ಹೊಸನಗರ: ಕೇಂದ್ರ ಪ್ರದಾನಮಂತ್ರಿಯವರ ಕನಸಿನ ಕೂಸು ಜನೌಷಧಿ ಕೇಂದ್ರದಲ್ಲಿ ಬಡವರಿಗೆ ಅನುಕೂಲವಾಗುವ ದೃಷ್ಠಿಯಿಂದ ಮುದ್ರಾಂಕಿತಗೊಂಡ ಕಡಿಮೆ ದರದ ಔಷಧಿ ಮಾತ್ರೆಗಳನ್ನು ಮಾರಾಟ ಮಾಡುವುದರ ಜೊತೆಗೆ ಇತರೆ ಔಷಧಿ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದಾರೆ? ಎಂದು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ಗಳಿಗೆ ಹಾಗೂ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಈ ಹಿಂದೆಯೇ ಮನವಿ ನೀಡಿದ್ದರೂ ಎನೂ ಪ್ರಯೋಜನವಾಗಿಲ್ಲ ಎಂದು ಹೇಳಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ವ್ಯವಹಾರ ನಡೆಸುತ್ತಿರುವ ಪ್ರದಾನಮಂತ್ರಿ ಬಾರತೀಯ ಜನೌಷಧಿ ಕೇಂದ್ರಗಳಲ್ಲಿ ಭಾಜ.ಪ( ಭಾರತೀಯ ಜನೌಷಧಿ ಪರಿಯೋಜನೆ) ಮೊಹರಿಲ್ಲದ ಅಸಂಖ್ಯಾತ ಔಷಧಿಗಳನ್ನು ಅವ್ಯಾಹತವಾಗಿ ಮಾರಾಟ ಮಾಡುತ್ತಿದ್ದು ಇದು ಜನೌಷಧಿ ಸಂಬಂದಪಟ್ಟ ಪ್ರಾದಿಕಾರದ ಜೊತೆ ಮಾಡಿಕೊಂಡ ಒಪ್ಪಂದದ ಸ್ವಷ್ಟ ಉಲ್ಲಂಘನೆಯಾಗಿರುತ್ತದೆ.
ಈಗಾಗಲೇ ಹಲವು ಬಾರಿ ಈ ಮೇಲ್ಕಂಡ ವಿಚಾರಕ್ಕೆ ಸಂಬಂದಪಟ್ಟ ಇಲಾಖಾ ನೋಡಲ್ ಅಧಿಕಾರಿಗಳಿಗೆ ಜಿಲ್ಲಾ ಸಂಘ ಮನವಿ ನೀಡಿದೆ. ಕಾರ್ಯದರ್ಶಿಗಳಿಂದ ಸೂಕ್ತ ಕ್ರಮ ಜರುಗಿಸುವುದಾಗಿ ಉತ್ತರ ಪಡೆದುಕೊಳ್ಳಲಾಗಿದೆ ಆದರೇ ಇಲ್ಲಿಯವರೆವಿಗೆ ಯಾವುದೇ ಫಲಿತಾಂಶ ಲಭ್ಯವಾಗಿಲ್ಲ
ನಮ್ಮ ರಾಜ್ಯ ಸಂಘ, ಜಿಲ್ಲಾ ಸಮಗದ ದೂರಿಗೆ ಇತ್ತಿಚೇಗೆ ಕೇಂದ್ರ ಸರ್ಕಾರದ ರಾಸಾಯನಿಕದ ಇಲಾಖೆ ಅಧೀನ ಕಾರ್ಯದಶಿಗಳಿಂದ ಸೂಕ್ತ ಕ್ರಮದ ಭರವಸೆಯ ಪತ್ರವನ್ನು ಪಡೆಯಲಾಗಿದ್ದು ಭಾ.ಜ.ಪ, ಮೊಹರಿಲ್ಲದ ಯಾವುದೇ ಔಷಧಿಗಳನ್ನು ಮತ್ತು ಸಂಬಂದಪಟ್ಟ ಪ್ರಾಧಿಕಾರದ ಅನುಮತಿ ಇಲ್ಲದೇ ಯಾವುದೇ ಔಷಧಿಗಳನ್ನು ಮಾರಾಟ ಮಾಡಬಾರದೆಂದು ಆದೇಶವನ್ನು ಪತ್ರಮುಖೇನ ತಿಳಿಸಲಾಗಿದ್ದರೂ ಪುನ-ಪುನ ಜನೌಷಧಿ ಕೇಂದ್ರಗಳು ತಪ್ಪು ಮಾಡುತ್ತಿದೆ ಇದಕ್ಕೆ ಸೂಕ್ತ ಕಾನೂನು ಕ್ರಮ ಜಾರುಗಿಸಲೀ ತಪ್ಪಿತಸ್ಥರಿಗೆ ಶಿಕ್ಷೆಯಾಗುವುದರ ಜೊತೆಗೆ ಪ್ರದಾನಮಂತ್ರಿಯವರು ಬಡವರಿಗಾಗಿ ನೀಡುತ್ತಿರುವ ಔಷಧಿಗಳನ್ನು( ಜನೌಷಧಿಗಳನ್ನು) ಮಾತ್ರ ಮಾರಾಟ ಮಾಡುವಂತಾಗಲೀ
ಹೆಚ್.ಎಸ್.ನಾಗರಾಜ್