ಶಿವಮೊಗ್ಗ, ಏ.18:
ಶರಾವತಿ ಮುಳುಗಡೆ ಸಂತ್ರಸ್ಥರ ಬಗ್ಗೆ ಯಾವುದೇ ತಿಳುವಳಿಕೆ ನಿಮಗಿಲ್ಲ. ನಿಮ್ಮ ಕೈಲಿ ಆಗದಿರುವುದನ್ನು ಹೇಳುತ್ತಾ ಯಾಕೆ ನಾಟಕ ಮಾಡುತ್ತಿದ್ದೀರಿ ಎಂದು ಎಂ.ಎ.ಡಿ.ಬಿ ಅಧ್ಯಕ್ಷ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ. ಮಂಜುನಾಥಗೌಡ ಇಂದಿಲ್ಲಿ ಬಿಜೆಪಿ ಮುಖಂಡರ, ಜನಪ್ರತಿನಿಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಅವರಿಂದು ಬೆಳಿಗ್ಗೆ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡುತ್ತಾ, ಶರಾವತಿ ಮುಳುಗಡೆ ಸಂತ್ರಸ್ಥರ ವಿಚಾರದಲ್ಲಿ ಮೊಸಳೆ ಕಣ್ಷೀರು ಸುರಿಸುವುದನ್ನು ನಿಲ್ಲಿಸಿ, ಯಾಕೆಂದರೆ ರೈತರ ಪರವಾಗಿ ಮಾತನಾಡುವುದಕ್ಕೆ ನಿಮಗೆ ನೈತಿಕ ಹಕ್ಕಿಲ್ಲ. ನೀವು ಏನನ್ನೂ ಮಾಡಿಲ್ಲ, ಮಾಡೊಲ್ಲ, ನೊಂದ ಜನರಿಗೆ ಸುಮ್ಮನೆ ಮತ್ತೊಮ್ಮೆ ಆ ವಿಷಯ ಕೆದಕಿ ಗಾಯದ ಮೇಲೆ ಹುಳಿ ಹಿಂಡುವ ಕೆಲಸ ಮಾಡಬೇಡಿ ಎಂದರು.
ಅರಣ್ಯ ಹಕ್ಕು ಭೂ ಕಾಯ್ದೆಯ ವಿಷಯದಲ್ಲಿ 25 ವರ್ಷಕ್ಕೆಮಿತಿ ಇಳಿಸುವುದಾಗಿ ಬಿಜೆಪಿಯವರು ಹೇಳಿದ್ದರು. ಅದನ್ನು ಮಾಡಿದ್ರಾ? ಕೇಂದ್ರದ ರೈತ ವಿರೋಧಿ ಧೋರಣೆಯೇ ಮುಳುಗಡೆ ರೈತರ ಸಮಸ್ಯಗೆ, ಅರಣ್ಯ ಹಕ್ಕು ಕಾಯ್ದೆ ಬಗೆಹರಿಯದಿರಲು ಕಾರಣ. ರಾಜ್ಯ ಸರ್ಕಾರ ತನ್ನ ಮಿತಿಯೊಳಗಡೆ ಏನೆಲ್ಲ ಮಾಡಬೇಕೋ ಅದನ್ನು ಪ್ರಮಾಣಿಕ ಪ್ರಯತ್ನ. ಮಾಡಿದ್ದೇವೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಸಂಪೂರ್ಣ ಸಮಸ್ಸೆ ಬಗೆಹರಿಸುತ್ತೇವೆ ಎಂದರು.
ಪಾದಯಾತ್ರೆ ನಾನು ಶುರು ಮಾಡಿದಾಗ, 15 ದಿನಗಳಲ್ಲಿ ಬಗೆಹರಿಸುವಯದಾಗಿ ನೀವೇ ಭರವಸೆ ಕೊಟ್ಟವರು. ಅಲ್ಲಿಂದ ಮುಂದೇನು ಆಯ್ತು? ಅದೆನ್ನೆಲ್ಲ ಮರೆತಿಲ್ಲ ಎಂದರು.
ಶಿವಮೊಗ್ಗಕ್ಕೆ ಹತ್ತಿರದಲ್ಲಿಯೇ ನೂರಾರು ಎಕರೆ ಡಿ ನೋಟಿ ಪೈ ಮಾಡಿಸಿಕೊಂಡವರಿಗೆ ಈ ಶರಾವತಿ ಮುಳುಗಡೆ ಸಂತ್ರಸ್ಥರ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ತಿಳಿಸಿದರು.
