ಶಿವಮೊಗ್ಗ, ಜ.06:
ಶಿವಮೊಗ್ಗ ನಗರ ಹಾಗೂ ಭದ್ರಾವತಿ ಮತ್ತು ತೀರ್ಥಹಳ್ಳಿ ಯಲ್ಲಿ ಜೂಜಾಡುತ್ತಿದ್ದ ಸಾಕಷ್ಟು ಪ್ರಕರಣಗಳನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿಯ ಡಿಸಿಐಬಿ, ಸಿಇಎನ್ ಹಾಗೂ ಭದ್ರಾವತಿ ನಗರ ಪೊಲೀಸರ್ ಪತ್ತೆ ಹಚ್ಚಿ ಹಲವರನ್ನು ಬಂಧಿಸಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜ್ ಅವರು ದಾಳಿ ನಡೆಸಿ ಆರೋಪಗಳನ್ನು ಬಂಧಿಸಿದ ಪೊಲೀಸರನ್ನು ಅಭಿನಂದಿಸಿದ್ದಾರೆ.

DCIB ತಂಡದಿಂದ ದಾಳಿ

ಶಿವಮೊಗ್ಗ ನಗರದ ವಿನೋಬನಗರ ಪೊಲೀಸ್ ಠಾಣೆ, ತುಂಗಾನಗರ ಪೊಲೀಸ್ ಠಾಣೆ ಹಾಗೂ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಆರೋಪಿಗಳು ಕಾನೂನು ಬಾಹಿರವಾಗಿ ಮಟ್ಕಾ ಜೂಜಾಟ ಬರೆಯುತ್ತಿರುವ ಬಗ್ಗೆ ಬಂದ ಖಚಿತ ಬಾತ್ಮಿ ಮೇರೆಗೆ ಕುಮಾರಸ್ವಾಮಿ, ಪೊಲೀಸ್ ನಿರೀಕ್ಷಕರು, ಡಿಸಿಐಬಿ ವಿಭಾಗ ಹಾಗೂ ಸಿಬ್ಬಂದಿಗಳಾದ ಹೆಚ್.ಸಿ ಸತೀಶ್ ರಾಜ್, ಹಾಲಪ್ಪ ಹಾಗೂ ಪಿ.ಸಿ. ಚಂದ್ರಾನಾಯ್ಕ್, ಸಮೀವುಲ್ಲಾ ಮತ್ತು ವಸಂತರವರು ಗಳನ್ನೊಳಗೊಂಡ ಜಿಲ್ಲಾ ಪೊಲೀಸ್ ಕಛೇರಿಯ ಡಿಸಿಐಬಿ ತಂಡವು ಕಾರ್ಯಾಚರಣೆ ನಡೆಸಿ, ಒಟ್ಟು 04 ಜನ ಆರೋಪಿತರನ್ನು ವಶಕ್ಕೆ ಪಡೆದು ಆರೋಪಿತರಿಂದ ರೂ 45,245/- (ರೂಪಾಯಿ ನಲವತ್ತೈದು ಸಾವಿರದ ಎರಡುನೂರ ನಲವತ್ತೈದು) ನಗದು ಹಣ ಹಾಗೂ ಓ.ಸಿ. ಗೆ ಸಂಬಂಧಿಸಿದ ದಾಖಲೆಗಳನ್ನು ಅಮಾನತ್ತು ಪಡಿಸಿಕೊಂಡು, ಪ್ರತ್ಯೇಕ 04 ಪ್ರಕರಣಗಳನ್ನು ದಾಖಲಿಸಿ ಆರೋಪಿತರನ್ನು ದಸ್ತಗಿರಿ ಮಾಡಿ ಕ್ರಮ ಕೈಗೊಂಡಿದೆ ಕೆ.ಎಂ. ಶಾಂತರಾಜು, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ತಿಳಿಸಿದ್ದಾರೆ.

DCIB  INSPECTER KUMARASWAMY

ಪ್ರಕರಣದ ವಿವರ
ವಿನೋಬನಗರ ಪೊಲೀಸ್ ಠಾಣೆ
ಸ್ಥಳ : ಎಪಿಎಂಸಿ ಹತ್ತಿರದ ಸಾರ್ವಜನಿಕ ಸ್ಥಳ
ಆರೋಪಿ- ಇರ್ಫಾನ್ 24 ವರ್ಷ ವಾಸ ಜೆಪಿನಗರ ಶಿವಮೊಗ್ಗ.
ವಶಪಡಿಸಿಕೊಂಡ ಮಾಲು – ರೂ 15,040 /- (ರೂಪಾಯಿ ಹದಿನೈದು ಸಾವಿರದ ನಲವತ್ತು) ನಗದು ಹಣ

