ಶಿವಮೊಗ್ಗ,ಏ.09:
ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಬಿವೈ ರಾಘವೇಂದ್ರ ಅವರನ್ನು ನಿಲ್ಲಿಸಿದರೆ, ಪಕ್ಷವನ್ನು ಸರಿಪಡಿಸಬೇಕು ಎಂದು ಬಂಡಾಯ ಸ್ಪರ್ಧೆಯಲ್ಲಿರುವ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅವರು ಮುಖಾಮುಖಿಯಾಗಿ ಒಂದೇ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಸನ್ನಿವೇಶ ಇಂದು ಸೃಷ್ಟಿಯಾಗಿತ್ತು.
ಭಾರತೀಯ ಜನತಾ ಪಕ್ಷದ ಇಬ್ಬಗೆಯ ಬಂಡಾಯದ ಕಹಳೆಗೆ ಆರ್ ಎಸ್ ಎಸ್ ಸಕಾರಾತ್ಮಕ ವೇದಿಕೆಯೊಂದನ್ನು ರೂಪಿಸಿ ಮತ್ತೆ ಪಡಿಸುವ ಕೆಲಸಕ್ಕೆ ಕೈಹಾಕಬಹುದು ಎನ್ನುವಂತಹ ಕಾಣದ ಶಕ್ತಿ ಕೆಲಸ ಮಾಡುತ್ತಿದೆ ಎಂದು ಹೇಳಲಾಗುತ್ತದೆ.
ಇಂದು ಬೆಳಗ್ಗೆ ಬಿವೈ ರಾಘವೇಂದ್ರ ಹಾಗೂ ಕೆ ಎಸ್ ಈಶ್ವರಪ್ಪ ಪ್ರತಿಸ್ಪರ್ಧಿಗಳಾಗಲಿ ಕಾಣಿಸಿಕೊಳ್ಳದೆ ಆರ್ ಎಸ್ ಎಸ್ ಸ್ವಯಂಸೇವಕರಾಗಿ ಕಾಣಿಸಿಕೊಂಡಿದ್ದು ವಿಶೇಷ. ಇದು ಮುಂದಿನ ದಿನಮಾನಗಳ ಒಳಿತಿಗೆ ಕಾರಣವೆನ್ನಲಾಗುತ್ತಿದೆ.
ನಾಮಪತ್ರ ಸಲ್ಲಿಕೆಯ ಅವಧಿಯಲ್ಲಿ ಈ ಸತ್ಯ ಬಹಿರಂಗವಾಗುವ ಸಾಧ್ಯತೆ ನಿಚ್ಚಳವಾಗಿದೆ. ಈಶ್ವರಪ್ಪ ಬಂಡಾಯವೂ ಅಥವಾ ಅವರ ಬೇಡಿಕೆ ಈಡೇರಿಕೆಯೋ ಎಂಬುದನ್ನು ಕಾದು ನೋಡಬೇಕಿದೆ.
ಆದಿಚುಂಚನಗಿರಿ ಶಾಲೆ ಆವರಣದಲ್ಲಿ ಯುಗಾದಿ ಉತ್ಸವದ ಹಿನ್ನಲೆಯಲ್ಲಿ ಇಂದು ನಡೆದ ಸಂಸ್ಥಾಪನಾ ದಿನಾಚರಣೆ ಇಬ್ಬರೂ ಕಾಣಿಸಿಕೊಂಡಿದ್ದಾರೆ.
ಆರ್ ಎಸ್ ಎಸ್ ನಿಂದ ಕಾರ್ಯಕ್ರಮ ಆಯೋಜನೆಗೊಂಡ ಈ ಕಾರ್ಯಕ್ರಮದಲ್ಲಿ, ಶಿವಮೊಗ್ಗ ಲೋಕಸಭಾ ಚುನಾವಣೆಯ ಸ್ಪರ್ಧಿಗಳಾದ ಮಾಜಿ ಡಿಸಿಎಂ ಈಶ್ವರಪ್ಪ ಮತ್ತು ಸಂಸದ ರಾಘವೇಂದ್ರ ಭಾಗಿಯಾಗಿರುವುದು ಅಚ್ಚರಿ ಮೂಡಿಸಿದೆ.
ಆರ್ ಎಸ್ ಎಸ್ ನ ಮುಖಂಡರು ಮತ್ತು ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಭಾಗಿರುವ ಕಾರ್ಯಕ್ರಮದಲ್ಲಿ ಪ್ರತಿಸ್ಪರ್ಧಿಗಳು ಭಾಗಿರುವುದು ಕುತೂಹಲ ಮೂಡಿಸಿದೆ.
