
ಸಾಗರ : ರಾಷ್ಟ್ರೀಯ ಹೆದ್ದಾರಿ ೨೦೬ರಲ್ಲಿ ಮಾರುತಿ ಓಮ್ನಿ ಮತ್ತು ಟಾಟಾ ಇಂಡಿಕಾ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ವ್ಯಕ್ತಿ ಸ್ಥಳದಲ್ಲಿಯೆ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಭದ್ರಾವತಿಯ ಅಜಯ್ (೨೧) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.

ಉಳ್ಳೂರು ಸಮೀಪದ ಮಂಚಾಲೆ ಗ್ರಾಮದ ಬಳಿ ಸಾಗರದ ಸೈಯದ್ ನೂರುಲ್ಲಾ ಎಂಬುವವರು ಉಳ್ಳೂರಿನಿಂದ ಸಾಗರದ ಕಡೆ ಇಂಡಿಕಾ ಕಾರಿನಲ್ಲಿ ಬರುತ್ತಿದ್ದರು. ಎದುರಿನಿಂದ ಬಂದ ಮಾರುತಿ ಓಮ್ನಿ

ನಡುವೆ ಅಪಘಾತ ಸಂಭವಿಸಿದೆ. ಮಾರುತಿ ಓಮಿನಿಯಲ್ಲಿದ್ದ ಭದ್ರಾವತಿ ನಿವಾಸಿ ಅಜಯ್ ತೀವೃ ಗಾಯಗೊಂಡು ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಉಲ್ಲಾಸ್ ಹಾಗೂ ಇಂಡಿಕಾ ಕಾರಿನಲ್ಲಿದ್ದ ಸೈಯದ್ ನೂರುಲ್ಲಾ

ಅವರಿಗೆ ಗಂಭೀರ ಗಾಯವಾಗಿದ್ದು ಶಿವಮೊಗ್ಗ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಆನಂದಪುರಂ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.