ಶಿವಮೊಗ್ಗ, ಜೂ.01:
ಶಿವಮೊಗ್ಗ ಸೇರಿದಂತೆ ಐದೂವರೆ ಜಿಲ್ಲೆಗಳ ನಡುವೆ ನಡೆಯುವ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಪಟ್ಟಂತೆ ಅಭ್ಯರ್ಥಿಗಳ ತಲೆಯಲ್ಲಿರುವ ಗೊಂದಲಕ್ಕೆ ಹಾಗೂ ಮತದಾರರಿಗೆ ಶಿವಮೊಗ್ಗ ಜಿಲ್ಲಾಧಿಕಾರಿ ಸ್ಪಷ್ಟ ವಿವರಣೆ ನೀಡಿದ್ದು ಪ್ರಥಮ ಪ್ರಶಸ್ತಿದ ಮತವನ್ನು 1 ಎಂಬ ಅಂಕೆಯಲ್ಲಿ ಸಲೀಸಾಗಿ ಬರೆಯಬಹುದು ಎಂದಿದ್ದಾರೆ.
ಅಲ್ಲಿ ಗೆರೆ ಹಾಕಿದರೂ ಸಹ ಸರಿ. ಒಂದು ಎಂಬ ಅಂಕೆಯನ್ನು ಬರೆದರೂ ಸರಿ ಎಂದು ವಿವರಿಸಿದ್ದಾರೆ
ಇಲ್ಲಿಯವರೆಗೆ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ರಾಜಕೀಯ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ತಮ್ಮ ತಮ್ಮ ಬಿತ್ತಿ ಪತ್ರದಲ್ಲಿ ನೀವು ಪ್ರಥಮ ಪ್ರಾಶಸ್ತ್ಯವನ್ನು ನನಗೆ ನೀಡಬೇಕು. ಅಲ್ಲಿ ನಮ್ಮ ಸಂಖ್ಯೆಯ ಹಾಗೂ ಚಿತ್ರದ ಕೊನೆಗೆ ಇರುವ ಜಾಗದಲ್ಲಿ ಉದ್ದಗೆರೆಯನ್ನು ಮಾತ್ರ ಹಾಕಬೇಕು ಎಂದು ಹೇಳುತ್ತಿದ್ದರು.
ಒಂದು ಅಂಕೆ ಬರೆಯುವುದು ತಪ್ಪು ಎನ್ನುತ್ತಿದ್ದರು. ಅದರ ಮೇಲೆ ಕೆಳಗೆ ಅಡ್ಡಗೆರೆ ಹಾಕುವಂತಿಲ್ಲ ಎನ್ನುತ್ತಿದ್ದರು.
ಇದಕ್ಕೆ ನಿನ್ನೆ ಮಧ್ಯಾಹ್ನ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ ಸರಿಯಾಗಿ ಒಂದು ಅಂಕೆ ಬರೆದರೆ ಅದು ತಿರಸ್ಕೃತವಾಗುವುದಿಲ್ಲ. ನಮ್ಮ ಪೆನ್ನಲ್ಲೇ ಬರೆಯಬೇಕು. ಅದರ ಮೇಲೆ ಏನೂ ಇತರೆ ಮಾಹಿತಿ ಬರೆಯಬೇಡಿ. ಒಂದು ಸಂಖ್ಯೆಯನ್ನು1 ಬರೆಯುವುದು ಯಾವುದೇ ತಪ್ಪಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಹಿಂದಿನ ಚುನಾವಣಾ ಅನುಭವದ ವಿವರಣೆ ನೀಡಿದ ಒಂದು ಎಂದು ಗೆರೆ ಹಾಕಿ ಬರಿಯುವುದೂ ತಪ್ಪಾಗುವುದಿಲ್ಲ. ಗೊಂದಲವಾಗದೆ ಗೆರೆನಾದರೂ ಹಾಕಿ. ಒಂದು ಅಂಕೆ ಬರೆಯುವುದಾದರೆ ಬರೆಯಿರಿ. ಯಾವುದೇ ಸಮಸ್ಯೆ ಇಲ್ಲ. ಚಿತ್ತುಕಾಟು ಮಾಡಬೇಡಿ ಎಂದು ವಿವರಿಸಿದ್ದಾರೆ.