ಶಿವಮೊಗ್ಗ, ಏ.14:
ಎದುರಾಳಿಗಳಿಗೆ ಸೋಲಿನ ಭೀತಿಯಿಂದ ನನ್ನನ್ನ ಡಮ್ಮಿ ಎನ್ನುತ್ತಿದ್ದಾರೆ, ಎದುರಾಳಿ ಯಾರು? ಯಾರು ನಮಗೆ ಪ್ರತಿಸ್ಪರ್ಧಿ ಅಂತ ಯೋಚಿಸೊಲ್ಲ. ಮತದಾರರು ತುಂಬು ಹೃದಯದ ಶುಭ ಹಾರೈಕೆ ನೀಡುತ್ತಿದ್ದಾರೆ. ನಾ ಗೆಲ್ಲೊದು ಖಚಿತ ಎಂದು ಗೀತ ಶಿವರಾಜ್ ಕುಮಾರ್ ತಿಳಿಸಿದರು.
ಇವತ್ತಿಗೆ 12 ನೇ ದಿನಗಳ ಪ್ರಚಾರ ಮುಗಿದಿದೆ. ಭದ್ರಾವತಿ, ಶಿವಮೊಗ್ಗ ಗ್ರಾಮಾಂತರ, ಶಿಕಾರಿಪುರ, ಸಾಗರ, ಸೊರಬ, ಬೈಂದೂರು, ಸೊರಬದಲ್ಲಿ ಸಭೆ ನಡೆಸಿ ಪ್ರಚಾರ ನಡೆಸಿದ್ದೇವೆ ಎಂದು ಕಾಂಗ್ರೆಸ್ ನ ಅಭ್ಯರ್ಥಿ ಗೀತ ಶಿವರಾಜ್ ಕುಮಾರ್ ಇಂದು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜನ ಹಲವಾರು ಮನವಿ ನೀಡಿದ್ದಾರೆ ಹೆಚ್ಚಾಗಿ ನೀರು ಮತ್ತು ವಿದ್ಯುತ್ ಕೊರತೆ ಬಗ್ಗೆ ದೂರುಗಳಿವೆ. ಬರದಲ್ಲಿ ನೀರು ಸಮಸ್ಯೆಯಾಗಿದೆ. ಲೋಡ್ ಶೆಡ್ಡಿಂಗ್ ಆಗ್ತಾ ಇದೆ. ಮಳೆ ಕೊರತೆಯ ಬಗ್ಗೆ ಜನ ಮಾತನಾಡುತ್ತಿದ್ದಾರೆ.
ಕಳೆದ ಚುನಾವಣೆಗೂ ಈಗ ವ್ಯತ್ಯಸವಿತ್ತು. ಈಗ ನೆಗೆಟೀವ್ ವೈಬ್ಸ್ ಕಾಣ್ತಾ ಇಲ್ಲ. ಕಳೆದ ಬಾರಿ ನೆಗೆಟಿವ್ ವೈಬ್ಸ್ ಕಾಣ್ತಾ ಇತ್ತು. ನಾನು ಗೆದ್ದ ಮೇಲೆ ಶಿವಮೊಗ್ಗದಲ್ಲಿಯೇ ಇರುತ್ತೇವೆ. ಶಿವಮೊಗ್ಗ ವಿನೋಬ ನಗರ ಮತ್ತು ಕುಬಟೂರಿನಲ್ಲೂ ಮನೆಗಳಿವೆ. ಹಿಂದೆ ಮಕ್ಕಳು ಸಣ್ಣರಿದ್ದರು. ಈಗ ಎಲ್ಲ ದೊಡ್ಡವರಾಗಿದ್ದಾರೆ. ಜವಬ್ದಾರಿ ಕಡಿಮೆ ಇದೆ. ಸಮಾಜ ಸೇವೆ ಮಾಡುವ ಹಂಬಲವಿದೆ ಎಂದರು.
