಯವರು ಸಂವಿಧಾನಿಕ ಹುದ್ಧೆಯ ಘನತೆಯನ್ನು ಹಾಳು ಮಾಡಿ ದ್ದಾರೆ.ರಾಷ್ಟ್ರಪತಿಗಳು ತಕ್ಷಣ ಮಧ್ಯೆಪ್ರವೇಶಿಸಿ ವಿಪಕ್ಷಸ್ಥಾನ ದಿಂದ ವಜಾಗೊಳಿ ಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷ ಮೊದ ಲಿಂದಲೂ ಬಹುಸಂಖ್ಯಾತ ರಾಗಿರುವ ಹಿಂದೂಗಳ ವಿರೋಧಿಸುವ ಮೂಲಕ ಅಲ್ಪಸಂಖ್ಯಾತರುಗಳ ಮತ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳುವ ಕೃತ್ಯವನ್ನು ಮಾಡುತ್ತಲೇ ಬರುತ್ತಿದೆ ಎಂದು ದೂರಿದರು.
ಲೋಕಸಭೆಯ ವಿಪಕ್ಷ ಸ್ಥಾನ ಪಡೆದು ಮೊದಲ ಅಧಿವೇಶನದಲ್ಲಿಯೇ ಸಂವಿ ಧಾನದ ಚೌಕಟ್ಟು ಮೀರಿದ ಹಿಂದೂಗಳ ವಿರುದ್ಧ ಅಪ ಮಾನಕರ ಹೇಳಿಕೆ ನೀಡಿರುವ ರಾವುಲ್‌ಗಾಂಧಿ ಯವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸ ಬೇಕು.ಇನ್ನು ಮುಂದೆ ಇಂತಹ ಬಾಲಿಶ ಹೇಳಿಕೆಗಳು ಮುಂದುವರಿ ದರೇ ದೇಶದಾ ದ್ಯಂತ ಪ್ರತಿ ಭಟನೆ ತೀವ್ರ ಗೊಳಿಸ ಲಾಗು ವುದು ಎಂದು ಎಚ್ಚರಿಸಿದರು.
ಚುನಾವಣೆಯ ಪೂರ್ವ ದಲ್ಲಿ ಕೇಂದ್ರದಲ್ಲಿ ಆಡಳಿತಾ ರೂಢ ಬಿಜೆಪಿ ಸರ್ಕಾರದ ವಿರುದ್ಧ ಸುಳ್ಳು ಆರೋಪಗಳ ಮಾಡಿರುವ ಕಾಂಗ್ರೆಸ್‌ನವರು ಇಂದು ಸಂವಿಧಾನಿಕ ಹುದ್ಧೆ ವಿಪಕ್ಷದ ಸ್ಥಾನದಲ್ಲಿ ಕುಳಿತು ದೇಶದ ಸಮಸ್ಯೆಗಳ ಕುರಿತು ಗಮನಸೆಳೆಯಬೇಕಿತ್ತು.ಅನುದಾನ ಹಂಚಿಕೆಯಲ್ಲಿನ ತಾರತಮ್ಯ ಗಳ ಕುರಿತು ಮಾತ ನಾಡ ಬಹುದಿತ್ತು.ಹಗರಣಗಳ ಕುರಿತು ಗಮನಸೆಳೆಯ ಬೇಕಿತ್ತು.
ನೈಸ್‌ಕಾರಿಡಾರ್ ಕುರಿತು ಮಾತನಾಡುವ ಬದಲಿಗೆ ಚುನಾವಣಾ ದ್ವೇಷದ ಭಾಷಣ ಮಾಡುವ ಮೂಲಕ ದೇಶದ ಜನತೆಗೆ ಹಿಂದೂ ರಾಷ್ಟ್ರಕ್ಕೆ ಅವಮಾನ ಮಾಡಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಸಾಗರ ನಗರ ಅಧ್ಯಕ್ಷ ಗಣೇಶ್ ಪ್ರಸಾದ್,ಪ್ರಮುಖರುಗಳಾದ ಪ್ರಸನ್ನಕೆರೆಕೈ,ಪರಶುರಾಮ್, ಮಧುರಾಶಿವಾನಂದ, ಸಂತೊ ಷ್,ಪ್ರೇಮಾಕಿರಣ್ ಸಿಂಗ್, ಶ್ರೀನಿವಾಸ್ ಆರ್, ಸವಿತಾ ವಾಸು,ವಿ.ಮಹೇಶ್ ,ಲಿಂಗರಾಜ್ , ಸಂತೋಷ್ ಶೇಟ್,ಪದ್ಮಾ, ರಂಜನಾ ಸುರೇಶ್, ಜಗನ್ನಾಥ್‌ಶೇಟ್ ಇತರರು ಉಪಸ್ಥಿತರಿದ್ದರು.