ತುಂಗಾನಗರ ಪೊಲೀಸ್ ಠಾಣೆ
ಸ್ಥಳ : ದ್ರೌಪದಮ್ಮ ಸರ್ಕಲ್ ಹತ್ತಿರದ ಸಾರ್ವಜನಿಕ ಸ್ಥಳ
ಆರೋಪಿತರು- ಇಮ್ರಾನ್ ಖಾನ್ 29 ವರ್ಷ ವಾಸ ಜೆಪಿನಗರ ಶಿವಮೊಗ್ಗ.
ವಶಪಡಿಸಿಕೊಂಡ ಮಾಲು – ರೂ 11,030 /- (ರೂಪಾಯಿ ಹನ್ನೊಂದು ಸಾವಿರದ ಮೂವತ್ತು) ನಗದು ಹಣ ಹಾಗೂ ಓಸಿ ಗೆ ಸಂಬಂಧಿಸಿದ ದಾಖಲೆಗಳು.
ದೊಡ್ಡಪೇಟೆ ಪೊಲೀಸ್ ಠಾಣೆ

ಸ್ಥಳಃ- ಗಾರ್ಡನ್ ಏರಿಯಾದ ಸಾರ್ವಜನಿಕ ರಸ್ತೆ ಆರೋಪಿತರು- ಕಾರ್ತಿಕ 26 ವರ್ಷ ವಾಸ ಶಿವಮೊಗ್ಗ ಟೌನ್, ವಶಪಡಿಸಿಕೊಂಡ ಮಾಲು – ರೂ 11,360 /- (ರೂಪಾಯಿ ಹನ್ನೊಂದು ಸಾವಿರದ ಮೂರುನೂರ ಅರವತ್ತು) ನಗದು ಹಣ ಹಾಗೂ ಓಸಿ ಗೆ ಸಂಬಂಧಿಸಿದ ದಾಖಲೆಗಳು.

ದೊಡ್ಡಪೇಟೆ ಪೊಲೀಸ್ ಠಾಣೆ
ಸ್ಥಳಃ- ಜಿಎಸ್.ಕೆ.ಎಂ ರಸ್ತೆಯ ಸಾರ್ವಜನಿಕ ಸ್ಥಳ
ಆರೋಪಿತರು- ವಾಖರ್ ಅಹಮದ್ 43 ವರ್ಷ ವಾಸ ಅಣ್ಣಾನಗರ ಶಿವಮೊಗ್ಗ
ವಶಪಡಿಸಿಕೊಂಡ ಮಾಲು – ರೂ 7,815 /- (ರೂಪಾಯಿ ಹನ್ನೊಂದು ಸಾವಿರದ ಎರಡು ನೂರ ಎಂಬತ್ತು) ನಗದು ವಶಪಡೆಯಲಾಗಿದೆ.

ಸಿಇಎನ್ ಪೊಲೀಸರ ದಾಳಿ

ಶಿವಮೊಗ್ಗ ನಗರದಲ್ಲಿ ಆರೋಪಿಗಳು ಕಾನೂನು ಬಾಹಿರವಾಗಿ ಮಟ್ಕಾ ಜೂಜಾಟ ಬರೆಯುತ್ತಿರುವ ಬಗ್ಗೆ ಬಂದ ಖಚಿತ ಬಾತ್ಮಿ ಮೇರೆಗೆ

ಗುರುರಾಜ್, ಪೊಲೀಸ್ ನಿರೀಕ್ಷಕರು, ಸಿಇಎನ್ ಪೊಲೀಸ್ ಠಾಣೆ ಶಿವಮೊಗ್ಗ, ಕೃಷ್ಣಮೂರ್ತಿ ಎಎಸ್‍ಐ, ವಿಜಯಾನಂದ ಎಎಸ್‍ಐ ಹಾಗೂ ಸಿಬ್ಬಂದಿಗಳಾದ ಹೆಚ್.ಸಿ ಚಂದ್ರಶೇಖರ್, ನಾಗರಾಜ್, ಚೂಡಾಮಣಿ, ಪ್ರಕಾಶ್, ಮತ್ತು ಸಿಪಿಸಿ ತಮ್ಮಣ್ಣ ಜಂಬರಗಿ ರವರುಗಳನ್ನೊಳಗೊಂಡ ತಂಡವು ಕಾರ್ಯಾಚರಣೆ ನಡೆಸಿ, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಆರೋಪಿತರಿಂದ ರೂ 15,000/- (ರೂಪಾಯಿ ಹದಿನೈದು ಸಾವಿರ) ನಗದು ಅಮಾನತ್ತು ಪಡಿಸಿಕೊಂಡು, ಪ್ರಕರಣಗಳನ್ನು ದಾಖಲಿಸಿ ಆರೋಪಿತರನ್ನು ದಸ್ತಗಿರಿ ಮಾಡಿ ಕ್ರಮ ಕೈಗೊಂಡಿದೆ ಎಂದು ಕೆ.ಎಂ. ಶಾಂತರಾಜು, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ತಿಳಿಸಿರುತ್ತಾರೆ.

