ಶಿವಮೊಗ್ಗ,ಜೂ.೧೮: ಪಶ್ಚಿಮ ಬಂಗಾಳದ ಡಾರ್ಜಲಿಂಗ್ ಜಿಲ್ಲೆಯಲ್ಲಿ ನೆನ್ನೆ ನಡೆದ ರೈಲು ಅಪಘಾತದಲ್ಲಿ ೯ ಮಂದಿ ಮೃತ ಪಟ್ಟಿದ್ದು, ೫೦ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಈ ಘಟನೆಯ ನೈತಿಕ ಹೊಣೆ ಹೊತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ತತ್‌ಕ್ಷಣ

ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ಇಂದು ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ಒತ್ತಾಯಿಸಿದರು.


೨೦೧೪ರಲ್ಲಿ ದೇಶಕ್ಕೆ ಬುಲ್‌ಟ್ ರೈಲ್ ಕೊಡುತ್ತೇವೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದು ಇರುವ ರೈಲುಗಳಿಗೂ ಸಿಗ್ನಲ್ ಕೊಡಲು ಇವರಲ್ಲಿ ಕಾರ್ಮಿಕರಿಲ್ಲದಂತಾಗಿದೆ. ಕೇಂದ್ರ ಸರ್ಕಾರವು ರೈಲಿನ

ಚೇರ್ ಮತ್ತು ಶೌಚಾಲಯದ ಚಿತ್ರಗಳನ್ನು ಕೇವಲ ಸೋಶಿಯಲ್ ಮೀಡಿಯಾದಲ್ಲಿ ತೋರಿಸಿ ಜನರಿಗೆ ಮೋಸ ಮಾಡುತ್ತಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.


ಬುಲೆಟ್ ರೈಲ್‌ನ ತಂತ್ರಜ್ಞಾನ ದೇಶಕ್ಕೆ ಕಾಲಿಡುವ ಒತ್ತಲ್ಲೇ ಸಿಗ್ನಲ್ ಲೋಪದಿಂದ ಹಾಗೂ ಚಾಲಕನ ನಿರ್ಲಕ್ಷ್ಯ ಈ ಘಟನೆಗೆ ಕಾರಣವಾಗಿದೆ. ಪದೇ ಪದೇ ರೈಲು ಅಪಘಾತಗಳು ನಡೆಯುತ್ತಿದ್ದು, ಇದರ ನೈತಿಕ ಹೊಣೆ ಹೊತ್ತು ರೈಲ್ವೆ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.


ಈ ಸಂದರ್ಭದಲ್ಲಿ ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಸ್.ಶಿವಕುಮಾರ್, ಮುಖಂಡರಾದ ಹೆಚ್.ಸಿ.ಯೋಗೀಶ್, ರಂಗೇಗೌಡ, ಎಚ್. ಎಸ್.ಬಾಲಾಜಿ, ನವೀನ್, ಅಕ್ಬರ್, ಗಿರೀಶ್, ಕುಮಾರ್ ಇನ್ನಿತರರು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!