ಶಿವಮೊಗ್ಗ: ರೈತರಿಗೆ ಆತ್ಮ ಗೌರವ ತಂದುಕೊಟ್ಟ ರೈತ ನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಕುರಿತ ಡೈರೆಕ್ಟ್ ಆಕ್ಷನ್(ನೇರ ಕ್ರಮ) ಎಂಬ ನಾಟಕವನ್ನು ಸಹ್ಯಾದ್ರಿ ರಂಗತರಂಗ ಕಲಾವಿದರು ಜೂನ ೯ರಂದು ಸಂಜೆ ೬ ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಅಭಿನಯಿಸಲಿದ್ದಾರೆ ಎಂದು ರೈತ ನಾಯಕ ಕೆ.ಟಿ. ಗಂಗಾಧರ್ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೈತ ಸಂಘ ಮತ್ತು ಹಸಿರುಸೇನೆ, ಸಹ್ಯಾದ್ರಿ ರಂಗತರಂಗ ಇವರ ಸಂಯುಕ್ತಾಶ್ರಯದಲ್ಲಿ ಡಾ. ನಟರಾಜ್ ಹುಳಿಯಾರ್ ಬರೆದಿರುವ ಕಾಂತೇಶ್ ಕದರಮಂಡಲಗಿ ನಿರ್ದೇಶಿಸಿರುವ ಡೈರೆಕ್ಟ್ ಆಕ್ಷನ್ ನಾಟಕವನ್ನು ಸಹ್ಯಾದ್ರಿ ರಂಗ ತಂಡದವರು ಅಭಿನಯಿಸಲಿದ್ದಾರೆ. ಎಂ.ಡಿ. ನಂಜುಂಡಸ್ವಾಮಿ ಪಾತ್ರವನ್ನು ನಟ ಹೆಚ್.ಎಸ್. ನಾಗಭೂಷಣ್ ಅಭಿನಯಿಸಲಿದ್ದಾರೆ ಎಂದರು.


ಎಂ.ಡಿ. ನಂಜುಂಡಸ್ವಾಮಿ ಎಂದರೆ ರೈತರ ನಾಯಕರೇ ಆಗಿದ್ದಾರೆ. ಸCರ್ಕಾರದ ಅಧಿಕಾರಿಗಳನ್ನು, ಸರ್ಕಾರವನ್ನು ನಡುಗಿಸಿದ್ದವರು ಅವರು. ಸರ್ಕಾರದ ಜಪ್ತಿಗೆ ಅಧಿಕಾರಿಗಳ ಮನೆಯನ್ನೇ ಮರು ಜಪ್ತಿ ಮಾಡಿ ರಾಜಕಾರಣಿಗಳಲ್ಲಿ, ಅಧಿಕಾರಿಗಳಲ್ಲಿ ಕಂಪನ ಸೃಷ್ಟಿಸಿದವರು. ರೈತ

ಸಮೂಹಕ್ಕೆ ದುಡಿದವರು. ಇಂತಹ ಮಹಾನ್ ನಾಯಕನ ಹೋರಾಟದ ಬದುಕನ್ನು ಡೈರೆಕ್ಟ್ ಆಕ್ಷನ್ ನಾಟಕ ಅನಾವರಣಗೊಳಿಸಲಿದೆ ಎಂದರು.
ನಿರ್ದೇಶಕ ಕಾಂತೇಶ್ ಕದರಮಂಡಲಗಿ ಮಾತನಾಡಿ, ರೈತ ಸಂಘ ಮತ್ತು ಹಸಿರುಸೇನೆಯ ಸಹಕಾರದಲ್ಲಿ ಈ ನಾಟಕ ಪ್ರದರ್ಶನ

ಮಾಡಲಾಗುವುದು. ಈಗಾಗಲೇ ಕೆಲವು ಕಡೆ ಈ ನಾಟಕವನ್ನು ಅಭಿನಯಿಸಲಾಗಿದೆ. ರಾಜ್ಯಾದ್ಯಂತ ಈ ನಾಟಕ ಪ್ರದರ್ಶಿಸುವುದು ನಮ್ಮ ಉದ್ದೇಶವಾಗಿದೆ. ರಂಗಾಸಕ್ತರು, ರೈತ ಮುಖಂಡರು, ಪ್ರಮುಖವಾಗಿ ಯುವಕರು ಈ ನಾಟಕವನ್ನು ನೋಡಬೇಕು ಎಂದರು.


ಪತ್ರಿಕಾಗೋಷ್ಠಿಯಲ್ಲಿ ನಟ ಹೆಚ್.ಎಸ್. ನಾಗಭೂಷಣ್, ಚಂದ್ರಯ್ಯ, ಕೆ.ಜಿ. ವೆಂಕಟೇಶ್, ಬಿ. ಚಂದ್ರೇಗೌಡ, ಜಗದೀಶ್ ನಾಯ್ಕ್, ಸುರೇಶ್, ಮುಂತಾದವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!