ಶಿವಮೊಗ್ಗ, ಏ.10
ದಿನಾಂಕ 7.05.2024 ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡ ನೂರರಷ್ಟು ಮತದಾನ ಆಗಬೇಕು ಎಂಬ ನಿಟ್ಟಿನಲ್ಲಿ ಶಿಕಾರಿಪುರ ಪುರಸಭೆ ವತಿಯಿಂದ ವಿವಿಧ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸ
ಮೂಲಕ ಮತದಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಶಿಕಾರಿಪುರ ಪುರಸಭೆಯ ವ್ಯವಸ್ಥಾಪಕರಾದ ರಾಜಕುಮಾರ್ ಅವರು ತಿಳಿಸಿದರು.
ಮತದಾನ ನಡೆಯುವ ದಿನಾಂಕದವರೆಗೂ ಶಿಕಾರಿಪುರ ಪಟ್ಟಣದ ಎಲ್ಲಾ ವಾರ್ಡ್ಗಳಲ್ಲಿಯೂ ಪ್ರತಿದಿನ ಮತದಾನ ಜಾಗೃತಿ ವಾಹನವು ಸಂಚರಿಸಲಿದ್ದು ಸಾರ್ವಜನಿಕರು ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳುವಂತೆ ಎಂಸಿಸಿ ಅಧಿಕಾರಿ ವೀರಭದ್ರಯ್ಯ ತಿಳಿಸಿದರು.
ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿ ಪರಶುರಾಮ್ ಸೈಯದ್ ನಮಾಜ್, ಅರುಣ್ ಕುಮಾರ್, ಹೊನ್ನಾಳಿ ಸುರೇಶ್, ಸಿಬ್ಬಂದಿಗಳಾದ ಮೋಹನ್, ರವಿ, ದೇವರಾಜ್. ಸುರೇಶ್ ರಾಘವೇಂದ್ರ ಸೇರಿದಂತೆ ಮತಗಟ್ಟೆ ಸಂಖ್ಯೆ 138, 139 ರ ಮತದಾರರು ಹಾಜರಿದ್ದರು.