ಶಿವಮೊಗ್ಗ, ಜ.15:
50 ದಿನದ ಹಿಂದಷ್ಟೇ ಮದುವೆಯಾಗಿದ್ದ ಮದುಮಗಳು ನೇಣಿಗೆ ಶರಣಾಗಿರುವ ಘಟನೆ ನಾನಾ ಅನುಮಾನಗಳನ್ನು ಹುಟ್ಟುಹಾಕಿದೆ.
ಆನವಟ್ಟಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸೊರಬ ತಾಲೂಕಿನ ಜಡೆಯ ಬತಗಟ್ಟೆ ಗ್ರಾಮದ ಅನುಷಾ(20) ಹಾಗೂ ಅದೇ ತಾಲೂಕಿನ ಜಡೆಯ ಸಾಲಿಗೆ ಗ್ರಾಮದ ನಿವಾಸಿ ವಿನಯ್ ರೊಂದಿಗೆ 2020 ನವೆಂಬರ್ 25 ರಂದು ಮದುವೆಯಾಗಿರುತ್ತದೆ.
ಮದುವೆಯ ನಂತರ ಜ.11 ರಂದು ತನ್ನ ತವರು ಮನೆ ಬತಗಟ್ಟೆ ಗ್ರಾಮಕ್ಕೆ ಗಂಡನೊಂದಿಗೆ ಬಂದಿದ್ದ ಅನುಷಾ ರಾತ್ರಿಯ ಊಟವನ್ನ ಕಟ್ಟಿಸಿಕೊಂಡು ಗಂಡನೊಂದಿಗೆ ಸಾಲಿಗೆ ಗ್ರಾಮಕ್ಕೆ ಬಂದಿದ್ದಳು. ನಂತರ ನಿನ್ನೆ ಬೆಳಿಗ್ಗೆ 8-30 ರ ಸಮಯದಲ್ಲಿ ತನ್ನ ತಾಯಿಗೆ ಫೊನ್ ಮಾಡಿದ ಅನುಷಾ ಊರಿಗೆ ಇಂದು ಬರುವುದಾಗಿ ತಿಳಿಸಿರುತ್ತಾಳೆ.
ಆದರೆ 10-50 ರ ಸಂದರ್ಭದಲ್ಲಿ ವಿನಯ್ ನ ಮಾವ ಅನುಷಾರವರ ತವರು ಮನೆಗೆ ಫೋನ್ ಹಚ್ಚಿ ನಿಮ್ಮ ಮಗಳು ಅಸ್ವಸ್ಥಳಾಗಿದ್ದಾಳೆ ಎಂದು ತಿಳಿಸಿರುತ್ತಾಳೆ.
ತಂದೆ ಈಶ್ವರಪ್ಪ ಹಾಗೂ ಸರಸ್ವತಿ ಸಾಲಿಗೆ ಗ್ರಾಮಕ್ಕೆ ಬಂದಿದ್ದಾರೆ. ವಿನಯ್ ನ ಅಜ್ಜಿ ಅನುಷಾ ನೇಣು ಬಿಗಿದುಕೊಂಡಿದ್ದು ಆಕೆಯನ್ನ ವಿನಯ್ ಶಿರಸಿ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ ಎಂದು ತಿಳಿಸಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಈಶ್ವರಪ್ಪ ದಂಪತಿಗಳಿಗೆ ಅನುಷಾ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಅವರು ತನ್ನ ಮಗಳ ಸಾವು ಅನುಮಾನಾಸ್ಪದ ಆಗಿದ್ದು ಕೊಲೆ ಶಂಕೆಯ ದೂರು ನೀಡಿದ್ದಾರೆ.