ಇದೇ ಕಾರ್ಯಕ್ರಮದಲ್ಲಿ ಸಂಸದ ರಾಘವೇಂದ್ರ. ನಗರ ಬಿಜೆಪಿ ಶಾಸಕ ಚನ್ನಬಸಪ್ಪ ಕೂಡಾ ಭಾಗಿಯಾಗಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿ ಆಗಿ ಸ್ಪರ್ಧಿಸುತ್ತಿರುವ ಈಶ್ವರಪ್ಪ ಜುಬ್ಬಾ, ಪೈಜಾಮದೊಂದಿಗೆ ತಲೆಗೆ ಆರ್ ಎಸ್ ಎಸ್ ಟೋಪಿ ಧರಿಸಿ ಭಾಗಿಯಾದರೆ, ಸಂಸದ ರಾಘವೇಂದ್ರ ಗಣವೇಷದಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದಾರೆ.
ಈ ವೇಳೆ ಮಾತನಾಡಿದ ಸಂಸದ ರಾಘವೇಂದ್ರ ಯುಗಾದಿ ಹಬ್ಬದ ಪ್ರಯುಕ್ತ ಆರ್ ಎಸ್ ಎಸ್ ನಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಂಸದನಾಗಿ ಭಾಗಿಯಾಗಿಲ್ಲ. ನಾನು ಒಬ್ಬ ಸ್ವಯಂ ಸೇವಕನಾಗಿ ಭಾಗಿ ಆಗಿದ್ದೇನೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನಿನ್ನೆ ಮೊನ್ನೆ ಎರಡು ದಿನ ಶಿಕಾರಿಪುರ ದಲ್ಲಿ ನನ್ನ ಪರ ಪ್ರಚಾರ ಮಾಡಿದ್ದಾರೆ. ಶಿಕಾರಿಪುರದ ಶಾಸಕ ಆಗಿರುವ ವಿಜಯೇಂದ್ರ ಕಡಿಮೆ ಅವಧಿಯಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು.
ಶಿಕಾರಿಪುರ ಕ್ಷೇತ್ರದಲ್ಲೂ ಹೆಚ್ಚು ಮತಗಳು ಬಿಜೆಪಿಗೆ ದೊರೆಯಲಿದೆ. ಬಿಎಸ್ ವೈ ಅವರಿಗೆ ರಾಜಕೀಯವಾಗಿ ಜನ್ಮ ಕೊಟ್ಟ ಕ್ಷೇತ್ರ ಆಗಿದೆ. ಶಿಕಾರಿಪುರದಲ್ಲಿ ವಿಜಯೇಂದ್ರ ಅವರು 16 ಕ್ಕೂ ಹೆಚ್ಚು ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದಾರೆ. ಮೋದಿ ನೇತೃತ್ವದಲ್ಲಿ ಬಿಜೆಪಿಗೆ 400 ಗುರಿ ಇಟ್ಟುಕೊಂಡಿದ್ದೇವೆ.
ಯುಗಾದಿ ಹೇಗೆ ಮರಳಿ ಬರ
ಲಿ ಹಾಗೇ ಮತ್ತೆ ಮತ್ತೆ ಮೋದಿ ಪ್ರಧಾನಿ ಆಗಲಿ ಈ ನಿಟ್ಟಿನಲ್ಲಿ ಬಿಜೆಪಿ ಪಕ್ಷವು ಚುನಾವಣೆ ಗುರಿ ಇಟ್ಟುಕೊಂಡಿದೆ ಎಂದರು.
ಮಾಧ್ಯಮಗಳಿಗೆ ಹೇಳಿಕೆ ನೀಡಿದ ಕೆಎಸ್ ಈಶ್ವರಪ್ಪ,ರಾಷ್ಟ್ರೀಯ ಸ್ವಯಂಸೇವಕ ಸಂಘ ಇಂದು ಜನ್ಮ ತಾಳಿದ ದಿನವಾಗಿದೆ. ಹಿಂದೂ ಸಮಾಜಕ್ಕೆ ಯುಗಾದಿ ಹಬ್ಬ ವಿಶೇಷ ಹಬ್ಬವಾಗಿದೆ. ಎಲ್ಲರೂ ಒಂದಾಗಬೇಕು ಎಂಬ ಸ್ಪೂರ್ತಿ ಕೊಡುವ ಯುಗಾದಿ ಹಬ್ಬದ ಕಾರ್ಯಕ್ರಮದಲ್ಲಿ ಸ್ವಯಂಸೇವಕನಾಗಿ ಪಾಲ್ಗೊಂಡಿದ್ದೇನೆ ಎಂದು ಅಚ್ಚರಿ ಮೂಡಿಸಿದ್ದಾರೆ. ಮುಂದಿನ ದಿನಮಾನಗಳಲ್ಲಿ ಈ ಗೊಂದಲ ಬಗೆಹರಿಸುವಲ್ಲಿ ಆರ್ ಎಸ್ ಎಸ್ ಪ್ರಮುಖ ಪಾತ್ರ ವಹಿಸುತ್ತದೆಯೇ? ಕಾದು ನೋಡಬೇಕಿದೆ