ಮೋದಿ ಅಲೆ ಜಿಲ್ಲೆಯಲ್ಲಿ ಕಾಣ್ತಾ ಇಲ್ಲ. ಎದುರಾಳಿ ಯಾರೆ ಇದ್ದರು ನನಗೆ ಭಯವಿಲ್ಲ. ನನ್ನ ಕೆಲಸ ಮಾಡುವೆ ಎದುರಾಳಿ ಬಗ್ಗೆ ತಲೆಕೆಡೆಸಿಕೊಂಡಿಲ್ಲ. ಹೋದ ಕಡೆಯಲ್ಲ ಮಹಿಳೆಯರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ನಾನು ಡಮ್ಮಿ ಕ್ಯಾಂಡಿಡೇಟ್ ಅಂತ ಎದುರಾಳಿಗಳು ಭಯದಿಂದ ಹೇಳ್ತಾ ಇದ್ದಾರೆ. ಸೋಲಿನ ಭಯ ಎದುರಾಳಿಗೆ ಕಾಡ್ತಾ ಇದೆ ಹಾಗಾಗಿ ಅವರ ಹೇಳಿಕೆ ಬೇರೆಯಾಗ್ತಾ ಇದೆ ಎಂದರು.
ಶಿವರಾಜ್ ಕುಮಾರ್ ಡಿಕೆಶಿ, ಸಚಿವ ಮಧು ಬಂಗಾರಪ್ಪ ನಾಳೆಯ ನಾಮಪತ್ರ ಹಾಕುವ ವೇಳೆ ಉಪಸ್ಥಿತರಿರುತ್ತಾರೆ.. ಅತಿ ಹೆಚ್ಚು ಜನ ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾಗಲಿದ್ದಾರ. ಈ ಬಗ್ಗೆ ಸವಿವ ಮಧು ಬಂಗಾರಪ್ಪ ಮಾತನಾಡಿ 45 ಸಾವಿರ ಜನ ಸೇರುವ ನಿರೀಕ್ಷೆ ಇದೆ. ರಾಮಣ್ಣಶ್ರೇಷ್ಠಿ ಪಾರ್ಕ್ ನಿಂದ ಮೆರವಣಿಗೆ ಗೋಪಿ ವೃತ್ತದಲ್ಲಿ ಬಹಿರಂಗ ಸಭೆ ನಡೆಯಲಿದೆ. ನಂತರ ನಾಮಪತ್ರ ಸಲ್ಲಿಕೆಯಾಗಲಿದೆ ಎಂದರು.
ನನ್ನ ಗೆಲುವಾದಲ್ಲಿ ವಾಟರ್, ರಸ್ತೆ, ಹಕ್ಕುಪತ್ರದ ಹಂಚಿಕೆ ಬಗ್ಗೆ ಒತ್ತು ನೀಡಲಾಗುವುದು. ಡ್ಯಾಂ ಕಟ್ಟಲಾಗಿದೆ ಹೊರಜಿಲ್ಲೆಗೆ ನೀರು ಹಂಚಲಾಗುತ್ತದೆ. ಮಂಗನ ಹಾವಳಿ ಮಂಗನ ಕಾಯಿಲೆ ಬಗ್ಗೆ ನಿಮ್ಮ ಯೋಚನೆ ಏನು ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಧು ಬಂಗಾರಪ್ಪ, ನೀರಾವರಿಗೆ ಹೆಚ್ಚು ಒತ್ತು ನೀಡಲಾಗಿದೆ. ಮಂಗನ ಕಾಯಿಲೆಯ ವ್ಯಾಕ್ಸಿನ್ ಗೆ ಖಾಸಗಿಯವರು ಬರ್ತಾ ಇಲ್ಲ. ಆದರೆ ಕೇಂದ್ರ ಸರ್ಕಾರದ ಸಹಾಯದಿಂದ ವ್ಯಾಕ್ಸಿನ್ ತಯಾರಿಸಿ ಹಂಚುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಶರಾವತಿ ನದಿಯನ್ನ ಬೆಂಗಳೂರಿಗೆ ಸರಬರಾಜಿವನ ಬಗ್ಗೆ ಮಾತನಾಡಿದ ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲೆಯಲ್ಲಿ ನೀರು ಹಂಚಿ ನಂತರ ಬೆಂಗಳೂರಿಗೆ ಸರಬರಾಜು ಮಾಡಲು ಯೋಚಿಸಲಾಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ಪ್ರಸನ್ನಕುಮಾರ್ ಹಾಗೂ ಇತರರು ಇದ್ದರು.