ಶಿವಮೊಗ್ಗ, ಏ.22:
ಕಳೆದು ಹೋದ ಮೊಬೈಲ್ ಹುಡುಕುತ್ತಾ ಹೋದ ಯುವಕನೋರ್ವ ತಾಳಗುಪ್ಪ ರೈಲಿಗೆ ಸಿಲುಕಿ ನಿಧನ ಹೊಂದಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ಶಿವಮೊಗ್ಗ ವಲಯದ ಸೋಮಿನಿಕೊಪ್ಪ ವೈದ್ಯಕೀಯ ಕಾಲೇಜು ಬಳಿ ನಾಲ್ವರು ಗೆಳೆಯರು ರಾತ್ರಿ ಹೋಗಿದ್ದು, ಅಲ್ಲಿ ಒಬ್ಬರ ಮೊಬೈಲ್ ಕಳೆದು ಹೋಗಿದೆ.
ಅದನ್ನು ಹುಡುಕುತ್ತಿದ್ದಾಗ ಶಿವಮೊಗ್ಗ ವಿನೋಬನಗರ ಕರಿಯಣ್ಣ ಕ್ರಾಸ್ ಬಳಿಯ ಹೇಮಂತ್ (24) ವರ್ಷದ ಯುವಕ ರೈಲಿಗೆ ಸಿಲುಕಿ ಸಾವು ಕಂಡಿದ್ದಾನೆ. ಗೋಪಾಲ್ ಎಂಬುವರ ಮಗನಾದ ಹೇಮಂತ್ ಎಂದು ಗೊತ್ತಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಶಿವಮೊಗ್ಗ ಮೆಗಾನ್ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಯುತ್ತಿದ್ದು, ಮುಂದಿನ ಕ್ರಮವನ್ನು ರೈಲ್ವೆ ಪೊಲೀಸರು ಕೈಗೊಂಡಿದ್ದಾರೆ.
ಸಂತಾಪ: ಹೇಮಂತ್ ಅವರ ನಿಧನಕ್ಕೆ ಕರ್ನಾಟಕ ಕರಾಟೆ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ವಿನೋದ್ ಸಂತಾಪ ಸೂಚಿಸಿದ್ದಾರೆ.