ಶಿವಮೊಗ್ಗ: ಇಲ್ಲಿನ ವಿನೋಬ ನಗರದ ಚಾನಲ್ ಬಳಿ ಇರುವ ಸರ್ಕಾರಿ ಪ್ರೌಢಶಾಲೆಗೆ ೨೦೨೩-೨೪ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇದೇ ಪ್ರಥಮ ಬಾರಿಗೆ ಶೇ.೧೦೦ ಫಲಿತಾಂಶ ಲಭಿಸಿದೆ. ಅಲ್ಲದೆ ಈ ಶಾಲೆಯು ನಗರದ

ಸರ್ಕಾರಿ ಶಾಲೆಗಳಲ್ಲಿಯೇ ಸತತ ಮೂರನೇ ಬಾರಿಗೆ ಅತಿ ಹೆಚ್ಚಿನ ಫಲಿತಾಂಶ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಉತ್ತಮ ಫಲಿತಾಂಶ ಲಭಿಸಲು ಸಹಕರಿಸಿದ ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ, ಶಾಲೆಗೆ ಮೂಲ ಸೌಕರ್ಯ ಕಲ್ಪಿಸಲು ಸಹಕಾರ ನೀಡಿರುವ ಮಲೆನಾಡು ಹಳೆ ವಿದ್ಯಾರ್ಥಿಗಳ ಸಂಘ, ಕೆಳದಿ ಚೆನ್ನಮ್ಮ ನಿವಾಸಿಗಳ ಸಂಘ,

ಸ್ನೇಹಜೀವಿ ಗೆಳೆಯರ ಬಳಗ, ಶುಭಂ ಹೋಟೆಲ್‌ನ ಮಾಲೀಕರು, ಜೆಸಿಐ ಶಿವಮೊಗ್ಗ ವಿವೇಕ್

ವಲಯ-೨೪, ಜೆಸಿಐ ಶರಾವತಿ, ರೋಟರಿ ಸೆಂಟ್ರಲ್ ಕ್ಲಬ್, ಇನ್ನರ್‌ವೀಲ್ ಕ್ಲಬ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಹಾಗೂ ಎಲ್ಲಾ ಪೋಷಕರಿಗೂ ಮುಖ್ಯ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!