ಹೊಸನಗರ; ಬಿಜೆಪಿ ಪಕ್ಷ ಸೈದ್ಧಾಂತಿಕ ತಳಹದಿಯ ಮೇಲೆ ಕೆಲಸ ಮಾಡುವ ಪಕ್ಷ. ಆದರೆ ಇತ್ತೀಚಿಗೆ ಕುಟುಂಬ ರಾಜಕಾರಣ, ಜಾತಿ ರಾಜಕಾರಣಗಳು ಕಾಣುತ್ತಿರುವುದು ಪಕ್ಷದ ಬೆಳವಣಿಗೆಗೆ ಮಾರಕವಾಗಿದೆ ಎಂದು ಮಾಜಿ ಸಚಿವ, ಪಕ್ಷೇತರ ಅಭ್ಯರ್ಥಿಕೆ.ಎಸ್.ಈಶ್ವರಪ್ಪ ಹೇಳಿದರು.
ಹೊಸನಗರದ ಶಿವಮೊಗ್ಗ ರಸ್ತೆಯಲ್ಲಿ ನೂತನ ಚುನಾವಣಾ ಕಾರ್ಯಲಯವನ್ನು ಉದ್ಘಾಟಿಸಿದ ಬಳಿಕ ಅವರು ಈಡಿಗರ ಭವನದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು.
ಯಡಿಯೂರಪ್ಪ ಹಾಗೂ ಅವರ ಮಕ್ಕಳು ಇಡೀ ಆಡಳಿತ ತಮ್ಮ ಕುಟುಂಬದಲ್ಲಿಯೇ ಇರಬೇಕೆಂಬ ಅಪೇಕ್ಷೆ ಹೊಂದಿದ್ದಾರೆ. ಆದರೆ ಬಿಜೆಪಿ ಲಕ್ಷಾಂತರ ಮಂದಿ ಕಾರ್ಯಕರ್ತರು ತಪಸ್ಸಿನಂತೆ ಕಟ್ಟಿ ಬೆಳಸಿದ ಪಕ್ಷ. ಕೇಂದ್ರದ ನಾಯಕರು ಹಾಗೂ ನರೇಂದ್ರ ಮೋದಿ ಅವರು ರಾಜ್ಯದ ಮೇಲೆ ಇಟ್ಟಿರುವ ಭರವಸೆಯನ್ನು ಹುಸಿಯಾಗಿಸಲು ಮುಂದಾಗಿದ್ದಾರೆ. ಹೊಂದಾಣಿಕೆಯ ರಾಜಕಾರಣದಿಂದ ಪಕ್ಷದ ಮೂಲ ಕಾರ್ಯಕರ್ತರು ನೊಂದಿದ್ದಾರೆ ಎಂದರು.
ಶಿವಮೊಗ್ಗ ಜಿಲ್ಲೆಯ ಮಣ್ಣಿಗೆ ಸಂಘಟನೆ, ಸಿದ್ದಾಂತಕ್ಕೆ ಬೆಲೆ ಇದೆ.
ಲೋಕಸಭೆ ಚುನಾವಣೆಯಲ್ಲಿ ತಮ್ಮ ಉಮೇದುವಾರಿಕೆಯನ್ನು ಬೆಂಬಲಿಸುತ್ತಿರುವ ಅಪಾರ ಸಂಖ್ಯೆಯ ಜನಸಮೂಹವೇ ಇದಕ್ಕೆ ಸಾಕ್ಷಿ. ತಾವು ಯಾವುದೇ ಕಾರಣಕ್ಕೆ ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ. ಅಪಪ್ರಚಾರ ಮಾಡಿಗೆಲ್ಲಲು ಸಾಧ್ಯವಿಲ್ಲ. ಹಿಂದೂ ಸಂಘಟನೆಗಳು ತಮಗೆ ಬೆಂಬಲ ಸೂಚಿಸಿವೆ. ಬಿ.ವೈ.ರಾಘವೇಂದ್ರ ಹಾಗೂ ಗೀತಾ ಶಿವರಾಜ್ ಕುಮಾರ್ಚುನಾವಣೆಯಲ್ಲಿ ಸೋಲುವುದು ನಿಶ್ಚಿತ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ವಾಟಗೋಡು ಸುರೇಶ್ ಮಾತನಾಡಿ, ಬಿಜೆಪಿಯನ್ನು ಸ್ವಚ್ಚಗೊಳಿಸಬೇಕಿದೆ. ಮೂಲ ಬಿಜೆಪಿ ಕಾರ್ಯಕರ್ತರನ್ನು ದೂರ ಮಾಡಲಾಗಿದೆ. ಸಾಗರ ಹಾಗೂ ಸೊರಬದಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಹರತಾಳು ಹಾಲಪ್ಪ ಹಾಗೂ ಕುಮಾರ ಬಂಗಾರಪ್ಪಅವರ ಸೋಲಿಗೆ ಯಡಿಯೂರಪ್ಪ ಅವರೇ ಕಾರಣ. ಹಿಂದುಳಿದ ವರ್ಗಕ್ಕೆ ಸೇರಿದ ಅವರು ಈಗ ಈಶ್ವರಪ್ಪ ಅವರನ್ನು ಬೆಂಬಲಿಸುವ ಮೂಲಕ ತಮಗಾದ ಅನ್ಯಾಯಕ್ಕೆ ಉತ್ತರ ನೀಡಬೇಕುಎಂದರು.
ಮಾಜಿ ಶಾಸಕ ಗೂಳಿಹಟ್ಟಿ ಶೇಖರ್, ನಳಿನಿರಾವ್ ಮಾತನಾಡಿದರು. ಪ್ರಮುಖರಾದ ತ.ಮ.ನರಸಿಂಹ, ವಾಟ್ಗೋಡು ಸುರೇಶ್, ವಡಾಹೊಸಳ್ಳಿ ಕುಮಾರಸ್ವಾಮಿ, ರಾಘವೇಂದ್ರ, ಅದರಂತೆ ಸತೀಶ್, ಕುಂಬ್ಳೆ ಸುರೇಶ್, ರೇಣುಕ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ನಿಟ್ಟೂರಿನಲ್ಲಿ ಸಭೆ: ಇದಕ್ಕೂ ಮೊದಲು ತಾಲೂಕಿನ ನಿಟ್ಟೂರಿನಲ್ಲಿಯೂ ತಮ್ಮ ಬೆಂಬಲಿಗರ ಸಭೆ ನಡೆಸಿದರು.
ರಾಜಕೀಯ ಜೀವನದಲ್ಲಿ ನಾನು ಸಿದ್ದಾಂತ ಬಿಟ್ಟು ಹೋದವನಲ್ಲ.ಪಕ್ಷಕ್ಕಾಗಿ ದುಡಿದಿದ್ದೇನೆ ಎಂದ ಅವರುಇರುವ ಕಡಿಮೆ ಕಾಲಾವಧಿಯಲಿ ಎಲ್ಲರನ್ನೂ ತಲುಪುವುದು ಕಷ್ಟ. ಪ್ರತಿಯೊಬ್ಬ ಬೆಂಬಲಿಗರೂ ತಾವೇ ಅಭ್ಯರ್ಥಿಎಂದು ಭಾವಿಸಿ ಜನರ ವಿಶ್ವಾಸ ಗಳಿಸಿ, ಮತಯಾಚಿಸಿ ಎಂದು ಕರೆ ನೀಡಿದರು.