ಶಿವಮೊಗ್ಗ, ಜೂ.25:
ಸ್ಥಳೀಯರ ಪರ ವಿರೋಧಗಳ ನಡುವೆ ಕಿಡ್ನಿ ಸ್ಟೋನ್, ಕ್ಯಾನ್ಸರ್ ಸೇರಿದಂತೆ ವಿವಿಧ ರೋಗಗಲಿಗೆ ನಾಟಿ ಔಷದ ನೀಡುತ್ತಿದ್ದ
ಸಾಗರ ತಾಲ್ಲೂಕು ನರಸೀಪುರದ ನಾರಾಯಣಮೂರ್ತಿ ಅವರು ನಿನ್ನೆ ರಾತ್ರಿ ನಿಧನರಾಗಿದ್ದಾರೆ.
ನಾರಾಯಣ ಮೂರ್ತಿ ಅವರು ಕಿಡ್ನಿ ಸ್ಟೋನ್, ಸಂತಾನ ಹೀನತೆ, ಲೋ ಬಿ.ಪಿ. ಕ್ಯಾನ್ಸರ್ ಸೇರಿದಂತೆ ಎಲ್ಲಾ ಬಗೆಯ ಮಾರಕ ಕಾಯಿಲೆಗಳಿಗೆ ಕೆಲ ಪತ್ತೆಗಳ ಮೂಲಕ ಗಿಡಮೂಲಿಕೆ ಚಿಕಿತ್ಸೆಗಳನ್ನು ನೀಡುತ್ತಿದ್ದರು.
80 ವರ್ಷ ವಯಸ್ಸಾಗಿದ್ದ ಅವರು ವಯೋಸಹಜತೆ ಹಾಗೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.
ಮೃತರು ಓರ್ವ ಪುತ್ರ, ನಾಲ್ವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
ಕ್ಯಾನ್ಸರ್ ರೋಗಕ್ಕೆ ತಮ್ಮದೇ ಆದ ಕೈಗುಣದಿಂದ ಗುಣಪಡಿಸುತ್ತಿದ್ದ ನಾರಾಯಣ ಮೂರ್ತಿಯವರ ನಾಟಿ ಔಷಧಕ್ಕೆ ರಾಜ್ಯ ಹಾಗೂ ಅಂತರಾಷ್ಟ್ರಮಟ್ಟದಲ್ಲಿಯೂ ಬೇಡಿಕೆ ಇತ್ತು.
ಕೊರೋನ ಲಾಕ್ ಡೌನ್ ಹಿನ್ನಲೆಯಲ್ಲಿ ಸರ್ಕಾರದ ನಿರ್ದೇಶನದ ಮೇರೆಗೆ ನಾಟಿ ಔಷಧ ನೀಡದಂತೆ ಆರೋಗ್ಯ ಇಲಾಖೆ ಇತ್ತೀಚೆಗೆ ನಿರ್ದೇಶಿಸಿತ್ತು. ಪ್ರಧಾನಿ ಮೋದಿಯವರಿಗೆ ಕೊರೋನಕ್ಕೂ ನಾಟಿ ಔಷಧದಿಂದ ಗುಣಪಡಿಸಬಹುದು ಎಂದು ನಾರಾಯಣಮೂರ್ತಿ ಪತ್ರಬರೆದಿದ್ದರು. ಅದಕ್ಕೆ ಪೂರಕವಾದ ಔಷದ ನೀಡಿದ್ದರು. ಈ ಬಗ್ಗೆ ವೈದ್ಯಕೀಯ ಮಂಡಳಿ ಪರಿಶೀಲನೆಗೆ ಔಷದ ಕಳುಹಿಸಲಾಗಿತ್ತು. ಇವರ ಪತ್ರಕ್ಕೆ ಪ್ರಧಾನಿಗಳು ಉತ್ತರಿಸಿದ್ದು ಬಹು ದೊಡ್ಡ ಚರ್ಚೆ ಹುಟ್ಟುಹಾಕಿತ್ತು.