ಶಿವಮೊಗ್ಗ,ಮೇ 27: ತಾಲ್ಲೂಕಿನ ಬಿ.ಬೀರನಹಳ್ಳಿಯ ವೆಂಕಟಪುರದಲ್ಲಿರುವ ಶ್ರೀತಿರುಮಲ ರಂಗನಾಥಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಹಾಗೂ ತಿರುಕಲ್ಯಾಣೋತ್ಸವ ಮತ್ತು ಮಹಾಸುದರ್ಶನ ಹೋಮವನ್ನು ಮೇ 28 ಮತ್ತು 29ರಂದು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ತಿರುಮಲ ದೇವರ ದೇವಸ್ಥಾನ ಸಮಿತಿ ಪ್ರಮುಖರಾದ ದೇವುಕುಮಾರ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೇ 28ರ ಸಂಜೆ 5ಕ್ಕೆ ಗುರುಪ್ರಾರ್ಥನೆ ಅನುಜ್ಞೆ ಮಹಾಸಂಕಲ್ಪ ವಿಶ್ವಕ್ಷೇನ ಮಹಾಗಣಪತಿ ಆರಾಧನೆ, ಪುಣ್ಯಾವಾಚನ ಪಂಚಗವ್ಯ ಆರಾಧನೆ ಹಾಗೂ ಸಂಜೆ 7ಕ್ಕೆ ವಿಶೇಷವಾಗಿ ಶ್ರೀ ತಿರುಮಲ ರಂಗನಾಥ ಸ್ವಾಮಿಯ ಕಲ್ಯಾಣೋತ್ಸವ, ದೀಪಾರಾಧನೆ ಮಂತ್ರಪುಷ್ಪ ನಡೆಯಲಿದೆ ಎಂದರು.
ಮೇ 29ರ ಬೆಳಿಗ್ಗೆ 6ಕ್ಕೆ ಸಪ್ರಭಾಥ ಸೇವೆ ವೇದಪಾರಾಯಣ ಕಲಶಾರಾಧನೆ, ಬೆಳಿಗ್ಗೆ 8ಕ್ಕೆ ಮೂಲಮೂರ್ತಿಗೆ ಪಂಚಾಮೃತ ಅಭಿಷೇಕ ಅಗ್ನಿ ಪ್ರತಿಷ್ಠೆ ವಿಶ್ವಕ್ಸೇನ ಮಹಾಗಣಪತಿ ಹೋಮ, ನವಗ್ರಹ ಹೋಮ, ದುರ್ಗಹೋಮ, ಸರ್ಪಸೂಕ್ತಹೋಮ, ಶ್ರೀರಂಗನಾಥ ಸ್ವಾಮಿ ಮೂಲ ಮಂತ್ರ ಹೋಮ, ವಿಶೇಷವಾಗಿ ಶ್ರೀ ಮಹಾ ಸುದರ್ಶನ ಹೋಮ, ನರಸಿಂಹ ಮೂಲ ಮಂತ್ರ ಹೋಮ, ಮಹಾ ಮಹಾಪೂರ್ಣಾಹುತಿ, ಮಹಾಕುಂಭಾಭಿಷೇಕ ಮತ್ತಿತರ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಬೆಂಗಳೂರಿನ ಕೆಂಗೇರಿಯಲ್ಲಿರುವ ಶ್ರೀರಾಮಾನುಜ ಮಠದ ಆಗಮ ಪ್ರವೀಣ ಶ್ರೀ ಚಿರಂಜೀವಿ ರಾಮಚಂದ್ರ ಭಟ್ಟಚಾರ್ಯರ ಪ್ರಧಾನ ಅರ್ಚಕತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು.
ಶಿವಮೊಗ್ಗದಿಂದ ಕೇವಲ 15 ಕಿ.ಮೀ. ದೂರವಿರುವ ಈ ಕ್ಷೇತ್ರ ಭಕ್ತರ ಸಹಕಾರದಿಂದ ಪ್ರಸಿದ್ಧ ಪ್ರವಾಸಿ ತೀರ್ಥಕ್ಷೇತ್ರವಾಗಿ ರೂಪುಗೊಂಡಿದ್ದು, ಸಾರ್ವಜನಿಕರು ಈ ಕ್ಷೇತ್ರಕ್ಕೆ ಆಗಮಿಸಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ವಿನಂತಿಸಿದರು.
ಗೋಷ್ಠಿಯಲ್ಲಿ ಬಸವರಾಜ್, ಕೆ. ಆರ್.ಅಜಯ್, ದಿನೇಶ್ ಪಾಟೀಲ್, ಮಂಜಪ್ಪ, ಕೃಷ್ಣಮೂರ್ತಿ ಮೊದಲಾದವರು ಇದ್ದರು.
ReplyForwardAdd reaction |