ನಾಟಕ “ರಾಧೇಯನ್”
ಶಿವಮೊಗ್ಗ: ಶಿವಮೊಗ್ಗ ಪ್ರೆಸ್ ಟ್ರಸ್ಟ್, ನಮ್ ಟೀಮ್ ಹಾಗೂ ಸ್ನೇಹಬಳಗದ ಸಂಯುಕ್ತಾಶ್ರಯದಲ್ಲಿ ನೀನಾಸಂ ರಂಗ ಶಿಕ್ಷಣ ಕೇಂದ್ರದ ನಿವೃತ್ತ ಪ್ರಾಂಶುಪಾಲ, ರಂಗಕರ್ಮಿ ಕೆ.ಜಿ. ಮಹಾಬಲೇಶ್ವರ ಅವರ ನಿರ್ದೇಶನದಲ್ಲಿ “ರಾಧೆಯನ್” ನಾಟಕ ಪ್ರದರ್ಶನವಿದೆ. ಕುಮಾರವ್ಯಾಸ, ಪಂಪ, ರನ್ನ ಅವರ ಕಾವ್ಯ ಆಧರಿಸಿ ಕೆ.ಜಿ. ಮಹಾಬಲೇಶ್ವರ ಅವರೇ ರಚಿಸಿದ ರಂಗಕೃತಿ ಇದು. ಇದೊಂದು ಕಾವ್ಯವಾಚನ ಮತ್ತು ಅರೆನಾಟಕ ಪ್ರಸ್ತುತಿಯಾಗಿದೆ.
ಹೆಗ್ಗೋಡಿನ ಜನಮನದಾಟ ತಂಡದ ಈ ನಾಟಕವನ್ನು ಡಿಎಸ್ ನಾಗಭೂಷಣ ಹಾಗೂ ಏಸುಪ್ರಕಾಶ್ ಅವರ ಸ್ಮರಣೆಯಲ್ಲಿ ಹೆಗ್ಗೋಡಿನ ಸತ್ಯಶೋಧನ ರಂಗಸಮುದಾಯ ಪ್ರಸ್ತುತಪಡಿಸುತ್ತಿದೆ.
ನಾಟಕ ಪ್ರದರ್ಶನವು ನಗರದ ಆರ್.ಟಿ.ಓ. ರಸ್ತೆಯಲ್ಲಿರುವ ಪತ್ರಿಕಾ ಭವನದಲ್ಲಿ ಏಪ್ರಿಲ್ 28ರ ಸಂಜೆ 6.30ಕ್ಕೆ ಪ್ರದರ್ಶನವಾಗಲಿದ್ದು, ಉಚಿತ ಪ್ರವೇಶವಿದೆ.
ನಾಟಕ ವೀಕ್ಷಣೆಗೆ ಆಗಮಿಸಿ ಯಶಸ್ವಿಗೊಳಿಸುವಂತೆ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ನಾಗರಾಜ್ ನೇರಿಗೆ ಕೋರಿದ್ದಾರೆ.