ಶಿವಮೊಗ್ಗ,ಏ.೦೪:
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರಿಗೆ ಬೆಂಬಲ ಸೂಚಿಸಿ ಜೆಡಿಎಸ್ ಶಿವಮೊಗ್ಗ ನಗರ ಘಟಕದ ವತಿಯಿಂದ ಏ.೫ರ ನಾಳೆ ಬೆಳಿಗ್ಗೆ ೧೧ಕ್ಕೆ ದೈವಜ್ಞ ಕಲ್ಯಾಣ ಮಂದಿರದಲ್ಲಿ ಬೂತ್ ಮತ್ತು ವಾರ್ಡ್ ಅಧ್ಯಕ್ಷರ, ಮುಖಂಡರ ಹಾಗೂ ಕಾರ್ಯಕರ್ತರ
ಸಭೆಯನ್ನು ಆಯೋಜಿಸಲಾಗಿದೆ ಎಂದು ಶಿವಮೊಗ್ಗ ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್ ತಿಳಿಸಿದರು.
ಅವರು ಇಂದು ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಸಭೆಯಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಕೋರ್ ಕಮಿಟಿ ಸದಸ್ಯ ಕೆ.ಬಿ.ಪ್ರಸನ್ನಕುಮಾರ್, ಶಾಸಕಿ ಶಾರದ ಪೂರ್ಯನಾಯ್ಕ್,
ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಹಾಗೂ ಮುಖಂಡರು ಭಾಗವಹಿಸಲಿ ದ್ದಾರೆ. ಈ ಸಭೆಗೆ ಬಿಜೆಪಿ ಉಸ್ತುವಾರಿ, ಜಿಲ್ಲಾಧ್ಯಕ್ಷರಿಗೆ, ನಗರಾಧ್ಯಕ್ಷರಿಗೆ ಹಾಗೂ ಮುಖಂಡರಿಗೆ ಆಹ್ವಾನ ನೀಡಲಾಗಿದ್ದು, ಅವರು ಸಹ ಭಾಗವಹಿ ಸಲಿದ್ದಾರೆ. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಮತ್ತು ಮುಖಂಡರು
ಭಾಗವಹಿಸುವ ನಿರೀಕ್ಷೆ ಇದೆ ಎಂದರು ರಾಜ್ಯದಲ್ಲಿ ಜೆಡಿಎಸ್-ಬಿಜೆಪಿಯೊಂದಿಗೆ ಪಕ್ಷ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ. ಎರಡು ಪಕ್ಷದವರು ಒಟ್ಟಿಗೆ ಸೇರಿ ಮತ ಯಾಚಿಸಲಾಗುವುದು ಎಂದ ಅವರು, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬೆಂಬಲಿತ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರಿಗೆ ಸುಮಾರು ೧.೫೦ಲಕ್ಷಕ್ಕೂ ಹೆಚ್ಚು ಮತ ಬರುವಂತೆ ಒಟ್ಟಿಗೆ ಸೇರಿ ಮತಯಾಚಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರುಗಳಾದ ವಿನಯ್, ಬೊಮ್ಮನಕಟ್ಟೆ ಮಂಜುನಾಥ್, ಗಂಧದಮನೆ ನರಸಿಂಹ, ಸಿದ್ದಪ್ಪ, ಗೋವಿಂದಪ್ಪ, ಶ್ಯಾಮ್, ಕೃಷ್ಣಪ್ಪ, ದಯಾನಂದ್, ಸಂಜಯ್ಕಶ್ಯಪ್, ಲೋಹಿತ್, ಚಂದ್ರು, ಮೊಹಮ್ಮದ್ ರಫಿಕ್, ಮೊಹಮ್ಮದ್ ನಿಹಾಲ್, ಗೋವಿಂದರಾಜ್ ಇನ್ನಿತರರು ಇದ್ದರು.