ಶಿವಮೊಗ್ಗ,ಜೂ.೧೧:
ಚಿನ್ನದ ಮೇಲೆ ಹೂಡಿಕೆ ಮಾಡಬೇಕೂ ಅಂತಿದ್ದೀರಾ?ಇದನ್ನು ದೀರ್ಘಕಾಲೀನ ಉಳಿತಾಯವಾಗಿಸುವುದು ಹೇಗೆ ಅಂತ ಗೊತ್ತಾ ನಿಮಗೆ? ನಿಮ್ಮ ಪ್ರೀತಿಪಾತ್ರರಿಗೆ ಬಂಗಾರದಾಭರಣ ಉಡುಗೊರೆ ಕೊಡಬೇಕಾ? ಬೆಳ್ಳಿಯ ಪೂಜಾ ಸಾಮಗ್ರಿಗಳನ್ನು ಖರೀದಿಸಲು ಯಾವ ರೀತಿ ಸಿದ್ಧತೆ ಮಾಡಬೇಕೂ ಅಂತಿದಿರಾ? ಅಮೂಲ್ಯ ರತ್ನಗಳು ಭವಿಷ್ಯವನ್ನು ಭದ್ರ ಪಡಿಸುವುದು ಹೇಗೆ ಗೊತ್ತಾ?
ಇಂತಹ ಪ್ರಶ್ನೆಗಳು ನಿಮ್ಮಲ್ಲಿ ಇರುತ್ತವೆ ಎಂಬುದನ್ನು ಅರಿತಿರುವ ರೇಡಿಯೋ ಶಿವಮೊಗ್ಗ ರೂಪಿಸಿದೆ ನೂತನ ಸರಣಿ ಕಾರ್ಯಕ್ರಮ ಚಿನ್ನ ಬೆಳ್ಳಿ ಜ್ಞಾನ, ಇದು ಮೈತ್ರಿ ಮೈ ಜ್ಯುವೆಲ್ ಅಭಿಯಾನ. ಜೂನ್ ೧೨ರಿಂದ ಪ್ರತಿ ಬುಧವಾರ ಬೆಳಗ್ಗೆ ೯:೩೦ಕ್ಕೆ ರೇಡಿಯೋದಲ್ಲಿ ಪ್ರಸಾರವಾಗಲಿದೆ. ಆರ್ ಜೆ ಅರ್ಪಿತಾ ಇದನ್ನು ನಡೆಸಿಕೊಡಲಿದ್ದಾರೆ. ಇದರಲ್ಲಿ ಚಿನ್ನ, ಬೆಳ್ಳಿ, ವಜ್ರ ಹಾಗೂ ಅಮೂಲ್ಯ ರತ್ನಗಳ ಗಣಿಗಾರಿಕೆ ಮೊದಲಾಗಿ ಈ ಬಗ್ಗೆ ಆಮೂಲಾಗ್ರ ಮಾಹಿತಿ ದೊರೆಯಲಿದೆ.
ಇಷ್ಟು ಮಾತ್ರವಲ್ಲದೇ ಪ್ರತಿವಾರದ ಕಾರ್ಯಕ್ರಮದಲ್ಲೂ ಪ್ರಶ್ನೆಯೊಂದನ್ನು ಕೇಳಲಿದ್ದು, ಇದಕ್ಕೆ ಉತ್ತರಿಸಿದ ಅದೃಷ್ಟಶಾಲಿ ಕೇಳುಗರೋರ್ವರಿಗೆ ಬೆಳ್ಳಿ ನಾಣ್ಯದ ಬಹುಮಾನವಿರುತ್ತದೆ ಎಂದು ಮೈತ್ರಿ ಮೈಜ್ಯುವೆಲ್ ಸಿಇಒ ಸೆಂಥಿಲ್ ವೇಲನ್ ತಿಳಿಸಿರುತ್ತಾರೆ.
ರೇಡಿಯೋ ಶಿವಮೊಗ್ಗವು ಸಾಮಾನ್ಯ ರೇಡಿಯೋಗಳ ಜೊತೆಗೆ, ಮೊಬೈಲ್ ನಲ್ಲಿರುವ ಇನ್ ಬಿಲ್ಟ್ ಎಫ್ ಎಂ ಗಳಲ್ಲಿ ಪ್ರಸಾರವಾಗಲಿದೆ. ಇದರ ಜೊತೆಗೆ ಸ್ವಂತದ್ದೇ ಆಪ್ ಸಹಾ ಹೊಂದಿದ್ದು, ಅದನ್ನು ಗೂಗಲ್ ಪ್ಲೇಸ್ಟೋರ್ ನಲ್ಲಿ ಡೌನ್ಲೋಡ್ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ( ಮೊ: ೭೨೫೯೧ ೭೬೨೭೯) ಸಂಪರ್ಕಿಸಬಹುದು ಎಂದು ರೇಡಿಯೋ ಶಿವಮೊಗ್ಗದ ನಿಲಯ ನಿರ್ದೇಶಕ ಜಿ.ಎಲ್. ಜನಾರ್ದನ್ ತಿಳಿಸಿರುತ್ತಾರೆ.