ಶಿಕ್ಷಣ ಇಲಾಖೆಯಲ್ಲಿ ಅತ್ಯಂತ ಚಿರಪರಿಚಿತರಾಗಿದ್ದ, ಹಾಲಿ ಹೊಸನಗರ ಬಿ ಇ ಓ ಕಚೇರಿಯ ಮ್ಯಾನೇಜರ್ ನಿಜಗುಣ ಅವರು ಮೊನ್ನೆ ನಿಧನರಾಗಿದ್ದಾರೆ.


ಇದೊಂದು ನಿಜಕ್ಕೂ ಅತ್ಯಂತ ದುಃಖದ ವಿಚಾರ. ನಿಜಗುಣ ಅವರು ಶಿವಮೊಗ್ಗ, ಭದ್ರಾವತಿ ಬಿಇಓ ಕಚೇರಿ ಸೇರಿದಂತೆ ಹಲವೆಡೆ ಕರ್ತವ್ಯ ನಿರ್ವಹಿಸಿದ್ದು, ಶಿಕ್ಷಕರು, ಶಿಕ್ಷಣ ಇಲಾಖೆ ಅಧಿಕಾರಿಗಳು, ಅಷ್ಟೇ ಅಲ್ಲದೆ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆಗಳಲ್ಲಿ ಅತಿ ಹೆಚ್ಚಾಗಿ ಗುರುತಿಸಿಕೊಂಡಿದ್ದಂತವರು.
ಅವರ ಕನ್ನಡ ಜ್ಞಾನ ಅಪಾರ ಮೆಚ್ಚುಗೆ ಪಾತ್ರವಾಗುತ್ತದೆ. ನಿಜಗುಣ ಅವರು ಕೈಲಿ ಪೆನ್ನು ಹಿಡಿದರೆ ಸಾಕು ಕನ್ನಡದ ಸಾಲು ಕಂಪ್ಯೂಟರ್ ನ ಅಕ್ಷರಗಳಿಗಿಂತ ಸುಂದರವಾಗಿ ಹೊರ ಬರುತ್ತಿದ್ದವು. ಅತ್ಯಂತ ಸುಂದರವಾಗಿ ಚಿತ್ತು ಕಾಟುಗಳಿಲ್ಲದ ಅಕ್ಷರ ಬರೆಯುತ್ತಿದ್ದ ನಿಜಗುಣ ಅವರನ್ನು ಶಿಕ್ಷಣ ಇಲಾಖೆಯ ಹಲವು ಸಭೆ ಸಮಾರಂಭಗಳಲ್ಲಿ ಅತಿ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದರು. ಗುರುತಿಸಿದ್ದರು.


ನಿಜಗುಣ ಅವರ ಸಾವು ನಿಜಕ್ಕೂ ನೋವಿನ ವಿಚಾರವೇ ಹೌದು. ಎಲ್ಲರ ಜೊತೆ ಅತ್ಯಂತ ಪ್ರೀತಿ ವಿಶ್ವಾಸದಿಂದ ಎಲ್ಲರಿಗೂ ಅತ್ಯಂತ ಗೌರವದಿಂದ ಮಾತನಾಡುತ್ತಿದ್ದ ನಿಜಗುಣ ಅವರು ಹಿರಿಯ ಅಧಿಕಾರಿಗಳ ಜೊತೆ ಇದ್ದಂತೆ ಎಲ್ಲ ಶಿಕ್ಷಕರ, ಸಹೋದ್ಯೋಗಿಗಳ, ಸ್ನೇಹಿತರ ಜೊತೆ ಪ್ರೀತಿಗೆ ಪಾತ್ರರಾಗಿದ್ದರು.
ಶಿಕ್ಷಕರ ವರ್ಗಾವಣೆ, ಶಿಕ್ಷಕರ ಸಾಂಸ್ಕೃತಿಕ ಕಾರ್ಯಕ್ರಮಗಳು, ಶಿಕ್ಷಕರ ದಿನಾಚರಣೆ ಅಂತಹ ಕಾರ್ಯಕ್ರಮಗಳಲ್ಲಿ ನಿಜಗುಣ ತೆರೆ ಹಿಂದಿನ ಅತ್ಯುತ್ತಮ ಕೆಲಸಗಾರ.


ನಿಜಗುಣ ಅವರ ಕಾರ್ಯದ ಬಗ್ಗೆ, ಪ್ರೀತಿಯ ಬಗ್ಗೆ ನಾಲ್ಕು ಸಾಲುಗಳಲ್ಲಿ ಹೇಳಲು ಅಸಾಧ್ಯ.
ಸರಳ ಸಜ್ಜನಿಕೆ ಹಾಗೂ ಅಷ್ಟೇ ಪ್ರೀತಿಯ ಮಾತುಕತೆಗಳ ಮೂಲಕ ಎಲ್ಲರ ಜೀವನಾಡಿಯಾಗಿದ್ದ ಪ್ರೀತಿಯ ದೀಪವಾಗಿದ್ದ ನಿಜಗುಣ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ.

ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನುಅವರ ಕುಟುಂಬಕ್ಕೆ ಭಗವಂತ ನೀಡಲಿ. ಅವರಿಗೆ ನಿಮ್ಮ ತುಂಗಾತರಂಗ ದಿನಪತ್ರಿಕೆಯ ಅಕ್ಷರ ಕಂಬನಿ
-ಗಜೇಂದ್ರ ಸ್ವಾಮಿ ಸಂಪಾದಕರಿ

By admin

ನಿಮ್ಮದೊಂದು ಉತ್ತರ

error: Content is protected !!