ಪ್ರಕರಣಗಳ ವಿವರ

ತೀರ್ಥಹಳ್ಳಿ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳ
ಆರೋಪಿ- ಹರೀಶ್ ಎಂ ಜಿ 48 ವರ್ಷ ವಾಸ ಹಳೆಮಂಡ್ಲಿ ಶಿವಮೊಗ್ಗ
ವಶಪಡಿಸಿಕೊಂಡ ಮಾಲು – ರೂ 8300/- (ರೂಪಾಯಿ ಎಂಟು ಸಾವಿರದ ಮೂರುನೂರು) ನಗದು
ಬೊಮ್ಮನಕಟ್ಟೆಯ ಸಾರ್ವಜನಿಕ ಸ್ಥಳ
ಆರೋಪಿತರು- ಅರುಣ 38 ವರ್ಷ ವಾಸ ಬೊಮ್ಮನಕಟ್ಟೆ ಶಿವಮೊಗ್ಗ
ವಶಪಡಿಸಿಕೊಂಡ ಮಾಲು – ರೂ 6700 /- (ರೂಪಾಯಿ ಆರು ಸಾವಿರದ ಏಳು ನೂರು) ನಗದು ವಶಪಡಿಸಿ ಕೊಳ್ಳಲಾಗಿದೆ.

ಭದ್ರಾವತಿ ನಗರ ಪೊಲೀಸರಿಂದ ಬರ್ಜರಿ ಬೇಟೆ

ಭದ್ರಾವತಿ ನಗರದ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಹುತ್ತಾಕಾಲೋನಿಯ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಇಸ್ಪಿಟು ಜೂಜಾಟ ಆಡುತ್ತಿರುವ ಬಗ್ಗೆ ಬಂದ ಬಾತ್ಮಿಯ ಮೇರೆಗೆ

ಕೃಷ್ಣಮೂರ್ತಿ, ಡಿವೈಎಸ್.ಪಿ ಭದ್ರಾವತಿ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ, ರಾಘವೇಂದ್ರ ಕಾಂಡಿಕೆ, ಪೊಲೀಸ್ ನಿರೀಕ್ಷಕರು, ಭದ್ರಾವತಿ ನಗರ ವೃತ್ತ ರವರ ನೇತೃತ್ವದ, ಶ್ರೀಮತಿ ಭಾರತಿ ಎಸ್.ಎನ್, ಪಿಎಸ್ಐ ನ್ಯೂಟೌನ್ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ ಹೆಚ್.ಸಿ ರೂಪೇಶ್, ರವಿ, ಮಂಜುನಾಥ ಮತ್ತು ಸಿಪಿಸಿ ರವರಾದ ಬಸವರಾಜ್ ಎನ್, ಅಶೋಕ್, ಪಾಲಾಕ್ಷನಾಯ್ಕ, ಬಸವರಾಜ್ ರವರುಗನ್ನೊಳಗೊಂಡ ತಂಡವು ಕಾರ್ಯಾಚರಣೆ ನಡೆಸಿ
ಒಟ್ಟು 11 ಜನ ಆರೋಪಿತರನ್ನು ವಶಕ್ಕೆ ಪಡೆದು, ಆರೋಪಿತರಿಂದ ಜೂಜಾಟದಲ್ಲಿ ಪಣವಾಗಿಟ್ಟಿದ್ದ
ರೂ 10,060 ನಗದು ಹಾಗೂ ಇಸ್ಪೀಟು ಕಾರ್ಡ್ ಗಳನ್ನು ಅಮಾನತ್ತು ಪಡಿಸಿಕೊಂಡು, ಆರೋಪಿತರ ವಿರುದ್ಧ ಅಕ್ರಮ ಜೂಜಾಟ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ ಎಂದು ಎಸ್.ಪಿ. ಕೆ.ಎಂ. ಶಾಂತರಾಜು ತಿಳಿಸಿರುತ್ತಾರೆ.

By admin

ನಿಮ್ಮದೊಂದು ಉತ್ತರ

error: Content is protected !!