ಅಭೂತಪೂರ್ವ ಬೆಂಬಲ:
ಕಳೆದ 15 ರಂದು ನಾವು ನಿರೀಕ್ಷೆ ಮಾಡದ ರೀತಿಯಲ್ಲಿ ಜನರು ಅತೀ ದೊಡ್ಡ ಸಂಖ್ಯೆಯಲ್ಲಿ ಬಂದು ಗೀತಾ ಶಿವರಾಜ್ ಕುಮಾರ್ ಅವರ ಮೇಲೆ ಪ್ರೀತಿ ತೋರಿರುವ ಇದು ವಿಶೇಷವಾಗಿದೆ. ಹಾಗೆಯೇ ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಬಂದಿದ್ದು ಕಾರ್ಯಕರ್ತರಲ್ಲಿ ದೊಡ್ಡ ಉತ್ಸಾಹ ಮೂಡಿದೆ. ಗೆಲ್ತೇವೆ ಎನ್ನುವುದು ಈಗ ಗೆದ್ದೆ ಗೆಲ್ತೇವೆ ಎನ್ನುವ ವಿಶ್ವಾಸ ಹೆಚ್ಚಾಗಿದೆ ಎಂದರು.
ಗ್ಯಾರೆಂಟಿ ಘೋಷಣೆಗಳನ್ನು ಜಾರಿಗೆ ತಂದ ನೈತಿಕತೆಯ ಮೇಲೆ ಗೆದ್ದೇ ಗೆಲ್ತೇವೆ ಎನ್ನುವ ನಂಬಿಕೆ ಇದೆ. ನಾವು ಪ್ರಚಾರ ನಡೆಸಿದ ಕಡೆಗಳಲ್ಲಿ ಜನರು ದೊಡ್ಡ ಸಂಖ್ಯೆಯಲ್ಲಿ ಸೇರುತ್ತಿರುವುದು ಶುಭ ಸೂಚನೆ ಸಿಕ್ಕಿದೆ. ಐದು ಗ್ಯಾರೆಂಟಿ ಗಳು ನಮ್ಮ ಕೈ ಹಿಡಿದೇ ಹಿಡಿಯುತ್ತದೆ. ಶಿವಮೊಗ್ಗದ ಲೋಕಸಭಾ ಕ್ಷೇತ್ರದ
7 ರಿಂದ 8 ಲಕ್ಷ ಜನರಿಗೆ ಗ್ಯಾರೆಂಟಿ ಯೋಜನೆ ಸಿಕ್ಕಿದೆ ಎಂದರು.
ರೈತರಿಗೆ ಬರ್ಜರಿ ಕೊಡುಗೆ ಬರವಸೆ
ರೈತರಿಗೆ 5 ಲಕ್ಷ ಬೆಳೆ ಸಾಲ ನೀಡುವಂಹವರು ಹಣಕಾಸಿನ ಚರ್ಚೆ ಮಾಡುವ ವಿಪಕ್ಷಗಳು ಇದನ್ನು ತಿಳಿದುಕೊಳ್ಳಬೇಕು. ಅದೇನಂದ್ರ, 500 ರಿಂದ 600 ಕೋಟಿ ಬಡ್ಡಿ ಮನ್ನಾ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಿದ ಬಹುದೊಡ್ಡ ಸಹಕಾರ. ವಿಶೇಷವಾಗಿ ಸಾಲ ಕೊಡುವಾಗ ಜಿಎಸ್ ಟಿ ಅರ್ಧದಕ್ಕಷ್ಟು ಕಟ್ ಆಗುತ್ತೆ ಆದಾಗ್ಯೂ ನೀವು ಹೇಗೆ ರೈತರ ಪರ. ಈ ನಿಟ್ಟಿನಲ್ಲಿ ಇಂಡಿಯಾ ಒಕ್ಕೂಟ ರೈತರ ಸಾಲದ ಮೇಲಿನ ಜಿಎಸ್ ಟಿ ಮನ್ನಾ ಮಾಡುವುದಾಗಿ ಹೇಳಿದೆ. ಇವೆಲ್ಲವೂ
ಬಿಜೆಪಿಯವರ ಬಗ್ಗೆ ನನಗೆ ನಗು ಬರುತ್ತದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಕೆಪಿಸಿಸಿ ಮುಖ್ಯ ವಕ್ತಾರ ಆಯನೂರು ಮಂಜುನಾಥ್, ಪ್ರಮುಖರಾದ ಎಸ್.ಕೆ. ಮರಿಯಪ್ಪ, ರಮೇಶ್,ಹೆಚ್.ಎಲ್ ಷಡಾಕ್ಷರಿ, ಜಿಡಿ ಮಂಜುನಾಥ್, ರವಿಕುಮಾರ್ ದೀರರಾಜ್ ಹೊನ್ನವಿಲೆ, ಕೆಎಸ್ ಶಶಿ, ಜಿ ಪದ್ಮನಾಭ್, ಶಿಜು ಪಾಶಾ, ಮೋಹನ್ ಹಾಗೂ ಇತರರಿದ್ದರು.