ಶಿವಮೊಗ್ಗ, ಜ.15:
ತೀರ್ಥಹಳ್ಳಿ ತಾಲೂಕಿನ ಅರಳಸುರಳಿ ಗ್ರಾಮದಲ್ಲಿ ಧರ್ಮಣ್ಣ ಎಂಬುವರ ರೈತರ ಮನೆಯ ಪಕ್ಕದಲ್ಲಿ ಕಟ್ಟಿಗೆ ರಾಶಿಯಲ್ಲಿ ಅವಿತುಕೊಂಡಿದ್ದ 13 ಅಡಿ ಉದ್ದದ ಬಾರಿ ಗಾತ್ರದ ಕಾಳಿಂಗ ಸರ್ಪವನ್ನು ತೀರ್ಥಹಳ್ಳಿಯ ಉರಗತಜ್ಞ ಮಾರುತಿ ಮಾಸ್ಟರ್ ಅವರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಕಾಳಿಂಗ ಸರ್ಪವನ್ನು ಕಾಡಿಗೆ ಬಿಡಲಾಗಿದೆ ಎಂದು ತಿಳಿದುಬಂದಿದೆ . ಇತ್ತೀಚಿನ ದಿನಗಳಲ್ಲಿ ತೀರ್ಥಹಳ್ಳಿಯಲ್ಲಿ ಪದೇಪದೇ ಕಾಳಿಂಗ ಸರ್ಪಗಳು ಕಂಡುಬರುತ್ತಿದ್ದು ಅರಣ್ಯ ಇಲಾಖೆ ಮತ್ತು ಸರ್ಕಾರ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಹಿಡಿಯಬೇಕಿದೆ ಎಂಬ ಪರಿಸ್ಥಿತಿ ತೀರ್ಥಹಳ್ಳಿಯಲ್ಲಿ ಇದೆ.
ವರದಿ: ಲಿಯೋಅರೋಜ